ಬೆಂಗಳೂರು, ಜೂ. 6 : ಬಹುನೀರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು ಜೂನ್ 17 ಅಥವಾ 19 ರಿಂದ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಮುಂಬೈಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರರು ಸಂಪುಟ ವಿಸ್ತರಣೆ ಕುರಿತಂತೆ ರಾಷ್ಟ್ತ್ರೀಯ ಧುರೀಣರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ 17 ರಂದು ಸಂಪುಟ ವಿಸ್ತರಣೆಯಾಗಲಿದೆ. ಒಂದು ವೇಳೆ ರಾಜ್ಯಸಭೆಗೆ ಚುನಾವಣೆ ನಡೆದರೆ 19 [...] [...more]
ಬೆಂಗಳೂರು, ಜೂ.6: ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿಯನ್ನು ಕಣಕೆ ಇಳಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡನೇ ಅಭ್ಯರ್ಥಿಯ ಆಯ್ಕೆ ನಿರ್ಧಾರ ಪಕ್ಷದ ಏಕಮಾನ್ಯ ಬಿಟ್ಟ ವಿಷಯವಾಗಿದೆ ಎಂದರು. ಜೆಡಿಎಸ್ ಜೊತೆಗಿನ ಮೈತ್ರಿ ವಿಷಯ ಪ್ರಸ್ತಾಪಿಸಿದ ಅವರು ಮೈತ್ರಿಗೆ ಹಿನ್ನೆಡೆಯಾಗಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕು. ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು. ಕಾಂಗ್ರೆಸ್ ಹಿರಿಯ ಧುರೀಣ ಆಸ್ಕರ್ ಫರ್ನಾಂಡಿಸ್ ಈಗಾಗಲೇ ನಾಮಪತ್ರ [...] [...more]
ಬೆಳಗಾವಿ,6-ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಬಸ್ ದುರಸ್ತಿ ಘಟಕವನ್ನು ಆಟೋ ನಗರಕ್ಕೆ ಸ್ಥಳಾಂತರಿಸಿ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ.
ಈ ಹಿಂದೆ ಶಾಲಿನಿ ರಜನೀಶ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಬಸ್ ನಿಲ್ದಾಣದ ಆವರಣದಲ್ಲಿರುವ ಬಸ್ ದುರಸ್ತಿ ಘಟಕವನ್ನು ಆಟೋನಗರಕ್ಕೆ ಸ್ಥಳಾಂತರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ಅಧಿಕಾರಿಗಳು ಆಟೋ ನಗರಕ್ಕೆ ಬಸ್ ದುರಸ್ತಿ ಘಟಕವನ್ನು ಸ್ಥಳಾಂತರಿಸುವ ಗೋಜಿಗೆ ಹೋಗಿಲ್ಲ. [...] [...more]
ಬೆಂಗಳೂರು, ಜೂ. 5: ಪ್ರಮುಖ 3 ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿರುವ ರಾಜ್ಯಸಭೆಯ ಚುನಾವಣೆಯ 4ನೇ ಅಭ್ಯರ್ಥಿ ಯಾರೂ ಎಂಬುದಕ್ಕೆ ದಿನಕ್ಕೊಂದು ಹೆಸರುಗಳು ಕೇಳಿ ಬರತೊಡಗಿವೆ. ಸದ್ಯಕ್ಕೆ ನೂತನವಾಗಿ ಮತ್ತು ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಎಂದರೆ ಖ್ಯಾತ ಉದ್ಯಮಿ ಸರ್ಜನ್ ಜಿಂದಾಲ್ ಅವರದಾಗಿದೆ.
ಹೂಡಿಕೆದಾರರ ಸಮಾವೇಶದ ಬಳಿಕ ನಿನ್ನೆ ರಾತ್ರಿ ಮುಂಬೈಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಪುಟದ ಸಹೋದ್ಯೌಗಿಗಳು ಸರ್ಜನ್ ಜಿಂದಾಲ ಅವರನ್ನು ಕಣಕ್ಕೆ ಇಳಿಸಲು ಅವರು ಮನವೊಲಿಸಲು ಮುಂದಾಗಿದ್ದಾರೆ. ಕಾರ್ಯಕ್ರಮ ನಿಮಿತ್ಯ ಮುಖ್ಯಮಂತ್ರಿ ಮುಂಬೈಗೆ [...] [...more]
ಬೆಂಗಳೂರು, ಜೂ.5: ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಆಸ್ಕರ ಫರ್ನಾಂಡೀಸ್ ಇಂದು ರಾಜ್ಯಸಭೆಯ ಚುನಾವಣೆಗಾಗಿ ಕಾಂಗ್ರೆಸ್ ಅಧೀಕೃತ ಅಭ್ಯರ್ಥಿಯಾಗಿ ಇಂದು ನಾಮಪತ್ರವನ್ನು ಸಲ್ಲಿಸಿದರು.
ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಈಗಾಗಲೇ ಭಾಜಪ ರಾಷ್ಟ್ತ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡು ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಈ ಮೊದಲು ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಹೇಳಿಕೊಂಡಿತ್ತು. ಆದರೆ ಜೆಡಿಎಸ್ ಜೊತೆಗೆ [...] [...more]
ಬೆಂಗಳೂರು, ಜೂ.5: ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಮೇಕಪ್ ಮಾಡಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿಯನ್ನು ಮಾಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಜನರಿಗೆ ನೆಟ್ಟಗೆ ವಿದ್ಯುತ್ ಕೊಡ್ತಾಯಿಲ್ಲ ರಾಜ್ಯ ಕಗ್ಗತ್ತಲೆಯಲ್ಲಿದೆ. ಮನೆ ಕಳೆದುಕೊಂಡಿರುವ ಮನೆ ನೆರೆ ಸಂತ್ರಸ್ತರ ಗೋಳು ಕೇಳುವವರೆ ಇಲ್ಲದಂತಾಗಿದೆ. ಅವರಿಗೆ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಟೀಕಾ ಪ್ರಹಾರ ಮಾಡಿದರು.
ರೈತರ [...] [...more]
ಬೆಂಗಳೂರು, ಜೂ.5: ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದ್ದು ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಹಾರಿಸಿದ್ದ ಗುಂಡಿನ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಕೊನೆಗೂ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು 29 ರಂದು ಸಂಜೆ ಆಶ್ರಮದಲ್ಲಿ ಸತ್ಸಂಗ ಕಾರ್ಯಕ್ರಮ ಮುಗಿಸಿ ರವಿಶಂಕರ ಗುರೂಜಿ ಅವರು ಹೊರಗೆ ಹೊರಟ ಸಂದರ್ಭದಲ್ಲಿ ಹಾರಿ ಬಂದ ಗುಂಡು ವಿಶ್ವಾದ್ಯಂತ ಭಾರಿ ಕುತೂಹಲ ಆತಂಕ ಮೂಡಿಸಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದರು. ಜೊತೆಗೆ ಸ್ವಾಮೀಜಿ ಅವರಿಗೆ ಉನ್ನತ [...] [...more]
ಬೆಂಗಳೂರು, ಜೂ. 4: ಬಂಡವಾಳ ಹೂಡಿಕೆಯ ಸದಮಾವೇಶದ ಎರಡನೇ ದಿನವಾದ ಇಂದು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕಂಪನಿಗಳು ಬಂಡವಾಳ ಹೂಡಲು ನಾಮುಂದು ತಾಮುಂದು ಎಂಬ ಇನ್ನಿಲ್ಲದ ಉತ್ಸಾಹವನ್ನು ತೋರಿಸುತ್ತೇವೆ ಹೀಗಾಗಿ ಕಡೆಗಳಿಗೆಯಲ್ಲಿ ಬಂದವರಿಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಚಿಂತೆ ಸರ್ಕಾರಕ್ಕೆ ಉಂಟಾಗ ತೊಡಗಿದೆ.
ನಿನ್ನೆ ಮೊದಲ ದಿನವೇ 3.29 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದ್ದು ನಿನ್ನೆಯ ಪ್ರತಿಕ್ರಿಯೆಯನ್ನು ಗಮನಿಸಿದ ದೇಶದ ಬೇರೆ ಬೇರೆ ಕಂಪನಿಗಳು ಇಂದು ಕೂಡ ಸಮಾವೇಶದಲ್ಲಿ [...] [...more]
ಬೆಂಗಳೂರು, ಜೂ.4: ಸಂವಿಧಾನದತ್ತವಾದ ಪರಮಾಧಿಕಾರವನ್ನು ಪಡೆದಿರುವ ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜ್ಯ ಭಾಜಪ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಆಗ್ರಹಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಪಾಲರ ವಿಷಯದಲ್ಲಿ ಈಶ್ವರಪ್ಪ ಅವರ ವರ್ತನೆ ಅತ್ಯಂತ ಖಂಡನೀಯವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರಪ್ಪನವರು ರಾಜ್ಯಪಾಲರಿಗೆ ಅವಮಾನ ಮಾಡುವುದು ತಪ್ಪು ಕ್ರಮವಾಗಿದೆ. ಆದ್ದರಿಂದ ಅವರು ಕೂಡಲೇ ಭೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಈಗಾಗಲೇ ಮೀಸಲಾತಿಯನ್ನು [...] [...more]
ೆಂಗಳೂರು, ಜೂ. 4: ಸರ್ವೌಚ್ಚ ನ್ಯಾಯಾಲಯದ ಮಧ್ಯಾಂತರ ತೀರ್ಪಿನಿಂದ ಆನಂದ ಸಾಗರದಲ್ಲಿ ತೇಲಾಡುತ್ತಿದ್ದ ಬಳ್ಳಾರಿ ಗಣಿ ದೊರೆಗಳಿಗೆ ಕೇಂದ್ರ ಚುನಾವಣಾ ಆಯೋಗ ಬಿಸಿ ಮುಟ್ಟಿಸಲಿದೆಯೇ ಎಂಬ ಪ್ರಶ್ನೆ ಈಗ ಉಂಟಾಗಿದೆ.
ಸದ್ಯಕ್ಕೆ ಈ ಬಗ್ಗೆ ಉತ್ತರ ಹೇಳುವುದೇ ಸ್ವಲ್ಪ ಕಷ್ಟಕರವಾದ ಸಂಗತಿಯಾಗಿದೆ. ಆದರೂ ರೆಡ್ಡಿ ಸಹೋದರರು ರಾಜಕೀಯ ಭವಿಷ್ಯವನ್ನು ಚುನಾವಣಾ ಆಯೋಗ ನಿರ್ಧರಿಸುವ ವೇದಿಕೆ ಈಗ ಸಿದ್ದಗೊಂಡಿದೆ. ಲಾಭದಾಯಕ ಹುದ್ದೆ ಹೊಂದಿರುವ ಸಚಿವರಾಗಿ ಜನಾರ್ಧನ ರೆಡ್ಡಿ ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬೇಕೆಂದು ವಿಧಾನಪರಿಷತ್ [...] [...more]