(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 23- ಮೊದಲಿನ ಕಾಲದಲ್ಲಿ ಇಂದಿನಂತೆ ವೈದ್ಯಕೀಯ ಸೇವೆಗಳು ಉಪಲಬ್ಧವಿರಲಿಲ್ಲ. ಇಂದು ಸರಕಾರ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಗಳನ್ನು ಹೆಚ್ಚಿಸುವದರೊಂದಿಗೆ 24ಥ7 ಯೋಜನೆಯಡಿ ತಾಲೂಕಿನ ಮೂರು ಆಸ್ಪತ್ರೆಗಳಲ್ಲಿ ವಾರದ 24 ಗಂಟೆ ಸೇವೆ ಒದಗಿಸುವ ವ್ಯವಸ್ಥೆ ಮಾಡಿರುವದಾಗಿ ಹುಕ್ಕೇರಿ ತಾಲೂಕಾ ವೈದ್ಯಾಧಿಕಾರಿ ಡಾ.ಮುನ್ಯಾಳ ಅವರು ತಾಲೂಕಿನ ಪತ್ರಕರ್ತರಿಗೆ ಆಸ್ಪತ್ರೆಗಳ ವೀಕ್ಷಣೆ ಪ್ರವಾಸದಲ್ಲಿ ತಿಳಿಸಿದರು.
ಈ ಮುನ್ನ ತಾಲೂಕಿನಲ್ಲಿ ದಡ್ಡಿ ಹಾಗೂ ಅಮ್ಮಣಗಿ ಗ್ರಾಮಗಳಲ್ಲಿ ಮಾತ್ರ ಪ್ರಾಥಮಿಕ [...] [...more]
ಹುಕ್ಕೇರಿ 29: ಹುಕ್ಕೇರಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಡ ಜನರಿಗೆ ವಸತಿ ಕಲ್ಪಿಸುವ ರಾಜ್ಯ ಸರಕಾರದ ನಮ್ಮ ಮನೆ ಯೋಜನೆಯಡಿ ವಸತಿಗಳ ಬಡ್ಡಿ ಸಹಾಯಧನ ಯೋಜನೆಯನ್ನು ಸ್ಥಳೀಯ ಬ್ಯಾಂಕುಗಳ ಸಹಯೋಗದಲ್ಲಿ ಜಾರಿಗೆ ತರಲು ಪಟ್ಟಣ ಪಂಚಾಯತ ನಿರ್ಧರಿಸುವದಾಗಿ ಪ.ಪಂ ಮುಖ್ಯಾಧಿಕಾರಿ ಈರಣ್ಣಾ ಬಗನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಹ ಫಲಾನುಭವಿಗಳಿಗೆ ಒಂದು ಲಕ್ಷ ರೂ., ಗಳ ವರೆಗೆ ಸಹಾಯಧನ ನೀಡಲಾಗುವದು. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ನಿರ್ಮಿತಿ ಕೇಂದ್ರ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ದಿ [...] [...more]
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 17 : ಇಂದಿನಿಂದ ಸ್ಥಳೀಯ ಶ್ರೀ ಗುರುಶಾಂತೇಶ್ವರ ಹಿರೇಮಠದಲ್ಲಿ ಪೀಠಾಧ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ವಿರುಪಾಕ್ಷಲಿಂಗ ಶಿವಾಚಾರ್ಯ ಪಾಠಶಾಲೆ ವತಿಯಿಂದ 11 ದಿನಗಳ ವರೆಗೆ ಶ್ರೀ ಮಹಾರುದ್ರ ಹೋಮವನ್ನು ಏರ್ಪಡಿಸಲಾಗಿದೆ. 11 ದಿನಗಳ ವರೆಗೆ ನಡೆಯಲಿರುವ ಈ ಹೋಮ ನಗರದಲ್ಲಿ ಪ್ರ ಪ್ರಥಮವಾಗಿದೆ.
ಶ್ರೀ ಮಹಾರುದ್ರ ಹೋಮ ದಿನಾಂಕ 27 ರಂದು ಮುಕ್ತಾಯಗೊಳ್ಳಲಿದ್ದು ಪ್ರಾತ:ಕಾಲ 4.30 ಕ್ಕೆ ಆರಂಭಗೊಂಡು 6.30 ಕ್ಕೆ ಮಂಗಲಗೊಳ್ಳುವ ಹೋಮದಲ್ಲಿ ವಿದ್ವಾಂಸ ಚಂದ್ರಶೇಖರ ಶಾಸ್ತ್ತ್ರಿಗಳು ಗುಂಡಸಾಗರ ಹಾಗೂ ವೈದಿಕ [...] [...more]
ವರದಿ : ರಾಮಣ್ಣಾ ನಾಯಿಕ
ಹುಕ್ಕೇರಿ 10 : ಚುನಾವಣೆ ರಣತಂತ್ರವಾಗಿದ್ದು ಅಲಕ್ಷತೆ ಮಾಡಿದಲ್ಲಿ ಕಡಿಮೆ ಮತಗಳನ್ನು ಪಡೆಯಬಹುದು ಕಾರಣ ಜನರ ಮನ ಪರಿವರ್ತನೆ ಮಾಡಿ ಪ್ರಾಮಾಣಿಕತೆಯಿಂದ ನೈತಿಕ ಹಕ್ಕಿನೊಂದಿಗೆ ಮತ ಯಾಚನೆ ಮಾಡುತ್ತಿದ್ದು 11 ತಾಲೂಕಿನ ಪೈಕಿ ಈಗಾಗಲೇ 8 ತಾಲೂಕುಗಳಲ್ಲಿ ನಡೆಸಲಾದ ಪ್ರಚಾರ ಸಭೆಗಳಲ್ಲಿ ಜನ ಭಾರತೀಯ ಜನತಾ ಪಕ್ಷದತ್ತ ಒಲವು ತೋರುತ್ತಿರುವದಾಗಿ ಸಹಕಾರ ಸಚಿವ ಲಕ್ಷ್ಮಣ ಸನದಿ ತಿಳಿಸಿದರು.
ಅವರು ಸಮೀಪದ ಬಡಕುಂದ್ರಿ ಹೊಳೆಮ್ಮಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ [...] [...more]
(ಹುಕ್ಕೇರಿ ಕಾರ್ಯಾಲಯದಿ ಂದ)
ಹುಕ್ಕೇರಿ 10 : ನಗರದ ಹೃದಯ ಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಸ್ಥಳೀಯ ಶ್ರೀ ಗುರುಶಾಂತೇಶ್ವರ ಹಿರೇಮಠದ ಷ.ಬೃ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಂದ ಸಾಯಿಬಾಬಾ ಅಮೃತ ಶಿಲೆಯ ಮೂರ್ತಿಗೆ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ನೆರವೇರಿತು.
ಮುನ್ನಾ ದಿನ ಉತ್ಸವ ಮೂರ್ತಿಯನ್ನು ಮಹಿಳೆಯರ ಕುಂಭೋತ್ಸವ ಹಾಗೂ ಸವಾದ್ಯ ಮೆರವಣಿಗೆ ಮೂಲಕ ಮಂದಿರದಲ್ಲಿ ತರಲಾಯಿತು. ಇಚಲಕರಂಜಿಯ ವೇದಮೂರ್ತಿ ಪುರುಷೋತ್ತಮ ವಡೇರ ಇವರಿಂದ ಮುಂಜಾನೆ ಹೋಮ-ಹವನ, ಹಾಗೂ ವಿಧಿ ಪೂರ್ವಕ ಪೂಜೆ, ಆರತಿ ಮುಂತಾದವು ನಡೆದವು. [...] [...more]
ಹುಕ್ಕೇರಿ,26- ಕಳೆದ ವರ್ಷ ನವೆಂಬರ್-2008ರಂದು ಮುಂಬಯಿಯಲ್ಲಿ ಜರುಗಿದ ಭಯೋತ್ಪಾದಕರ ದಾಳಿಯಲ್ಲಿ ನೂರಾರು ಭಾರತೀಯರು ತಮ್ಮ ಪ್ರಾಣ ತೆತ್ತ ಹಿನ್ನಲೆಯಲ್ಲಿ ಭಯೋತ್ಪಾದನಾ ವಿರುದ್ಧ ನಿನ್ನೆ ನಿಪ್ಪಾಣಿಯಿಂದ ಬೆಳಗಾವಿವರೆಗಿನ 77 ಕಿ.ಮೀ ಅಂತರದ ರಸ್ತೆಯಲ್ಲಿ ಆಯೋಜಿಸಲಾದ ಬಾಲಕರ ಸ್ಕೇಟಿಂಗ ರ್ಯಾಲಿಯು ಹಿರಣ್ಯಕೇಶಿ ಸಕ್ಕರೆ ಕಾರಖಾನೆಯ ಸಮೀಪ ಆಗಮಿಸುತ್ತಿದ್ದಂತೆ ಕಾರಖಾನೆಯ ಉಪಾಧ್ಯಕ್ಷ ಶಿವನಾಯಿಕ ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ ಅವರು ಗುಲಾಬಿ ಪುಷ್ಪಗಳನ್ನು ನೀಡುವದರೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು.
ಬೆಳಗಾವ ರೋಲರ ಸ್ಕೇಟಿಂಗ್ ಅಕಾಡೆಮಿಯ ಮುಂದಾಳುತ್ವದಲ್ಲಿ ಹಾಗೂ ರೋಟರಿ ಕ್ಲಬ್ ಆಫ್ ಹೆರಿಟೇಜ [...] [...more]
ರಾಮಣ್ಣಾ ನಾಯಿಕ
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 24 : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಸ್ತವನಿಧಿಯಲ್ಲಿ ನಾಳೆ ಬುಧವಾರ ದಿನಾಂಕ 25 ರಿಂದ ಶುಕ್ರವಾರ 27 ನವ್ಹಂಬರ ವರೆಗೆ ವಿಶ್ವ ಶಾಂತಿ, ಆತ್ಮಶಾಂತಿ, ವಿಶ್ವಕಲ್ಯಾಣ, ಆತ್ಮಕಲ್ಯಾಣ, ಪುಣ್ಯ ಸಂಪಾದನೆಗಾಗಿ 1008 ನವಖಂಡ ಪಾಶ್ವನಾಥ ತೀರ್ಥಂಕರರ ಮೂರ್ತಿಗಳಿಗೆ ಮಾಡಲಾದ ವಜ್ರಲೇಪ ಶುದ್ದೀಕರಣ ನಿಮಿತ್ತ ಲಘು ಪಂಚಕಲ್ಯಾಣ ಪ್ರತಿಷ್ಟಾ ಮಹೋತ್ಸವ ಹಾಗೂ ಬ್ರಹ್ಮೌತ್ಸವವನ್ನು ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಹಾಗೂ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶುಭ [...] [...more]
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 31 : ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯಾಗಿ ಇಂದಿಗೆ 25 ವಸಂತಗಳು ಗತಿಸಿದ ಪ್ರಯುಕ್ತ ಇಂದು ಸ್ಥಳೀಯ ಪಟ್ಟಣ ಪಂಚಾಯತ ಸಭಾ ಗೃಹದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ರವಿ ಕರಾಳೆಯವರು ತಮ್ಮ ಕಾರ್ಯಕರ್ತರೊಂದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾವ ಚಿತ್ರಕ್ಕೆ ವಿಧಿ ಪೂರ್ವಕ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವದರೊಂದಿಗೆ ಭಾವಪೂರ್ಣ ಶೃದ್ದಾಂಜಲಿ ಅರ್ಪಿಸಿದರು.
ಡಾ. ಸದಾನಂದ ವಾಗೋಜಿ, ಸಲೀಮ ಕಳಾವಂತ, ಪಟ್ಟಣ ಪಂಚಾಯತ ಸದಸ್ಯರಾದ ಚಂದ್ರಶೇಖರ ಗಂಗಣ್ಣವರ, ಮಾಜಿ ಸದಸ್ಯ [...] [...more]
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 31 : ಹುಕ್ಕೇರಿ ಪಟ್ಟಣ ಪಂಚಾಯತ ವತಿಯಿಂದ ಇಂದು ಮುಂಜಾನೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 25 ನೇ ಪುಣ್ಯಾರಾಧನೆಯ ನಿಮಿತ್ತ ಮುಖ್ಯಾಧಿಕಾರಿ ಈರಣ್ಣಾ ಬಗನಾಳ ಅವರು ಇಂದಿರಾ ಗಾಂಧಿಜಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.
ಯೋಜನಾಧಿಕಾರಿ ಡಾ. ಎಸ್.ಆರ್.ರೋಗಿ, ಕರ್ನಾಟಕ ವಿಕಾಸ ಬ್ಯಾಂಕಿನ ವ್ಯವಸ್ಥಾಪಕರು ಅವಿನಾಶ ಅಸೋದೆ, ಕಿರಿಯ ಅಭಿಯಂತ ಶರಣಪ್ಪ, ಆನಂದ ಕುಂಬಾರ, ಮಹೇಶ ಪಟ್ಟಣ, ಬಾಬು ಪಾಟೀಲ, ಕಂದಾಯ ನೀರೀಕ್ಷಕ ಪಿ.ಎ.ಕಲ್ಯಾಣಶೆಟ್ಟಿ, ಮಹಾಂತೇಶ ಕವಲಾಪೂರ, ಎ.ಬಿ.ಬಳ್ಳುರ್ಗಿ, ಅಪ್ಪಾಸಾಹೇಬ [...] [...more]
(ಹುಕ್ಕೇರಿ ಕಾರ್ಯಾಲಯದಿಂದ)
ಹುಕ್ಕೇರಿ 21 : ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ : ಬ್ಯಾಂಕುಗಳ ಸದಸ್ಯತ್ವ ಹೊಂದಿದ ಹೊಂದಿದ 10 ತಾಲೂಕಿನಲ್ಲಿಯ ಅಂಗವಿಕಲ ಸದಸ್ಯರಿಗೆ ಪ್ರತಿ ತಾಲೂಕಿಗೆ 5 ರಂತೆ ತ್ರಿ ಚಕ್ರ ಸಾಯಕಲ್ ವಿತರಣೆ ಮಾಡಲಾಗುತ್ತಿದ್ದು ಇಂದು ಸ್ಥಳೀಯ ಬಿ.ಡಿ.ಸಿ.ಸಿ ಬ್ಯಾಂಕಿನ ಹುಕ್ಕೇರಿ ಶಾಖೆಯಲ್ಲಿ ತಾಲೂಕಿನ ಸಂಕೇಶ್ವರ, ಎಲಿಮುನ್ನೌಳಿ, ಬುಗಟೆ ಆಲೂರ, ಪರಕನಟ್ಟಿ ಹಾಗೂ ಬಸ್ತವಾಡ ಗ್ರಾಮಗಳ 5 ಅಂಗವಿಕಲರಿಗೆ ಸಾಯಕಲ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು [...] [...more]