ಗ್ವಾಲಿಯಾರ್, ಫೆ.24: ವಿಶ್ವ ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ ತಂಡೂಲ್ಕರ್ ಅಜೆಯ 200 ಓಟಗಳನ್ನು ಗಳಿಸುವುದರ ಜೊತೆ ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ಬರೆದಿದ್ದಾರೆ.
ಸಚಿವ ಅವರು ವಿಶ್ವ ದಾಖಲೆಯ ದ್ವಿಶತಕ ಭಾರಿಸುವುದರ ಜೊತೆಗೆ ವೈಯಕ್ತಿಕವಾಗಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಈ ಹಿಂದೆ 1997ರಲ್ಲಿ ಭಾರತದ ವಿರುದ್ದ ಪಾಕಿಸ್ತಾನದ ಸೈಯದ್ ಅನ್ವರ್ 194 ರನ್ ಗಳಿಸಿದ್ದು ಬ್ಯಾಟ್ಸ್ಮನ್ ಒಬ್ಬರಿಂದ [...] [...more]
ಚಿತ್ತಗಾಂಗ್, ಜ. 20: ಆರಂಭಿಕ ಗೌತಮ್ ಗಂಬೀರ್ (116) ಬಾರಿಸಿದ ದಾಖಲೆಂುು ಶತಕ ನೆರವಿನಿಂದ ಪ್ರವಾಸಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಂುುುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಂುು ಮೊದಲ ಪಂದ್ಯ ಗೆಲ್ಲಲು ಆತಿಥೇಂುುರಿಗೆ 415 ರನ್ನುಗಳ ಬೃಹತ್ ಮೊತ್ತವನ್ನು ನಿಗದಿಪಡಿಸಿದೆ.
ಜವಾಬು ನೀಡಲಾರಂಭಿಸಿದ ಬಾಂಗ್ಲಾ ದೇಶ ನಾಲ್ಕನೇ ದಿನದಂತ್ಯಕ್ಕೆ 18 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.
ಆರಂಭಿಕ ಇಮ್ರುಲ್ ಕೇಯ್ಸ್ (1) ಹಾಗೂ ಶಹಾರ್ರಿಂುುಾರ್ ನಪೀಸ್ (21) ವಿಕೆಟಗಳು ಆತಿಥೇಂುುರಿಗೆ ನಷ್ಟವಾಗಿದ್ದು, [...] [...more]
ನವದೆಹಲಿ.27-ಪಿಚ್ ಸಮಸ್ಯೆ ಯಿಂದಾಗಿ ಇಂದಿಲ್ಲಿ ಆರಂಭಗೊಂಡಿದ್ದ ಭಾರತ-ಶ್ರೀಲಂಕಾ ನಡುವಣ 5ನೆ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯ ರದ್ದಾಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಲಂಕಾಪಡೆ ಆರಂಭದಲ್ಲೇ ಆಘಾತ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ನಾಯಕ ಕುಮಾರ್ ಸಂಗಾಕ್ಕಾರ ಪಿಚ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿಚ್ ಪರೀಶೀಲನೆ ನಡೆಸಿದ ಬಿಸಿಸಿಐನ ವಿಜಯ್ ಬಹದ್ದೂರ್ ಮಿಶ್ರಾ ಹಾಗೂ ಮ್ಯಾ ರೆಫ್ರಿ ಆಲನ್ ಹರಿಸ್ಟ್ ಪಂದ್ಯವನ್ನು ರದ್ದುಗೊಳಿಸಿದರು. ಅಪಾರ ಪ್ರಮಾಣದಲ್ಲಿದ್ದ ಪ್ರೇಕ್ಷಕರು ಪಂದ್ಯ ರದ್ದುಗೊಳಿಸಿದ್ದಕ್ಕೆ ತೀವ್ರ ಆಕ್ರೌಶ ವ್ಯಕ್ತಪಡಿಸಿ [...] [...more]
ನವದೆಹಲಿ,28-ವಿರೇಂದ್ರ ಸೆಹ್ವಾಗ್ ಅವರ ಆಟ ವೀಕ್ಷಿಸಲು ನಗರ ಸಜ್ಜಾಗುತ್ತಿದ್ದಂತೆ ಇನ್ನೊಂದು ಸಿಹಿ ಸುದ್ದಿ ಬಂದಿದೆ. ಸೆಹ್ವಾಗ್ ಆಧುನಿಕ ಕ್ರಿಕೆಟ್ನ ಮಹತ್ತರ ಆಟಗಾರ ಎಂದು ಅಂತಾರಾಷ್ಟ್ತ್ರೀಯ ಆಟಗಾರರು ಪ್ರಶಂಸೆಯ ಮಳೆಗೈದಿದ್ದಾರೆ.
ಪ್ರಸಿದ್ದ ಅಂಕಣಕಾರ ಪೀಟರ್ ರೋಬಕ್ ಅವರು ಸೆಹ್ವಾಗ್ ಅವರನ್ನು ವರ್ಷದ ಸ್ಟಾರ್ ಇಲೆವೆನ್ ತಂಡದಲ್ಲಿ ಸೇರ್ಪಡೆಗೊಳಿಸಿ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಸ್ಪೌಟಕ ಬ್ಯಾಟ್ಸ್ಮನ್ ಎಂದು ಹೊಗಳಿದ ಬಳಿಕ ಬ್ರಿಟನ್ನಿನಲ್ಲಿ ಡೈಲಿ ಟೆಲಿಗ್ರಾಫ್ ಸೆಹ್ವಾಗ್ ಅವರನ್ನು ದಶಕದ ಕ್ರಿಕೆಟಿಗ ಎಂದು ಶ್ಲಾಘಿಸಿದೆ. ಸ್ಪೌಟಕ ಆರಂಭಿಕರು ನಮ್ಮೊಂದಿಗೆ ಯಾವಾಗಲೂ ಇದ್ದಾರೆ. [...] [...more]
ನಾಗ್ಪುರ,17-ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದ್ದು, ಆತಿಥೇಯ ಭಾರತಕ್ಕೆ ಕಳಪೆ ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆಯೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ಅದೇ ವೇಳೆ ಜ್ವರದಿಂದ ಬಳಲುತ್ತಿರುವ ಯುವರಾಜ್ಸಿಂಗ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಮಂಡಿ ನೋವಿಗೊಳಗಾಗಿದ್ದ ಆರಂಭಿಕ ವಿರೇಂದ್ರ ಸೆಹ್ವಾಗ್ ಚೇತರಿಸಿದ್ದು, ಎರಡನೇ ಏಕದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ. ರನ್ನುಗಳ ಹೊಳೆಯೇ ಹರಿದ ಮೊದಲ ಪಂದ್ಯವನ್ನು ರೋಚಕವಾಗಿ ಮೂರು ರನ್ನುಗಳಿಂದ ಗೆದ್ದುಕೊಂಡಿದ್ದ ಮಹೇಂದ್ರ್ಸಿಂಗ್ ಧೋನಿ ಪಡೆ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-0 ಅಂತರದ ಮಹತ್ವದ [...] [...more]
ನವದೆಹಲಿ,16-ಪುರಷರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲುವಿಗಾಗಿ ಕಳೆದ ಏಳು ವರ್ಷಗಳಿಂದ ನಿರಂತರ ಬರ ಎದುರಿಸುತ್ತಿರುವ ಮಹೇಶ್ ಭೂಪತಿ, ನೂತನ ಪಾಲುದಾರ ಜೋಡಿ ಮ್ಯಾಕ್ಸ್ ಮಿರ್ನಯಿ ಅವರೊಂದಿಗೆ ಉತ್ತಮ ಆರಂಭ ತೋರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮಹೇಶ್ ಭೂಪತಿ ಕಳೆದ 2002ರಲ್ಲಿ ಅಮೆರಿಕ ಓಪನ್ ಡಬಲ್ಸ್ನಲ್ಲಿ ಗೆದ್ದಾಗ ಬೆಲಾರಷ್ಯನ್ ಮ್ಯಾಕ್ಸ್ ಅವರ ಜೋಡಿಯಾಗಿದ್ದರು. ಮತ್ತೆ ಮ್ಯಾಕ್ಸ್ ಅವರೊಂದಿಗಿನ ಜತೆಯಿಂದಾಗಿ ಉತ್ತಮ ಫಲಿತಾಂಶ ದೊರೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪರಸ್ಪರರದ್ದು ನೂತನ ಜೋಡಿಯಲ್ಲ. ನಾವಿಬ್ಬರು ಜೊತೆಯಾಗಿ ಹಲವಾರು ಪಂದ್ಯಗಳನ್ನು [...] [...more]
ಮೊಹಾಲಿ,16- ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ನಾಯಕ ಸ್ಥಾನದಿಂದ ಆಲ್ರೌಂಡರ್ ಆಟಗಾರ ಯುವರಾಜ್ ಸಿಂಗ್ರನ್ನು ಬುಧುವಾರ ವಜಾಗೊಳಿಸಲಾಗಿದ್ದು ಐಪಿಎಲ್ ಮೂರನೇ ಆವೃತ್ತಿಗಾಗಿನ ಕಪ್ತಾನಗಿರಿಯನ್ನು ಶ್ರೀಲಂಕಾ ನಾಯಕ ಕುಮಾರ ಸಂಗಕ್ಕರ ಅವರಿಗೆ ವಹಿಸಿಕೊಡಲಾಗಿದೆ.
ಕಿಂಗ್ಸ್ ಕೋಚ್ ಟಾಮ್ ಮೂಡಿಯವರಿಗೆ ಯುವಿ ಕಾರ್ಯನಿರ್ವಹಣೆ ಬಗ್ಗೆ ತೃಪ್ತಿ ಇರಲಿಲ್ಲ. ತಂಡದ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಯುವಿ ಕಡೆಗಣಿಸುತ್ತಿರುವದು ಅವರ ಕೆಂಗಣ್ಣಿಗೆ ಗುರಿಯಾಗಿತ್ತಲ್ಲದೆ ಈ ಬಗ್ಗೆ ಫ್ರಾಂಚೈಸಿ ಮಾಲಕರಿಗೆ ದೂರು ನೀಡಲಾಗಿತ್ತು. ಇದರ ಹಿನ್ನಲೆಯಲ್ಲಿ ನಾಯಕತ್ವ ಬದಲಾವಣೆ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ. [...] [...more]
ರಾಜಕೋಟ್,15- ಆರಂಭಿಕ ತಿಲಕರತ್ನೆ ದಿಲ್ಶಾನ್ ಬಾರಿಸಿದ ಅಮೋಘ ಶತಕ (160) ಹಾಗೂ ನಾಯಕ ಕುಮಾರ ಸಂಗಕ್ಕರ (90) ಮತ್ತು ಉಪುಲ್ ತರಂಗ (67) ಬಾರಿಸಿದ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ಆತಿಥೇಯ ಭಾರತ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಲಂಕಾ ಮೂರು ರನ್ನುಗಳಿಂದ ವಿರೋಚಿತವಾಗಿ ಸೋಲುಂಡಿದೆ.
ಗೆಲುವಿಗಾಗಿ 41 ರನ್ನುಗಳ ಬೃಹತ್ ಮೊತ್ತವನ್ನು ಬೆನ್ನಹತ್ತಿದ್ದ ಸಂಗಕ್ಕರ ಪಡೆ 50 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 411 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐದು ಏಕದಿನ ಪಂದ್ಯಗಳ [...] [...more]
ನವದೆಹಲಿ,14- ಲಂಡನ್ನಲ್ಲಿ ನಡೆಯಲಿರುವ 2012ರ ಒಲಂಪಿಕ್ಸ್ ಪಂದ್ಯಾವಳಿಗೆ ಟೆನಿಸ್ ಮಿಶ್ರ ಡಬಲ್ಸ್ ಸೇರ್ಪಡೆಗೊಳಿಸುವದರಿಂದ ಭಾರತಕ್ಕೆ ಪದಕ ಗಳಿಸುವ ಉತ್ತಮ ಅವಕಾಶ ದೊರೆತಂತಾಗಿದೆ ಎಂದು ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ.
ಇತ್ತೀಚೆಗೆ ಅಂತಾರಾಷ್ಟ್ತ್ರೀಯ ಒಲಂಪಿಕ್ಸ್ ಸಮಿತಿ, 2012ರಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಟೆನಿಸ್ ಮಿಶ್ರ ಡಬಲ್ಸ್ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ.
ನಾನು ತುಂಬಾ ಉತ್ಸಾಹಿತಳಾಗಿದ್ದೇನೆ. ನಮಗೆ ಟೆನಿಸ್ ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಪದಕ ಪಡೆಯುವ ಉತ್ತಮ ಅವಕಾಶ ಒದಗಿ ಬಂದಿದೆ. ಮಿಶ್ರ ಡಬಲ್ಸ್ನಿಂದ ನಿವೃತ್ತಿ ಪಡೆಯುವ ನನ್ನ ಯೋಜನೆಯನ್ನು ಮರುಪರೀಶೀಲಿಸಬೇಕಾಗಿದೆ [...] [...more]
ರಾಜ್ಕೋಟ್,14- ನಾಯಕ ಧೋನಿಗೆ ಪ್ರಸಕ್ತ ಸರಣಿಯು ಅತ್ಯಂತ ಪ್ರಾಮುಖ್ಯವೆನಿಸಿದೆ. 151 ಏಕದಿನ ಪಂದ್ಯಗಳನ್ನಾಡಿರುವ ಅವರು 149 ಕ್ಯಾಚ್ ಹಾಗೂ 49 ಸ್ಟಂಪಿಂಗ್ ಮೂಲಕ ಒಟ್ಟು 198 ಬಲಿ ಪಡೆದಿದ್ದು, 200ಕ್ಕೆ ಕೇವಲ ಎರಡಷ್ಟೇ ಅಗತ್ಯವಿದೆ.
ಅಷ್ಟೇ ಅಲ್ಲದೆ ಇಷ್ಟೇ ಏಕದಿನದಲ್ಲಿ 50.04 ಸರಾಸರಿಯಲ್ಲಿ 4954 ರನ್ ಗಳಿಸಿರುವ ಅವರಿಗೆ 5000 ಮೈಲುಗಲ್ಲನ್ನು ತಲುಪಲು ಇನ್ನು ಕೇವಲ 46 ರನ್ನಗಳ ಅಗತ್ಯವಿದೆ. ಪ್ರಸಕ್ತ ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಾಯಕ ಧೋನಿಗೆ ಅದೇ ಸ್ಥಾನದಲ್ಲಿ ಮುಂದುವರಿಯಲು ಉತ್ತಮ [...] [...more]