ಬೆಳಗಾವಿಯಲ್ಲಿ ಕಟ್ಟಬೇಕಾಗಿರುವ ಸುವರ್ಣ ವಿಧಾನ ಸೌಧದ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಆದರೆ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲು ಇನ್ನೂ 18 ತಿಂಗಳು ಬೇಕೆಂದು ಹೇಳಲಾಗಿದೆ. ಮುಂದಿನ ವರ್ಷದ ಚಳಿಗಾಲದ ಸಮಯಕ್ಕೆ ಅಧಿವೇಶನ ನಡೆಸಲು ಬೇಕಾಗುವಷ್ಟು ಕಟ್ಟಡ ಸಿದ್ದವಾಗಲಿದೆ ಎಂದು ಹೇಳಲಾಗಿದೆ.
ಆದರೆ ಈ ಸೌಧದ ನಿರ್ಮಾಣ ಕಾರ್ಯ ಆರಂಭವಾಗುವ ಮೊದಲು 250 ಕೋಟಿ ರೂಪಾಯಿ ವೆಚ್ಚ ಬರಲಿದೆ. ಎಂದು ಅಂದಾಜು ಮಾಡಲಾಗಿತ್ತು. ಆದರೆ ಈಗ ಅದು 350 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗಿದೆ. ನಿರ್ಮಾಣ ಕಾರ್ಯದ [...] [...more]
ಮಧ್ಯ ರಾತ್ರಿಯಲ್ಲಿ ಕೇಂದ್ರ ಸರಕಾರ ತರಾತುರಿಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ನಿರ್ಮಾಣದ ಘೋಷಣೆಯನ್ನು ಮಾಡಿರುವುದು ಟಿ. ಆರ್.ಎಸ್.ನಾಯಕ ಕೆ. ಚಂದ್ರ ಶೇಖರ ರಾವ ಅವರನ್ನು ಸಂತೋಷ ಮಡಿಸುವುದಕ್ಕಾಗಿ ಅಲ್ಲ. 2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತವನ್ನು ಪಡೆದು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಮಾಡುವುದಕ್ಕಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ರೂಪಿಸಿರುವ ದೂರಗಾಮಿ ಯೋಜನೆಯಾಗಿದೆ ಎಂದು ಹೇಳಲಾಗಿದೆ. ತಮ್ಮ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಸೋನಿಯಾ ಗಾಂಧಿಯವರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿದ್ದಾರೆ. [...] [...more]
ಕಳೆದ ಶುಕ್ರವಾರದಲ್ಲಿ ಚಾಮರಾಜ ನಗರ ಹಾಗೂ ದಾವಣಗೆರೆಗಳಲ್ಲಿ ರೈತರು ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದ್ದಾಗ ಪೋಲಿಸರು ಲಾಠಿ ಪ್ರಹಾರ ಮಾಡಿದ್ದರಿಂದ ಹಲವು ರೈತರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ರೈತರನ್ನು ಬಂಧಿಸಲಾಗಿದೆ. ಬಂಧಿತ ರೈತರಿಗೆ ಸರಿಯಾಗಿ ಊಟ ಹಾಗೂ ಕುಡಿಯಲು ನೀರು ಸಹ ಕೊಟ್ಟ್ಟಿಲ್ಲವೆಂದು ಹೇಳಲಾಗಿದೆ. ರೈತರ ಮೇಲೆ ಪೋಲಿಸರು ಈ ರೀತಿಯ ದಬ್ಬಾಳಿಕೆಯನ್ನು ನಡೆಸಿರುವುದು ಖಂಡನೀಯವಾದ ಸಂಗತಿಯಾಗಿದೆ. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ರೈತರ ಹೆಸರಿನಿಂದಲೇ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. [...] [...more]
ಇತ್ತೀಚೆಗೆ ರಾಜ್ಯ ಸರಕಾರದ ಸಚಿವ ಸಂಪುಟದ ಸಭೆಯಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ಸಕ್ರಮಗೊಳಿಸುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಸರಕಾರಿ ಜಾಗೆಯಲ್ಲಿ ಕಟ್ಟಿರುವ ಅಕ್ರಮ ಕಟ್ಟಡಗಳಿಗೆ ರಿಯಾಯಿತಿ ನೀಡಿರುವುದು ಸ್ಥಳೀಯ ಸಂಸ್ಥೆಗಳು ಅಸಮಾಧಾನಕ್ಕೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಕಟ್ಟಡಗಳಿಗೂ ಸಕ್ರಮ ಯೋಜನೆ ಜಾರಿಗೆ ತಂದರೆ ಸರಕಾರದ ಬೊಕ್ಕಸಕ್ಕೆ ಕನಿಷ್ಠ 300 ಕೋಟಿ ರೂಪಾಯಿ ಹಣ ಬರಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಸರಕಾರದ ಜಾಗೆಯಲ್ಲಿ ಅಕ್ರಮ ಕಟ್ಟಡ ಗಳನ್ನು ನೆಲ ಸಮ ಮಾಡಲಾಗುತ್ತಿದೆ. ಆದರೆ ಉಳಿದ ಪಾಲಿಕೆಗಳಲ್ಲಿ ಪ್ರಮುಖ [...] [...more]
ಮುಖ್ಯ ಮಂತ್ರಿ ಯಡಿ ಯೂರಪ್ಪನವರು ನೆರೆ ಪ್ರವಾಹದಲ್ಲಿ ಮನೆಯನ್ನು ಕಳೆದು ಕೊಂಡವರಿಗೆ ಮನೆ ಕಟ್ಟಿಸಿ ಕೊಡುತ್ತೇವೆ. ಮೇಲಿಂದ ಮೇಲೆ ನೆರೆ ತೊಂದರೆಗೆ ಒಳಗಾಗುತ್ತಿರುವ ಪ್ರದೇಶಗಳಲ್ಲಿ ಇರುವ ಗ್ರಾಮಗಳನ್ನು ಬೆೇರೆ ಕಡೆಗೆ ಸ್ಥಳಾಂತರ ಮಾಡಿ ನವಗ್ರಾಮಗ ಳನ್ನು ನಿರ್ಮಾಣ ಮಾಡುತ್ತೇವೆ. ಎಂದು ಹೇಳುತ್ತಾರೆ. ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ ನವಗ್ರಾಮಗಳ ನಿರ್ಮಾಣಕ್ಕಾಗಿ ಶಂಕು ಸ್ಥಾಪನೆ ಮಾಡುವ ಸಮಾರಂಭಗಳನ್ನು ಏರ್ಪಡಿಸಿ ಅದ್ದೂರಿಯ ಸಮಾರಂಭಗಳನ್ನು ಮಾಡುತ್ತಿದ್ದವು. ಆದರೆ ಅವರು ಮಾಡುತ್ತಿರುವ ಈ ಕಾರ್ಯ ಕೇವಲ ಶಂಕು ಸ್ಥಾಪನೆಗೆ ಮಾತ್ರ ಸೀಮಿತವಾಗಿದೆ. [...] [...more]
ಸಾಹಿತಿಗಳು ಪತ್ರಕರ್ತರು ಬೆಳಗಾವಿ ನಗರವನ್ನು ಹಾಗೂ ಬೆಳಗಾವಿ ಗಣಿ ಪ್ರದೇಸವನ್ನು ಬಣ್ಣಿಸುವ ಸಂದರ್ಭದಲ್ಲಿ ಬೆಳಗಾವಿ ಗಂಡು ಮೆಟ್ಟಿನ ಸ್ಥಳವೆಂದು ಬಣ್ಣಿಸುತ್ತಾ ಬಂದಿದ್ದಾರೆ. ಆದರೆ ಅದು ಗಂಡು ಮೆಟ್ಟಿನ ಸ್ಥಳವಾಗಿ ಉಳಿದಿರುವುದಿಲ್ಲ ಎಂಬ ಸತ್ಯವನ್ನು ಹೇಳುವ ಮೂಲಕ ಗದುಗಿನ ತೋಂಟದಾರ್ಯ ಮಠದ ಡಾ|| ಸಿದ್ದಲಿಂಗ ಸ್ವಾಮೀಜಿ ಸತ್ಯ ಏನು ಎಂಬುದನ್ನು ಬೆಳಗಾವಿ ಕನ್ನಡಿಗರ ಮುಖಕ್ಕೆ ಅಪ್ಪಳಿಸುವ ರೀತಿಯಲ್ಲಿ ಹೇಳಿದ್ದಾರೆ. ಬೆಳಗಾವಿಯನ್ನು ಗಂಡು ಮೆಟ್ಟಿನ ನೆಲ ಎಂದು ಹಿಂದಿನ ಹಿರಿಯರು ಹೇಳುತ್ತಾ ಬಂದಿದ್ದಾರೆ. ನಾವು ಅದನ್ನೇ ಹೇಳುತ್ತಿದ್ದೇನೆ. ಆದರೆ ಈಗ [...] [...more]
ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಅತ್ಯಂತ ಸಂತಸದ ದಿನವಾಗಿದೆ. ಭಾರತೀಯ ಕ್ರಿಕೆಟ ಜುತ್ತಿನ ಇತಿಹಾಸದಲ್ಲಿಯೇ ಭಾರತ ಇದೇ ಮೊದಲ ಬಾರಿಗೆ 124 ಗುಣಗಳನ್ನು ಪಡೆದು ವಿಶ್ವ ಕ್ರಿಕೆಟ ತಂಡಗಳ ಪಟ್ಟಿಂಉಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಇದು ವರೆಗೆ ಈ ಸಾಧನೆ ಮಾಡಲು ಭಾರತೀಯ ತಂಡಕ್ಕೆ ಸಾಧ್ಯವಾಗಿರಲಿಲ್ಲ. 2ನೇ ಸ್ಥಾನದಲ್ಲಿ 122 ಗುಣ ಪಡೆದ ದಕ್ಷಿಣ ಆಫ್ರಿಕಾ ಇದ್ದರೆ 116 ಗುಣ ಪಡೆದು ಆಸ್ಟ್ತ್ರೇಲಿಯಾ 3ನೇ ಸ್ಥಾನದಲ್ಲಿ ಇದೆ. ಭಾರತ ಇದು ವರೆಗೆ 103 ಟೆಸ್ಟ ಪಂದ್ಯಗಳನ್ನು ಆಡಿದ್ದು 40 [...] [...more]
ಬಳ್ಳಾರಿಯ ಗಣಿ ದೊರೆ ಜನಾರ್ಧನ ರೆಡ್ಡು ಅವರು ಈಗ ಕಂಡ ಕಂಡವರ ಮೇಲೆ ಹರಿಹಾಯುವ ಕಾರ್ಯವನ್ನು ಮಾಡ ತೊಡಗಿದ್ದಾರೆ. ಅವರ ಈ ಆವೇಶವನ್ನು ನೋಡಿದರೆ ನಮ್ಮ ಭಾಷೆಯಲ್ಲಿ ಇರುವ ಆಡು ಮಾತು ನಮ್ಮ ನೆನಪಿಗೆ ಬರುತ್ತದೆ. ನಮ್ಮ ಆಡು ಮಾತಿನಲ್ಲಿ ಇದ್ದುದ್ದನ್ನು ಇದ್ದಂತೆ ಆಡಿದರೆ ಸಿದ್ದಪ್ಪನಿಗೆ ಸಿಡಿಲು ಬಡಿಯಿತು. ಎಂಬ ಮಾತನ್ನು ಹೇಳುತ್ತಾರೆ. ಜನಾರ್ಧನೆ ರೆಡ್ಡಿಯವರು ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಎಂದು ಹೇಳುವ ಎಲ್ಲ ಜನರು ಜನಾರ್ಧನೆ ರೆಡ್ಡಿಯವರು ಕಣ್ಣಿಗೆ ಪಾಪಿಗಳಾಗಿ ದುಷ್ಟರಾಗಿ ನಂಬಿಕೆಯ ದ್ರೌಹಿಯಾಗಿ ಕಾಣತೊಡಗಿದ್ದಾರೆ. [...] [...more]
ಬೆಳಗಾವಿ ಜಿಲ್ಲೆಯಲ್ಲಿ ಮೊದಲೇ ಜೆಡಿಎಸ್ ಪಕ್ಷದ ಪ್ರಭಾವ ಅಷ್ಟೊಂದು ಬಲವಾಗಿ ಇರುವುದಿಲ್ಲ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಪ್ಪಂದದ ಫಲವಾಗಿ ಜೆಡಿಎಸ್ ಪಕ್ಷ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆದುಕೊಂಡಿದೆ. ಆದರೆ ಪಕ್ಷಕ್ಕೆ ದೊರೆತಿರುವ ಈ ಅವಕಾಶವನ್ನು ಸುಲಭವಾಗಿ ಉಪಯೋಗಿಸಿ ಕೊಳ್ಲುವ ಪ್ರಯತ್ನವನ್ನು ಮಾಡುವ ಬದಲು ಆ ಪಕ್ಷದಲ್ಲಿ ಬಂಡಾಯದ ಹೊಗೆ ಕಾಣಿಸಿ ಕೊಂಡಿರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ತನ್ನ ಬಲವನ್ನು ಒಟ್ಟು ಗೂಡಿಸಿ ಕಾಂಗ್ರೆಸ್ ಪಕ್ಷದ ಸಹಕಾರದಿಂದ ತನಗೆ ದೊರೆತಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ [...] [...more]
ಕಳೆದ ವರ್ಷದ ಜುಲೈ 25 ರಂದು ಬೆಂಗಳೂರನ್ನು ನಡುಗಿಸಿದ್ದು ಸರಣಿ ಬಾಂಬ್ ಸ್ಪೌಟದ ರಹಸ್ಯವನ್ನು ಪೋಲಿಸರು ಬೇದಿಸಿದ್ದು ಪಾಕಿಸ್ತಾನದ ಲಷ್ಕರ ಕಮಾಂಡೆಂಟ ಮಸ್ಕತ್ ಮೂಲದ ವ್ಯಕ್ತಿಯೊಬ್ಬ ಸೇರಿದಂತೆ ಈ ಕೃತ್ಯದಲ್ಲಿ 24 ಜನ ಉಗ್ರರು ಪಾಲ್ಗೌಂಡಿರುವುದು ಈಗ ಬೆಳಕಿಗೆ ಬಂದಿದೆ. ಈ 24 ಜನರಲ್ಲಿ ಬಹುತೇಕ ಕೇರಳದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆಂದು ಹೇಳಲಾಗಿದೆ. ಕಳೆದ ಬುಧವಾರ ನಜೀರ ಹಾಗೂ ಸಮುಶುದ್ದೀನ ಅವರನ್ನು ಹೊರತು ಪಡಿಸಿ 8 ಜನರನ್ನು ಬಂಧಿಸಬೇಕಾಗಿದೆ ಎಂದು ಪೋಲಿಸರು ಹೇಳಿದ್ದಾರೆ.
ಪಾಕಿಸ್ತಾನದ ಫೈಸಲಾಬಾದಿನ [...] [...more]