ಅಥಣಿ : ತಾಲ್ಲೂಕಿನ ಕಟಗೇರಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಆಕಸ್ಮಿಕವಾಗಿ ಮನೆ ಕುಸಿದು ಮೂವರು ಅಸು ನಿಗಿದ ಘಟನೆ ಜರುಗಿದೆ.
ಈ ದುರ್ಘಟನೆಯಲ್ಲಿ ಮಡಿದವರನ್ನು ಶಿವಪ್ಪ ಗುರಶಾಂತ ಕಣ್ಣೂರ (68), ಸುಮಿತ್ರಾ ಶಿವಪ್ಪ ಕಣ್ಣೂರ (60), ಶಕುಂತಲಾ ಸಿದ್ಧರಾಯ ಕಣ್ಣೂರ (3) ಪುಟ್ಟ ಬಾಲಕಿ ಎಂದು ಗುರುತಿಸಲಾಗಿದ್ದು. ಮನೆಯ ಮೇಲ್ಛಾವಣಿ ಕುಸಿದು ಈ ಮೂವರ ಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶಿವಪ್ಪ ಎಂಬುವವನು ಕಟಗೇರಿ ಗ್ರಾಮದಲ್ಲಿ ನೇಕಾರಿಕೆ ಉದ್ಯೌಗವನ್ನು ಮಾಡುತ್ತಿದ್ದನೆಂದು ತಿಳಿದು [...] [...more]
ಅಥಣಿ,6-ತಾಲೂಕಿನಲ್ಲಿ ಸತತ ಮಳೆಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಸಾವಿರಾರು ಕುಟುಂಬಗಳಿಗೆ ತಕ್ಷಣ ಪುನರವಸತಿ ಕಲ್ಪಿಸುವ ಕಾರ್ಯ ಭರದಿಂದ ನಡೆಯಬೇಕೆಂದು ಜನತೆಯ ಹಾಗೂ ರಾಜಕೀಯ ಮುಖಂಡರ ಆಗ್ರಹ.
ನಿರಾಶ್ರಿತರಿಗೆ ತಾಲೂಕಾಡಳಿತ ಇಲ್ಲಿಯವರೆಗೆ 40 ಕೇಂದ್ರಗಳನ್ನು ಆರಂಭಿಸಿ ಎಂದು ತಹಶೀಲ್ದಾರ ಶರಣಬಸಪ್ಪ ಕೊಟೆಪ್ಪಗೋಳ ತಿಳಿಸಿದ್ದಾರೆ. ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 5398 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನೀಗೀಡಾಗಿವೆ.
ಅಥಣಿ ನಗರದಲ್ಲಿಯ ಪರಸಿ ಅಂಗಡಿ ಚೇತನಾ ಸೆಲ್ಸ ಕಾರ್ಪೊರೇಷನ್ ಗೋಡಾವುನ ಒಂದರಲ್ಲಿಯೇ ಹಳ್ಳದ ಹಾಗೂ ರಸ್ತೆ ಮೇಲೆ ಒಂದು ಫೂಟ ಎತ್ತರದಲ್ಲಿ ಹರಿಯುತ್ತಿರುವ [...] [...more]
ಅಥಣಿ:- ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಥಣಿ ತಾಲೂಕು ನಲುಗಿ ಹೋಗಿದ್ದು, ಲಕ್ಷಾಂತರ ರೂಪಾಯಿ ಆಸ್ತ್ತಿಪಾಸ್ತಿ ಹಾಗೂ ಬೆಳೆ ಹಾನಿ ಸಂಭವಿಸಿದೆ.
ಸತತ ಸುರಿಯುತ್ತಿರುವ ಭಾರೀ ಮಳೆಗೆ ಈವರೆಗೆ ತಾಲೂಕಿನಲ್ಲಿ ಒಟ್ಟು ಎಂಟು ಲಕ್ಷ ರೂ.ಹಾನಿ ಸಂಭವಿಸಿದೆ ಹಾಗೂ 2400 ಮನೆಗಳು ನೆಲಕಚ್ಚಿವೆ. ತಾಲೂಕಿನ ಖೋತನಟ್ಟಿ,ಹಾಲಳ್ಳಿ ಸೇರಿದಂತೆ ಹಲವಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು. ಬಡಚಿ,ಸಪ್ತಸಾಗರ ಗ್ರಾಮಗಳ ಒಟ್ಟು ಸುಮಾರು 830 ಎಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತಂಬಾಕು,ಹತ್ತಿ,ಕಬ್ಬು ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.ಕಳೆದ [...] [...more]
Khanapur Test News
[...more]