ಬೆಳಗಾವಿ, ಜೂ.6: ಮಾತು ಬಾರದ 22 ಹರೆಯದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ್ದಾರಿಂದ ನತದೃಷ್ಟ ಯುವತಿ ಗರ್ಭಿಣಿಯಾಗಿದ್ದು ರವಿವಾರ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ. ಯುವತಿಯನ್ನು ಮುಜಾವರ ಬೀದಿಯ ರಹವಾಸಿ ಎನ್ನಲಾಗಿದ್ದು, ಈಕೆಯ ಮುಗ್ಧತನ ಹಾಗೂ ಮಾತು ಬಾರದ್ದನ್ನು ಬಳಸಿಕೊಂಡು ಕಾಮುಕ ವ್ಯಕ್ತಿ ಯುವತಿಯನ್ನು ಬಲತ್ಕರಿಸಿದ್ದಾನೆ. ಮಾತು ಬಾರದ ಕಾರಣ ವ್ಯಕ್ತಿಗಳ ಹೆಸರು ಹೇಳಲಾಗದೆ ನಡೆದ ಘಟನೆಗೆ ಪರಿತಪಿಸುತ್ತಿರುವ ಮುಖ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಯುವತಿಯ ಪಾಲಕರ ವೃದ್ದ ಚಿಂತಾಕ್ರಾಂತರಾಗಿದ್ದಾರೆ. ಮುಗ್ದೆಯಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು. [...] [...more]
ಬೆಳಗಾವಿ, ಜೂ.4 ; ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಗ್ರಾಮದಲ್ಲಿ ಮನೆಯ ಹೊರಗೆ ಮಲಗಿಕೊಂಡಿದ್ದ ದಂಪತಿಗಳನ್ನು ಕೊಲೆ ಮಾಡಿ ಹಾಳು ಬಾವಿಗೆ ಎಸೆದುಹೋದ ಘಟನೆ ನಡೆದಿದೆ. ಜಾಲಿಕೊಪ್ಪ ಗ್ರಾಮದ ಗುರುಶಾಂತ ಹೂಗಾರ ಬಸವ್ವ ಹೂಗಾರ ಕೊಲೆಗೀಡಾದ ದಂಪತಿಗಳೆಂದು ಗುರುತಿಸಲಾಗಿದೆ. ಶಕೆಯನ್ನು ತಾಳಲಾರದೆ ಇಬ್ಬರು ಮನೆಯ ಹೊರಗೆ ಮಲಗಿಕೊಂಡ ಸಂದರ್ಭದಲ್ಲಿ ಅವರನ್ನು ಕಲ್ಲಿನಿಂದ ಜಜ್ಜಿ ಮಾರಕಾಸ್ತ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ನಂತರ ಇಬ್ಬರ ಶವಗಳನ್ನು ಗ್ರಾಮದ ಸಮೀಪದಲ್ಲಿರುವ ಹಾಳು ಬಾವಿಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೆ ಕಾರಣ ತಿಳಿದು [...] [...more]
ಬೆಳಗಾವಿ, ಜೂ.4: ಮಹಾರಾಷ್ಟ್ತ್ರ ದಿಂದ ಬೆಳಗಾವಿಗೆ ಸಾಗಿಸುತ್ತಿದ್ದ ಸುಮಾರು 20 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಓರ್ವನನ್ನು ಬಂಧಿಸಲಾಗಿದೆ. ಕೊಲ್ಹಾಪುರದಿಂದ ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವಾಗ ಕಾಕತಿ ಸಮೀಪದಲ್ಲಿ ಗ್ರಾಮೀಣ ಡಿವೈಎಸ್ಪಿ ಎಂ. ಅಶ್ವಿನಿ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ 20 ಕೆ.ಜಿ. ಗಾಂಜಾ ಕಾರು ವಶಪಡಿಸಿಕೊಂಡು ಗಾಂಜಾ ಸಾಗಿಸುತ್ತಿದ್ದ ಶಂಕರ ಗೋಖಲೆ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದ ಇನ್ನೌರ್ವ ಆರೋಪಿ ಪರಾರಿ ಯಾಗಿದ್ದಾನೆ. ಆತನ ಪತ್ತೆಗೆ ಕಾಕತಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಕೊಲ್ಹಾಪುರ ಬೆಳಗಾವಿ ಮಾರ್ಗದಿಂದ ಎರಡು [...] [...more]
ಬೆಳಗಾವಿ, ಜೂ.3: ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಹಣ್ಣಿನ ಮಾರುಕಟ್ಟೆಯ ಬಳಿ ನಡೆದಿದೆ. ರಾಷ್ಟ್ತ್ರೀಯ ಹೆದ್ದಾರಿಯ ಮೇಲೆ ಕೊಲ್ಹಾಪುರ ಕಡೆಯಿಂದ ಹುಬ್ಬಳ್ಳಿಯ ಕಡೆಗೆ ಅತಿ ವೇಗವಾಗಿ ಹೊರಟಿದ್ದ ಟ್ರಕ್ವೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಒರ್ವ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಮೇಲೆ ಸವಾರಿ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಅಪಘಾತ ಸಂಭವಿಸುತ್ತಿದ್ದಂತೆ ಅಲ್ಲಿಗೆ ಧಾವಿಸಿದ ಓರ್ವ ವ್ಯಕ್ತಿಯ [...] [...more]
ಬೆಳಗಾವಿ, ಜೂ.3: ಸುಪ್ರಸಿದ್ದ ಹಿಂಡಲಗಾ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಖಚಿತ ಮಾಹಿತಿಯ ಮೇರೆಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ದಿಢೀರ್ ದಾಳಿ ನಡೆಸಿ ಖೈದಿಗಳ ಬಳಿ ಇದ್ದ ಮೂರು ಮೋಬೈಲ್ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಗುರುವಾರ ಸಂಜೆ 6 ಗಂಟೆಗೆ ಸೋನಿಯಾ ನಾರಂಗ್ ನೇತೃತ್ವದ ಪೊಲೀಸರ ತಂಡ ಜೈಲಿನ ಮೇಲೆ ದಾಳಿ ನಡೆಸಿ ಸುಮಾರು 3 ಗಂಟೆಗಳ ಕಾಲ ಕಾರಾಗೃಹದ ಕೊಠಡಿಗಳನ್ನು ಮತ್ತು ಖೈದಿಗಳನ್ನು ಪರೀಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಖೈದಿಗಳು ಜೈಲಿನಲ್ಲಿ ಇದ್ದುಕೊಂಡೆ [...] [...more]
ಬೆಳಗಾವಿ, ಜೂ.3: ವಾಟಾಳ್ ಈ ನಾಡಿನ ಅಪರೂಪದ ವ್ಯಕ್ತಿ ಹುಟ್ಟು ಹೋರಾಟಗಾರ ಅವರು ನಡೆದರು ಸುದ್ದಿ, ಸದನದಲ್ಲಿ ಕೂಗಾಡಿದರೂ ಸುದ್ದಿ ಸದಾ ಸುದ್ದಿಯಲ್ಲಿದ್ದು ಜನಪರ ಕಾರ್ಯಗಳಿಗಾಗಿ ಅನೇಕ ಸರ್ಕಾರಗಳನ್ನು ಗುದ್ದಿ ಗುದ್ದಿ ತಿದ್ದಿದ ಮಹಾನುಭಾವರೇ ವಾಟಾಳ್ ನಾಗರಾಜ. ಹೋರಾಟವನ್ನೇ ಬದುಕಾಗಿಸಿಕೊಂಡಿರುವ ವಾಟಾಳ ನಾಗರಾಜ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಧಾನಪರಿಷತ್ನಲ್ಲಿ ಶಿಕ್ಷಕ ಸಮುದಾಯದ ಪರವಾಗಿ ಧ್ವನಿಯೆತ್ತುವುದಕ್ಕಾಗಿ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ವಾಟಾಳ ನಾಗರಾಜ ಅವರು ಬೆಂಗಳೂರಿನಲ್ಲಿದ್ದರೂ ಬೆಳಗಾವಿ ಗಡಿ ವಿಷಯ ಬಂದಾಗ ಸದನದಲ್ಲಿ [...] [...more]
ಬೆಳಗಾವಿ/ನೆಲಮಂಗಲ, ಮೇ 15: ಕುಟುಂಬ ಕಲಹ ಅಥವಾ ವೈಯಕ್ತಿಕ ವಿಚಾರಗಳಿಂದ ಮನನೊಂದ ಹೆತ್ತವರು ಅಮಾಯಕ ಮಕ್ಕಳನ್ನೇ ಕೊಂದ ಹಾಕುವ ಅಮಾನುಷ ಘಟನೆಗಳ ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ. ಕಳೆದ ರಾತ್ರಿಯಿಂದೆಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿ ಹಾಗೂ ನೆಲಮಂಗಲಗಳಲ್ಲಿ ಇದೇ ಮಾದರಿಯ ಎರಡು ಪ್ರಕರಣಗಳು ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿಯಲ್ಲಿ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರ ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 35 ವರ್ಷದ ಅರವಿಂದ ದೇಸಾಯಿ ತನ್ನ ಮಕ್ಕಳಾದ 8 ವರ್ಷದ [...] [...more]
ರಾಮನಾಥಪುರ, ಮೇ 14: ಇಲ್ಲಿಯ ಪ್ರಸಿದ್ದ ತಂಬಾಕು ಮಾರುಕಟ್ಟೆಯಲ್ಲಿ ಗೊಬ್ಬರವೆಂದು ಹೇಳಿ ರಂಗೋಲೆ ಪುಡಿ ನೀಡಿ 28 ಸಾವಿರ ರೈತರಿಗೆ ಪಂಗನಾಮ ಹಾಕಿರುವುದು ಪತ್ತೆಯಾಗಿದೆ. ಹೆಚ್ಚಾಗಿ ತಂಬಾಕು ಬೆಳೆಯುವ ರಾಮನಾಥಪುರದ ಸುತ್ತಮುತ್ತಲು ಸುಮಾರು 28 ಸಾವಿರ ರೈತರ ತಂಬಾಕು ಬೆಳೆಯಲು ಅನುಮತಿ ಪಡೆದಿದ್ದಾರೆ. ಹೊಗೆಸೊಪ್ಪು ಬೆಳೆಯುವ ಈ ಭಾಗದಲ್ಲಿ ರೈತರಿಗೂ ಎಸ್ಓಪಿ ಎಂಬ ಕಂಪನಿ ಗೊಬ್ಬರ ಸರಬರಾಜು ಮಾಡುತ್ತದೆ ಗೊಬ್ಬರ ಸರಬರಾಜಿಗೆ ಕಂಪನಿ ಒಬ್ಬ ರೈತನಿಂದ ಮುಂಗಡವಾಗಿ 1380 ರೂಪಾಯಿ ಪಡೆದುಕೊಳ್ಳುತ್ತದೆ. ಹಣ ಪಡೆದು ಸ್ವಲ್ಪ ದಿನವಾದ ನಂತರ ಆಯಾ [...] [...more]
ಬೆಳಗಾವಿ:ಮೇ:12: ಬೆಳಗಾವಿ ಜಿಲ್ಲೆಯಲ್ಲಿ ಇಂದು ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರತಿಶತ 78 ರಿಂದ 80 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಕೇಂದ್ರಕ್ಕೆ ಬಂದ ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಚುನಾವಣೆ ಶಾಂತಿಯುತವಾಗಿತ್ತೆಂದು ಜಿಲ್ಲಾಧಿಕಾರಿ ಡಾ|| ಜೆ. ರವಿಶಂಕರ ತಿಳಿಸಿದ್ದಾರೆ. ಇಂದು ಮುಂಜಾನೆ ಪತ್ರಕರ್ತರ ತಂಡ ಚುನಾವಣೆ ಪ್ರಕ್ರಿಯೇ ವೀಕ್ಷಿಸಲು ತೆರಳಿದಾಗ ಜನರು ಮತದಾನದಲ್ಲಿ ಉತ್ಸಾಹದಿಂದ ಭಾಗವಹಿಸಿದು ಕಂಡು ಬಂದಿತು. ಮುಂಜಾನೆಯಿಂದಲೇ ಮತಗಟ್ಟೆಗಳ ಮುಂದೆ ಜನರು ಸರದಿಯಲ್ಲಿ ನಿಂತು ಮತದಾನ ಮಾಡಿದರು. ಜಿಲ್ಲೆಯಲ್ಲಿ ಅಂದಾಜು [...] [...more]