ರಾಮದುರ್ಗ, 20-: ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ತನ್ನ 3 ಮಕ್ಕಳ ಜೊತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದರೆ ಹನಮವ್ವ ದ್ಯಾಮಣ್ಣಾ ಕುರಿ(25) ಇವ ಮಕ್ಕಳಾದ 4 ವರ್ಷದ ಹೆಣ್ಣು ಮಗು ಪವಿತ್ರಾ, 2 ವರ್ಷದ ಗಂಡು ಮಗು ಬಸವರಾಜ ಮತ್ತು ಒಂದು ವರ್ಷದ ಪ್ರವೀಣ ಎಂದು ತಿಳಿದು ಬಂದಿದೆ.
ಮೂಲತಃ ತಾಲೂಕಿನ ಉಮತಾರ ಗ್ರಾಮದವಳಾದ ಹಣಮವ್ವಳನ್ನು [...] [...more]
ರಾಮದುರ್ಗ,18-1: ಗಣರಾಜ್ಯೌತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ಇಂದು ತಾಲೂಕಾ ಪಂಚಾಯತ ಸಭಾ ಭವನದಲ್ಲಿ ಶಾಸಕ ಅಶೋಕ ಪಟ್ಟಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರಜಾರಾಜ್ಯೌತ್ಸವದ ಅಂಗವಾಗಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ರಂಗೋಲಿ, ಭಾಷಣ ಮತ್ತು ನಿಬಂಧ ಸ್ಪರ್ದೆಗಳನ್ನು ಏರ್ಪಡಿಸಲು ನಿರ್ಧರಿಸಲಾಯಿತು.
ಜನೇವರಿ 26 ರಂದು ಬೆಳಿಗ್ಗೆ 7-45ಕ್ಕೆ ಎಲ್ಲ ಶಾಲಾ ಕಾಲೇಜು ಮತ್ತು ಸರ್ಕಾರಿ ಕಛೇರಿಗಳಲ್ಲಿ ಧ್ವಜಾರೋಹಣ ಮುಗಿಸಿ 8 ಗಂಟೆಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಲು ನಂತರ ನಗರದ ಪ್ರಮುಖ ಬೀದಿಗಳ [...] [...more]
ರಾಮದುರ್ಗ,17-1: ಶಾಲಾಭಿವೃದ್ದಿ ಸಮಿತಿಯ ಸದಸ್ಯರು ಶಾಲೆಯ ಅಭಿವೃಧ್ದಿ ಮತ್ತು ಶಾಲೆಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಿರು ವಂತೆ ಪ್ರತ್ನಿಸಬೇಕೆಂದು ಶಾಸಕ ಅಶೋಪ ಪಟ್ಟಣ ಹೇಳಿದರು.
ಅವರು ತಾಲೂಕಿನ ನರಸಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಮಂಜೂರಾದ ಶಾಲಾ ಕಟ್ಟಡಕ್ಕೆ ಚಾಲನೆ ನೀಡಿ ಮಾತನಾಡುತ್ತ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು ಅನುದಾನದ ಸಮರ್ಪಕ ಬಳಕೆ ಮಾಡಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸುವಂತೆ ಸಲಹೆ ಮಾಡಿದ ಅವರು ಎಸ್.ಡಿ.ಎಂ.ಸಿ ಯವರು ಶಾಲಾ [...] [...more]
ರಾಮದುರ್ಗ,17-2: ವ್ಯಾಪಾರಸ್ಥರ ಮನವೊಲಿಸುವ ಮೂಲಕ ಎ.ಪಿ.ಎಂ.ಸಿಯಲ್ಲಿ ಸೋರಿಕೆಯಾಗುತ್ತಿದ್ದ ಸೆಸ್ ಹಣವನ್ನು ಶೇ.80ರಷ್ಟು ಹೆಚ್ಚಿಸಲಾಗಿದೆ ಎಂಧು ಎ.ಪಿ.ಎಂ.ಸಿ ಅಧ್ಯಕ್ಷ ಮಹಾದೇಗೌಡ ಪಾಟೀಲ ಹೇಳಿದರು.
ಅವರು ಎ.ಪಿ.ಎಂ.ಸಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಸೇಸ್ ಸೋರಿಕೆಯಾಗುವದರ ಬಗ್ಗೆ ಮತ್ತು ಇದರಿಂದ ಸರ್ಕಾರಕ್ಕೆ ಹಾನಿಯಾಗುವದನ್ನು ವ್ಯಾಪರಸ್ಥರಿಗೆ ತಿಳಿಸಿ ಅವರ ಮನವೊಲಿಕೆಯಿಂದ ಸಾಧ್ಯವಾಗಿದೆ ಎಂದು ಹೇಳಿದರಲ್ಲದೆ ತಾವು ಎ.ಪಿ.ಎಂ.ಸಿ ಅಧ್ಯಕ್ಷರಾದ ಮೇಲೆ ತಾಲೂಕಿನ ಹಲವಾರ ಗ್ರಾಮಗಳ ರೈತರ ಹೊಲಕ್ಕೆ ಹೋಗುವ ರಸ್ತೆಗಳನ್ನು 81 ಲಕ್ಷ ರೂಗಳ ವೆಚ್ಚದಲ್ಲಿ ರಾಷ್ಟ್ತ್ರೀಯ ಉದ್ಯೌಗ ಖಾತ್ರಿ ಯೋಜನೆಯಡಿ ಕೈಗೊಳ್ಳಲು ನಿರ್ಧರಿಸಲಾಗಿದ್ದು [...] [...more]
ತೊಂಡಿಕಟ್ಟಿ,16 (ತಾ. ರಾಮದುರ್ಗ)- ಸ್ಥಳೀಯ ಶ್ರೀ ಗಾಳೇಶ್ವರ ಮಹಾಸ್ವಾಮಿಗಳ 65ನೇ ಪುಣ್ಯಾರಾಧನೆಯ ಅಂಗವಾಗಿ ಗಾಳೇಶ್ವರ ತರುಣನಾಟ್ಯ ಸಂಘ ಆಶ್ರಯದಲ್ಲಿ ಇಂದು ಗುರುವಾರ ದಿ17 ರಂದು ರಾತ್ರಿ 10-30ಕ್ಕೆ ಲಿಸಿಡಿದೆದ್ದ ಶಿವಶಕ್ತಿಳಿ ಎಂಬ ಸಾಮಾಜಿಕ ನಾಟಕ ಪ್ರದಶನಗೋಳಲ್ಲಿದೆ.
ಸ್ಥಳೀಯ ಗಾಳೇಶ್ವರ ಮಠದ ಪುಂಡಲೀಕ ಮಹಾರಾಜರು ಉದ್ಘಾಟಿಸುವರು, ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆ ವಹಿಸುವರು, ರವಿ ಹಿಪ್ಪರಗಿ, ಮಹಾದೇವಗೌಡ ಪಾಟೀಲ, ಸುರೇಶ ಕುಗೋಡ, ಪ್ರದೀಪ ಕಂಕಣವಾಡಿ, ವೆಂಕಣ್ಣ ಅಂಕಲಗಿ, ರಮೇಶ ಅರಕೇರಿ [...] [...more]
ರಾಮದುರ್ಗ,14-2: ತಾಲೂಕಾ ಕಾಂಗ್ರೇಸ್ ಕಾರ್ಯಕರ್ತರ ಮತ್ತು ಕಾಂಗ್ರೇಸ್ ಪಕ್ಷದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ನಗರದ ಶಿವಮೂರ್ತೇಶ್ವರ ಸಭಾ ಭವನದಲ್ಲಿ ಡಿಶೆಂಬರ 16 ರಂದು ಮುಂಜಾನೆ 10 ಗಂಟೆಗೆ ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪರಪ್ಪ ಜಂಗವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಶಾಸಕರಾದ ಅಶೋಕ ಪಟ್ಟಣ, ಸತೀಶ ಜಾರಕಿಹೋಳಿ ಮತ್ತು ವಿಧಾನ ಪರಿಷತ್ನ ಅಭ್ಯರ್ಥಿ ವೀರಕುಮಾರ ಪಾಟೀಲ, ಮಾಜಿ ಶಾಸಕರಾದ ಆರ್.ಎಸ್.ಪಾಟೀಲ, ಫಕೀರಪ್ಪ ಕೊಪ್ಪದ ಮುಂತಾದ ಪಕ್ಷದ ಹಿರಿಯ ಮುಖಂಡರು ಆಗಮಿಸುವ [...] [...more]
ರಾಮದುರ್ಗ,14-1: ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ದಿ ಕಾರ್ಯದ ವೇಗ ಹೆಚ್ಚಿಸಲು ಮತ್ತು ಗ್ರಾಮ ಪಂಚಾಯತಗಳಿಗೆ ಅನುದಾನ ಸಮರ್ಪಕ ಬಳಕೆಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತದ ಮತ ನೀಡಿ ಜಯಶಾಲಿಯಾಗುವಂತೆ ಮಾಡಲು ಸಂಸದ ಸುರೇಶ ಅಂಗಡಿ ಮನವಿ ಮಾಡಿದರು.
ಡಿಶೆಂಬರ 18 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಬಿ.ಜೆ.ಪಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿರುವ ಮಹಾಂತೇಶ ಕವಟಗಿಮಠ ಪರ ರಾಮದುರ್ಗದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು [...] [...more]
ರಾಮದುರ್ಗ,10-1: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ ಇತರ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನ ಪಡೆದು ಮುನ್ನಡೆ ಸಾಧಿಸುತ್ತದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡ್ಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ನಡೆದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ನಂತರ ವರದಿಗಾರರ ಜೊತೆ ಮಾತನಾಡುತ್ತ ಕಳೆದ ವಿಧಾನ ಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿ ಬಿ.ಜೆ.ಪಿ ಎಲ್ಲ ಪಕ್ಷಗಳಿಗಿಂತ ಮುನ್ನಡೆ ಸಾಧಿಸಲು ರಾಜ್ಯದ ಮತದಾರರು ಪಕ್ಷದ ಪರವಾಗಿ ಮತಚಲಾಯಿಸಿದ್ದಾರೆ. ಈ ಪರಿಷತ್ ಚುನಾವಣೆಯಲ್ಲಿ ಸ್ಥಳಿಯ [...] [...more]
ರಾಮದುರ್ಗ, 10-: ಧಾರವಾಡ ರಸ್ತೆ ಸುಧಾರಣೆಗಾಗಿ ಸವದತ್ತಿ ತಾಲೂಕಾ ಅಭಿವೃದ್ದಿ ಹೋರಾಟ ಸಮನ್ವಯ ಸಮಿತಿ ಡಿಸೆಂಬರ 11 ರಂದು ನೀಡಿರುವ ಬಂದ ಕರೆ ನೀಡಿದ್ದು ಬಂದಗೆ ಸಿ.ಪಿ.ಐ.ಎಂ ಜಿಲ್ಲಾ ಸಂಘಟನಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸವದತ್ತಿ ತಾಲೂಕಿನ ಜನತೆಯ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತೇವೆ ಎಂದು ಸಿ.ಪಿ.ಐ.ಎಂ ಮುಖಂಡರಾದ ವಿ.ಪಿ.ಕುಲಕರ್ಣಿ, ಗೈಬು ಜೈನೆಖಾನ, ನಾಗಪ್ಪ ಸಂಗೋಳ್ಳಿ ಮತ್ತು ಎಸ್.ಬಿ.ಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[...more]
ರಾಮದುರ್ಗ,4-: ಗೋಡಚಿ ಜಾತ್ರೆಯಿಂದ ಬರುತ್ತಿದ್ದ ಟಂ ಟಂ ವಾಹನವೊಂದು ಚಾಲಕನ ನಿರ್ಲಕ್ಷತನದಿಂದ ಪಲ್ಟಿಯಾಗಿ ಓರ್ವ ಬಾಲಕ ಮೃತಪಟ್ಟು 6 ಜನಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಮೃತಪಟ್ಟ ಬಾಲಕನನ್ನು ಚನ್ನಾಪೂರ ಸಣ್ಣ ಲಮಾಣಿ ತಾಂಡಾದ ಬಸವರಾಜ ಅಶೋಕ ದೊಡಮನಿ ಎಂದು ತಿಳಿದು ಬಂದಿದೆ. 6 ಜನರು ಗಾಯಗೊಂಡಿದ್ದು ಪ್ರಕರಣ ರಾಮದುರ್ಗ ಪೋಲಿಸ ಠಾಣೆಯಲ್ಲಿ ದಾಖಲಾಗಿದ್ದು ಪಿ.ಎಸ್.ಐ ಅರುಣ ಮುರಗುಂಡಿ ಮುಂದಿನ ತನಿಖೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬೈಲಹೊಂಗಲದ ಡಿ.ಎಸ್.ಪಿ ಪಾಟೀಲ, ಪ್ರಭಾರಿ ಸಿ.ಪಿ.ಐ ಮಲ್ಲನಗೌಡ ನಾಯ್ಕರ [...] [...more]