ಜೈಪುರ, ಮೇ 15: ಮಾಜಿ ಉಪರಾಷ್ಟ್ತ್ರಪತಿ ಬೈರೋನ್ಸಿಂಗ್ ಶೇಖಾವತ ಅವರು ಇಂದು ಬೆಳಿಗ್ಗೆ 11-10ರ ಸುಮಾರಿಗೆ ತೀವ್ರ ಅನಾರೋಗ್ಯದಿಂದ ವಿಧಿವಶರಾದರು. 87 ವರ್ಷದ ಅವರನ್ನು ಇದೇ 13 ರಂದು ಎಸ್.ಎಂ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಅವರು ಶ್ವಾಸಕೋಶ ಮತ್ತು ಎದೆಯ ಸೋಂಕಿನಿಂದ ಬಳುಲುತ್ತಿದ್ದರೆಂದು ವೈದ್ಯರು ಹೇಳಿದರು.
ದೇವಿಸಿಂಗ್ ಶೇಖಾವತ್ ಹಾಗೂ ಬನ್ನೇಕನ್ವರ್ ದಂಪತಿಗಳ ಪುತ್ರರಾಗಿ 1923 ರ ಅಕ್ಟೌಬರ 23 ರಂದು ರಾಜಸ್ಥಾನದ ಸೀಕಾರ್ ಜಿಲ್ಲೆಯ ಖಚಾರಿ ಯಾದಾಸ್ ಗ್ರಾಮದಲ್ಲಿ ಜನಿಸಿದರು. ಅವರು ಮೂರು ಬಾರಿ [...] [...more]
ಟ್ರಿಪೋಲಿ, ಮೇ 12: ದಕ್ಷಿಣ ಆಪ್ರಿಕಾದಿಂದ ಬರುತ್ತಿದ್ದ ನಿಬಿಯಾದ ವಿಮಾನವೊಂದು ಟ್ರಿಪೋಲಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 105 ಜನ ಸಾವೀಗೀಡಾಗಿದ್ದಾರೆ. ಮೃತಪಟ್ಟವರಲ್ಲಿ 94 ಜನ ಪ್ರಯಾಣಿಕರಿದ್ದು 11 ಜನ ಸಿಬ್ಬಂದಿ ವರ್ಗದವರೇ ಇದ್ದಾರೆಂದು ಹೇಳಲಾಗಿದೆ.
ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ ಆದರೆ ಆಪ್ರೀಖೀಯಾ ಏರ್ವೇಸ್ದ ವಿಮಾನ ಭೂಸ್ಪರ್ಶ ಮಾಡುವ ವೇಳೆ ಅಪಘಾತ ಸಂಭವಿಸಿದೆ. ವಿಮಾನ ದಕ್ಷಿಣ ಆಪ್ರಿಕಾದ ಜೋಹನ್ಸ್ಬರ್ಗ್ ಬರುತ್ತಿತ್ತು. ವಿಮಾನದಲ್ಲಿದ್ದ ಎಲ್ಲ 94 ಪ್ರಯಾಣಿಕರು ಹಾಗೂ ಜನ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಆಪ್ರೀಖೀಯಾ ಏರ್ವೇಸ್ [...] [...more]
ನವದೆಹಲಿ,20-ಬೆಲೆ ಏರಿಕೆ ವಿರುದ್ಧ ರಾಜ್ಯಮಟ್ಟದಲ್ಲಿ ಬೀದಿ ಹೋರಾಟ ನಡೆಸಿದದ ಬಿಜೆಪಿ ಇದೀಗ ರಾಷ್ಟ್ತ್ರ ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಇಂದು ಸಂಸತ್ ಭವನ ಮುಂಭಾಗ ಬೃಹತ್ ಪ್ರತಿಭಟನಾ ಧರಣಿ ನಡೆಸಲು ಸಜ್ಜಾಗಿದೆ.
ನಿತಿನ್ ಗಡ್ಕರಿ ರಾಷ್ಟ್ತ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ದೇಶ ವ್ಯಾಪಿ ಸಂಘಟನೆಗೆ ಕರೆ ಕೊಟ್ಟು ಯುಪಿಎ ಸರಕಾರದ ನೀತಿಗಳ ವಿರುದ್ಧ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹೋರಾಟ ನಡೆಸುವಂತೆ ಕರೆ ನೀಡಿದ್ದರು.
ರಾಜ್ಯಮಟ್ಟದಲ್ಲಿ ಸೈಕಲ್ [...] [...more]
ನವದೆಹಲಿ, ಏ.19: ಕೊಚ್ಚಿ ಐಪಿಎಲ್ ತಂಡದ ವಿವಾದದಲ್ಲಿ ಸಿಲುಕಿರುವ ಮಾಜಿ ಕೇಂದ್ರ ಸಚಿವ ಶಶಿತರೂರ್ ಅವರ ವಿರುದ್ದ ಸಿಬಿಐ ತನಿಖೆ ನಡೆಸಬೇಕೆಂಬ ಮನವಿಯನ್ನು ದೆಹಲಿ ಶ್ರೇಷ್ಟ ನ್ಯಾಯಾಲಯ ಇಂದು ತಳ್ಳಿಹಾಕಿದೆ.
ವಕೀಲರೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಹುರುಳು ಇಲ್ಲವಾದ ಕಾರಣ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ದೆಹಲಿ ಶ್ರೇಷ್ಟ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಾಮೂರ್ತಿ ಮದನ್ ಬಿ. ಲೋಕೂರ್ ಅವರ ನೇತೃತ್ವದ ನ್ಯಾಯಪೀಠ ಹೇಳಿದೆ.
ವಿವಾದಕ್ಕೆ ಗುರಿಯಾಗಿ ನಿನ್ನೆ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಸ್ಥಾನ ತೊರೆದಿರುವ ಶಶಿತರೂರ್ ತಾವು [...] [...more]
ನವದೆಹಲಿ, ಏ.16: ಐಪಿಎಲ್ ಮಾಲೀಕತ್ವದ ವಿವಾದ ಅದರಲ್ಲಿ ಶಶಿತರೂರ್ ಪಾತ್ರ ಕುರಿತ ವಿವಾದ 2ನೇ ದಿನವಾದ ಇಂದು ಕೂಡ ಸಂಸತ್ತಿನ ಕಾರ್ಯಕಲಾಪಗಳನ್ನು ನುಂಗಿ ಹಾಕಿತು.
ಇದಕ್ಕೆ ಮೊದಲು ಉಭಯ ಸದನಗಳಲ್ಲಿ ಸಚಿವ ಶಶಿತರೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಆಮೇಲೆ ವಿಚಾರಣೆ ಎದುರಿಸಲು ಪರಿಶುದ್ದರಾಗಿ ಬಂದರು ಸಚಿವರಾಗಿ ಮುಂದುವರೆಯಲಿ ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಭಾಜಪ ಮತ್ತು ಎಡಪಕ್ಷಗಳ ಸದಸ್ಯರ ಪ್ರಬಲ ಒತ್ತಡ ಹಾಕಿದ್ದಾರೆ.
ಇಂದು ಬೆಳಗಿನಿಂದ ಯಾವುದೇ ಅಧೀಕೃತ ಕಾರ್ಯಕಲಾಪಗಳು ಸುಗಮವಾಗಿ ನಡೆಯಲಿ ಸಾಧ್ಯವೇ ಆಗಲಿಲ್ಲ ಪದೇ [...] [...more]
ಮುಂಬೈ ಏ.16: ಕರ್ನಾಟಕದ ಗಡಿಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಜೊತೆಗೆ ಗಡಿ ವಿವಾದ ಸರ್ವೌಚ್ಚ ನ್ಯಾಯಾಲಯದಲ್ಲಿ ಇರುವಾಗಲೂ ಬೆಳಗಾವಿ ನಗರವನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಮಾಡಲಾಗುತ್ತದೆ ಎಂಬ ಹೇಳಿಕೆಯನ್ನು ಅಲ್ಲಿಯ ಮುಖ್ಯಮಂತ್ರಿಗಳು ನೀಡುತ್ತಿದ್ದಾರೆ ಇತ್ತೀಚೆಗೆ ನಡೆದ ಮಹಾಪೌರ ಚುನಾವಣೆಯಲ್ಲಿ ಮರಾಠೀ ಅಭ್ಯರ್ಥಿಗಳು ಅಯ್ಕೆಯಾಗಬಾರದು ಎಂದು ಕುತಂತ್ರ ಮಾಡಲಾಗಿದೆ. ಈ ಎಲ್ಲ ವಿಷಯಗಳನ್ನು ಪ್ರಧಾನಿಯವರ ಗಮನಕ್ಕೆ ತಂದು ಗಡಿವಿವಾದ ಶೀಘ್ರ ಇತ್ಯರ್ಥಕ್ಕಾಗಿ ಒತ್ತಡವನ್ನು ಹೇರಲಾಗುವದು ಆದಕ್ಕಾಗಿ ಮುಂದಿನ 15 ದಿನಗಳಲ್ಲಿ ದೆಹಲಿಗೆ ಸರ್ವಾಪಕ್ಷಗಳ ನಿಯೋಗವನ್ನು [...] [...more]
ನವದೆಹಲಿ,15-ವಿದೇಶಾಂಗ ಖಾತೆ ಸಹಾಯಕ ಸಚಿವ ಶಶಿತರೂರ್ ಅವರ ತಲೆದಂಡಕ್ಕೆ ಸಂಸತ್ತಿನ ಒಳಗೆ, ಹೊರಗೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವರು ತಲೆದಂಡ ತೆರುವುದು ಗ್ಯಾರಂಟಿ..!
ಅಲ್ಪಕಾಲದ ವಿರಾಮದ ನಂತರ ಸಂಸತ್ತಿನ ಮುಂದುವರೆದ ಬಜೆಟ್ ಅಧಿವೇಶನ ನಿನ್ನೆ ಮತ್ತೆ ಪುನರ್ ಆರಂಭವಾಗಿದ್ದು, ಐಪಿಎಲ್ ವಿವಾದದ ಬಗ್ಗೆ ಸಚಿವ ಶಶಿತರೂರ್ ತಲೆದಂಡ ತೆರಲೇಬೇಕೆಂದು ವಿರೋಧಪಕ್ಷಗಳು ಪಟ್ಟುಹಿಡಿದು ಒತ್ತಾಯ ಮಾಡಿದ್ದರಿಂದ ನಿನ್ನೆ ಸಂಸತ್ನ ಉಭಯಸದನಗಳಲ್ಲಿ ಭಾರೀ ಕೋಲಾಹಲ ಉಂಟಾಗಿ ಉಭಯ ಸದನಗಳ ಕಲಾಪವನ್ನು ಕೆಲಕಾಲ ಮುಂದಕ್ಕೆ ಹಾಕಲಾಗಿತ್ತು.
ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ [...] [...more]
ರಾಜಭವನದಲ್ಲಿ ರಾಜ್ಯಪಾಲ ಎಚ್.ಆರ್ ಭಾರಧ್ವಜ್ ಅವರ ಜನಗಣತಿಯ ವಿವರವನ್ನು ಸಿಬ್ಬಂದಿ ಪಡೆಯುವದರೊಂದಿಗೆ ರಾಜ್ಯದಲ್ಲಿ ಜನಗಣತಿಗೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿ ಭರತ್ಲಾಲ್ ಮೀನಾ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಆಗ ರಾಜ್ಯಪಾಲರು ಸಿಬ್ಬಂದಿಯನ್ನು ಅಭಿನಂದಿಸಿದರು.
[...more]
ನವದೆಹಲಿಯಲ್ಲಿ,15-ಮುಂದಿನ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರ ಕೋರುವುದಾಗಿ ಜೆಡಿಎಸ್ ರಾಷ್ಟ್ತ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಇಂದಿಲ್ಲಿ ಈ ವಿಷಯ ತಿಳಿಸಿದ ಅವರು ರಾಜ್ಯಸಭೆ ಚುಣಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕಾಂಗ್ರೆಸ್ ಅನ್ನು ಕೋರಲಾಗುವುದು ಎಂದರು.
ನಾವು ಹಿಂದೆ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಕೊಟ್ಟಿದ್ದೇವೆ. ಅದನ್ನು ನೆನಪಿನಲ್ಲಿಟ್ಟುಕೊಂಡು ಅವರು ನಮೆ ಈಓ ಬಾರಿ ಸಹಕಾರ, ಬೆಂಬಲ ಕೊಡಬೇಕೆಂದು ಬಯಸುವುದಾಗಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಜೂನ್ ಅಂತ್ಯದ ವೇಳೆಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸದಸ್ಯರಾದ ಬಿಜೆಪಿಯ ವೆಂಕಯ್ಯನಾಯ್ಡು, [...] [...more]
ಮುಂಬೈ, ಫೆ.28: ಕನ್ನಡದ ಖ್ಯಾತ ಚಿತ್ರ ಸಾಹಿತಿ ಬರಹಗಾರ ಜಯಂತ್ ಕಾಯ್ಕಿಣಿಯವರಿಗೆ ಪ್ರತಿಷ್ಠಿತ ಕುಸುಮಗ್ರಾಜ್ ರಾಷ್ಟ್ತ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಯಶವಂತರಾವ್ ಚವ್ಹಾಣ್ ಮಹಾರಾಷ್ಟ್ತ್ರ ಮುಕ್ತ ವಿಶ್ವವಿದ್ಯಾಲಯ ನಾಸಿಕ್ ಹಾಗೂ ಕುಸುಮಗ್ ರಾಜ್ ಪ್ರತಿಷ್ಠಿತ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಹಣ ಹಾಗೂ ಪದಕಗಳನ್ನು ಹೊಂದಿದೆ. ಇದೇ 13 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
[...more]