Kannadamma

ಪ್ರತಿಭಟನೆ ನಡೆಸುವವರು ನಿಜವಾದ ರೈತರಲ್ಲ; ಅಂಗಡಿ

17 ಇಲ್ಲವೇ 19 ರಂದು ಸಂಪುಟ ವಿಸ್ತರಣೆ
ಬೆಂಗಳೂರು, ಜೂ. 6 : ಬಹುನೀರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು ಜೂನ್ 17 ಅಥವಾ 19 ರಿಂದ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.

ಮುಂಬೈಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ರಾಷ್ಟ್ತ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮತ್ತಿತರರು ಸಂಪುಟ ವಿಸ್ತರಣೆ ಕುರಿತಂತೆ ರಾಷ್ಟ್ತ್ರೀಯ ಧುರೀಣರೊಂದಿಗೆ ಸಮಾಲೋಚನೆ  ನಡೆಸಿದ್ದಾರೆ.

ರಾಜ್ಯಸಭೆ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ 17 ರಂದು ಸಂಪುಟ ವಿಸ್ತರಣೆಯಾಗಲಿದೆ. ಒಂದು ವೇಳೆ ರಾಜ್ಯಸಭೆಗೆ ಚುನಾವಣೆ ನಡೆದರೆ 19 ರಂದು ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಭಾಜಪ ಉನ್ನತ ಮೂಲಗಳು ಹೇಳಿವೆ.

ರಾಜ್ಯಸಭೆಯ ಚುನಾವಣೆ 17 ರಂದು ನಡೆಯಲಿದೆ. ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ ಅಂದೇ ಸಂಪುಟ ವಿಸ್ತರಣೆ ನಡೆಯಲಿದೆ. ಚುನಾವಣೆ ನಡೆಯುವದು ಅನಿವಾರ್ಯವಾದರೆ ಶಾಸಕರು ಮತದಾನದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಇರುವುದರಿಂದ 19 ರಂದು ವಿಸ್ತರಣೆ ನಡೆಯಲಿದೆ.

ಈಗ ನಿರ್ಧರಿಸಿರುವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೂವರು ಸಚಿವರನ್ನು ಹೊಸದಾಗಿ ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಗಣಿ ಧಣಿಗಳ ಕೆಂಗಣ್ಣಿಗೆ ಗುರಿಯಾಗಿ ರಾಜೀನಾಮೆ ನೀಡಿದ್ದ ಶೋಭಾ ಕರಂದ್ಲಾಜೆ ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ವಿ. ಸೋಮಣ್ಣ ಹಾಗೂ ಮೈಸೂರಿನ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಸಂಸದ ಹಾಗೂ ವಿಧಾನಪರಿಷತ್ ಸದಸ್ಯ ವಿಜಯಶಂಕರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.

ಶೋಭಾ ಕರಂದ್ಲಾಜೆ ಅವರಿಗೆ ವಿದ್ಯುತ್ ಇಲಾಖೆ ಸೋಮಣ್ಣನವರಿಗೆ ವಸತಿ ಹಾಗೂ ವಿಜಯಶಂಕರ ಅವರಿಗೆ ಅರಣ್ಯ ಖಾತೆ ನೀಡುವ ಸಾಧ್ಯತೆ. ಆದರೆ ಈ ಹಿಂದೆ ಇಂಧನ ಖಾತೆ ವಹಿಸಿಕೊಂಡಿದ್ದ ಈಗ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಕೆ.ಎಸ್. ಈಶ್ವರಪ್ಪ ಇಂಧನ ಖಾತೆಯನ್ನು ತಮ್ಮ ಸಮುದಾಯದ ವಿಜಯಶಂಕರ ಅವರಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಈಗ ಸಚಿವರಾಗಲಿರುವ ವಿ.ಸೋಮಣ್ಣ ಹಾಗೂ ವಿಜಯಶಂಕರ ಈಗಾಗಲೇ  ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಅವರು ಸಚಿವರಾಗಲು ಯಾವುದೇ ತೊಂದರೆ ಸಧ್ಯಕ್ಕೆ ಇರುವುದಿಲ್ಲ.

ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಗೊತ್ತಾದ ಕೂಡಲೇ ಸಚಿವ ಸ್ಥಾನದ  ಮೇಲೆ ಕಣ್ಣು ಇಟ್ಟಿದ್ದ  ಶಾಸಕರು ಕತ್ತಿ ಝಳಪಿಸುವುದಕ್ಕೆ ಸಿದ್ದರಾಗ ತೊಡಗಿದ್ದಾರೆ. ಹಿರಿಯ ಶಾಸಕರಾದ ಶಂಕರಲಿಂಗೇಗೌಡ ಸಿ. ನಾರಾಯಣಸ್ವಾಮಿ. ಎ. ರಾಮದಾಸ, ಸಿ.ಟಿ. ರವಿ, ಬಿ.ಎನ್. ಜೀವರಾಜ, ಗೋಪಾಲಕೃಷ್ಣ ಬೇರೂಬ್ ಮತ್ತಿತರ ಶಾಸಕರ ಈ ಬಾರಿ ನೇರವಾಗಿಯೇ ಆಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಇದನ್ನು ಅರಿತುಕೊಂಡಿರುವ ಭಾಜಪ ಧುರೀಣ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿಯೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲು ಚಾಲನೆ ನೀಡಲಿದ್ದಾರೆ.

ಗರ್ಭಿಣಿಯಾದ ಯುವತಿ ;ಆಸ್ಪತ್ರೆಗೆ ದಾಖಲು
ಬೆಳಗಾವಿ, ಜೂ.6: ಮಾತು ಬಾರದ 22 ಹರೆಯದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ್ದಾರಿಂದ ನತದೃಷ್ಟ ಯುವತಿ ಗರ್ಭಿಣಿಯಾಗಿದ್ದು ರವಿವಾರ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ.

ಯುವತಿಯನ್ನು ಮುಜಾವರ ಬೀದಿಯ ರಹವಾಸಿ ಎನ್ನಲಾಗಿದ್ದು, ಈಕೆಯ ಮುಗ್ಧತನ ಹಾಗೂ ಮಾತು ಬಾರದ್ದನ್ನು ಬಳಸಿಕೊಂಡು ಕಾಮುಕ ವ್ಯಕ್ತಿ ಯುವತಿಯನ್ನು ಬಲತ್ಕರಿಸಿದ್ದಾನೆ.

ಮಾತು ಬಾರದ ಕಾರಣ ವ್ಯಕ್ತಿಗಳ ಹೆಸರು ಹೇಳಲಾಗದೆ ನಡೆದ  ಘಟನೆಗೆ ಪರಿತಪಿಸುತ್ತಿರುವ ಮುಖ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಯುವತಿಯ ಪಾಲಕರ ವೃದ್ದ ಚಿಂತಾಕ್ರಾಂತರಾಗಿದ್ದಾರೆ.

ಮುಗ್ದೆಯಾದ ಅನ್ಯಾಯಕ್ಕೆ  ಪರಿಹಾರ ಸಿಗಬೇಕು. ಕಾಮುಕ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯತತ್ಪರರಾಗಬೇಕೆಂದು ಮುಜಾವರ ಬೀದಿಯ ರಹವಾಸಿಗಳು ಒತ್ತಾಯಿಸಿದ್ದಾರೆ.

ಇನ್ನೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೋರ್ವಳು ತನ್ನ ಮೇಲೆ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಅಶೋಕ ಕೋಪರ್ಡೆ ಎಂಬುವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಮಾರ್ಕೆಟ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ವಿಶ್ವನಾಥರಿಗೆ ದತ್ತ ತಿರುಗೇಟು
ಬೆಂಗಳೂರು, ಜೂ.6: ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿಯನ್ನು ಕಣಕೆ ಇಳಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡನೇ ಅಭ್ಯರ್ಥಿಯ ಆಯ್ಕೆ ನಿರ್ಧಾರ ಪಕ್ಷದ ಏಕಮಾನ್ಯ ಬಿಟ್ಟ ವಿಷಯವಾಗಿದೆ ಎಂದರು. ಜೆಡಿಎಸ್ ಜೊತೆಗಿನ ಮೈತ್ರಿ ವಿಷಯ ಪ್ರಸ್ತಾಪಿಸಿದ ಅವರು ಮೈತ್ರಿಗೆ ಹಿನ್ನೆಡೆಯಾಗಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕು. ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು. ಕಾಂಗ್ರೆಸ್ ಹಿರಿಯ ಧುರೀಣ ಆಸ್ಕರ್ ಫರ್ನಾಂಡಿಸ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. 2ನೇ ಅಭ್ಯರ್ಥಿಯ ಪರೀಶೀಲನೆ ನಡೆಯತೊಡಗಿದೆ ಎಂದರು.

ಹಳ್ಳ ಹಿಡಿದ ಬೆಳಗಾವಿ ಬಸ್ ನಿಲ್ದಾಣ ಅಭಿವೃದ್ದಿ ಯೋಜನೆ
ಬೆಳಗಾವಿ,6-ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವ ಬಸ್ ದುರಸ್ತಿ ಘಟಕವನ್ನು ಆಟೋ ನಗರಕ್ಕೆ ಸ್ಥಳಾಂತರಿಸಿ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡುವ ಮಹತ್ವದ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ.

ಈ ಹಿಂದೆ ಶಾಲಿನಿ ರಜನೀಶ್ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿ ಬಸ್ ನಿಲ್ದಾಣದ ಆವರಣದಲ್ಲಿರುವ ಬಸ್  ದುರಸ್ತಿ ಘಟಕವನ್ನು ಆಟೋನಗರಕ್ಕೆ ಸ್ಥಳಾಂತರಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ಅಧಿಕಾರಿಗಳು ಆಟೋ ನಗರಕ್ಕೆ ಬಸ್ ದುರಸ್ತಿ ಘಟಕವನ್ನು ಸ್ಥಳಾಂತರಿಸುವ ಗೋಜಿಗೆ ಹೋಗಿಲ್ಲ. ದುರಸ್ತಿ ಘಟಕದ ಸ್ಥಳಾಂತರಕ್ಕಾಗಿ  ಆಟೋ ನಗರದಲ್ಲಿ ಬುಡಾ ನಿವೇಶನವನ್ನು ನೀಡಿದೆ. ಹೈಟೆಕ್ ಬಸ್ ನಿಲ್ದಾಣದ ಯೋಜನೆ ರೂಪಿಸಿ ಎರಡು ವರ್ಷಗಳೇ ಗತಿಸಿವೆ. ಸುಮಾರು 50 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದರೂ ಸಾರಿಗೆ ಸಚಿವರ ಇಚ್ಚಾಶಕ್ತಿಯ ಕೊರತೆಯಿಂದ ಗಡಿಭಾಗದ ಬೆಳಗಾವಿ ಬಸ್ ನಿಲ್ದಾಣ ಅಭಿವೃದ್ದಿ ಯೋಜನೆಗೆ ಚಾಲನೆ ದೊರೆತಿಲ್ಲ. ಈ ಹಿಂದೆ ಸಾರಿಗೆ ಸಚಿವ ಆರ್. ಅಶೋಕ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಸ್ ನಿಲ್ದಾಣದ ಅಭಿವೃದ್ದಿಯ ಬಗ್ಗೆ ವಾಗ್ದಾನ ಮಾಡಿದ್ದರು. ಈವರೆಗೂ ಅವರು ಕೊಟ್ಟ ಭರವಸೆ ಈಡೇರಿಲಿಲ್ಲ.

ಬೆಳ ಗಾವೊ ಜನ ಸಂಖ್ಯೆ ದಿನದಿಂದ ದಿನಕ್ಕೆ  ಹೆಚ್ಚುತ್ತಲೇ ಇದೆ. ನಗರದಲ್ಲಿ ನಗರ ಬಸ್ ನಿಲ್ದಾಣ ಕೆಂದ್ರ ಬಸ್ ನಿಲ್ದಾಣ ಸೇರಿದಂತೆ ಒಟ್ಟು ನಾಲ್ಕು ಘಟಕಗಳಿದ್ದರೂ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಬೆಳಗಾವಿ ಬಸ್ ನಿಲ್ದಾಣ ವಿಶಾಲವಾದ ಪ್ರದೇಶವನ್ನು ಹೊಂದಿದೆ. ಆದರೆ ಬಸ್ ದುರಸ್ತಿ ಘಟಕ ನಿಲ್ದಾಣದ ಜಾಗವನ್ನು ಆಕ್ರಮಿಸಿದೆ. ದುರಸ್ತಿ ಘಟಕವನ್ನು ಆಟೋ ನಗರಕ್ಕೆ ಸ್ಥಳಾಂತರಿಸಿದರೆ ಸುಮಾರು 30 ಎಕರೆಯಷ್ಟು ಭೂಮಿ ಸಿಗುತ್ತದೆ. ಈ 300 ಎಕರೆಯಷ್ಟು ಭೂಮಿಯಲ್ಲಿ ಬೆಳಗಾವಿ ನಗರಕ್ಕೆ ತಕ್ಕಂತೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ. ಸಾರಿಗೆ ಸಚಿವ ಆರ್.ಅಶೋಕ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಿದ್ದು ನಿಲ್ದಾಣ ಅಭಿವೃದ್ದಿ ಯೋಜನೆಗೆ ಚಾಲನೆ ನೀಡುವಂತೆ ಕ್ರಮ ಕೈಗೊಳ್ಳಬಹುದೇ ಕಾದುನೋಡಬೇಕಷ್ಟೆ.

ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿಎಂ ಮುಂಬೈ ಪ್ರಯಾಣ
ಬೆಂಗಳೂರು, ಜೂ. 5: ಪ್ರಮುಖ 3 ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿರುವ ರಾಜ್ಯಸಭೆಯ ಚುನಾವಣೆಯ 4ನೇ ಅಭ್ಯರ್ಥಿ ಯಾರೂ ಎಂಬುದಕ್ಕೆ ದಿನಕ್ಕೊಂದು ಹೆಸರುಗಳು ಕೇಳಿ ಬರತೊಡಗಿವೆ. ಸದ್ಯಕ್ಕೆ ನೂತನವಾಗಿ ಮತ್ತು ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಎಂದರೆ ಖ್ಯಾತ ಉದ್ಯಮಿ ಸರ್ಜನ್ ಜಿಂದಾಲ್ ಅವರದಾಗಿದೆ.

ಹೂಡಿಕೆದಾರರ ಸಮಾವೇಶದ ಬಳಿಕ ನಿನ್ನೆ ರಾತ್ರಿ ಮುಂಬೈಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಪುಟದ ಸಹೋದ್ಯೌಗಿಗಳು ಸರ್ಜನ್ ಜಿಂದಾಲ ಅವರನ್ನು ಕಣಕ್ಕೆ ಇಳಿಸಲು ಅವರು ಮನವೊಲಿಸಲು ಮುಂದಾಗಿದ್ದಾರೆ. ಕಾರ್ಯಕ್ರಮ ನಿಮಿತ್ಯ ಮುಖ್ಯಮಂತ್ರಿ ಮುಂಬೈಗೆ ಹೋಗಿದ್ದಾರೆಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿನ ಉದ್ದೇಶ ಜಿಂದಾಲ್ ಅವರನ್ನು ಭೇಟಿಯಾಗಿ ರಾಜ್ಯಸಭಾ ಚುನಾವಣೆಗೆ ಅವರನ್ನು 4ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಮನವೊಲಿಸುವದೇ ಆಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಈಗಾಗಲೇ ಭಾಜಪದಿಂದ ಪಕ್ಷದ ರಾಷ್ಟ್ತ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡು ಮಾಜಿ ಸಂಸದ ಮತ್ತು ರಾಜ್ಯ ಘಟಕದ ವಕ್ತಾರ  ಆಯನೂರು ಮಂಜುನಾಥ ಕಣಕ್ಕೆ ಇಳಿಸಿದ್ದಾರೆ.

ಕಾಂಗ್ರೆಸ್ದಿಂದ ಆಸ್ಕರ ಫರ್ನಾಂಡಿಸ್ 3ನೇ ಅಭ್ಯರ್ಥಿಯ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದ್ದಾರೆ.  ಭಾಜಪದ ಸಂಖ್ಯಾ ಬಲವನ್ನು ಆಧರಿಸಿ ಹೇಳುವುದಾದರೆ ತನ್ನ ಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಶಸ್ತ್ಯ 90 ಮತಗಳು ಬಿದ್ದರು ಹೆಚ್ಚುವರಿಯಾಗಿ 27 ಮತಗಳು ಉಳಿಯುತ್ತವೆ ಇದರ ಜೊತೆಗೆ ಐವರು ಪಕ್ಷೇತರ ಸಚಿವರು ಭಾಜಪ ನಿಲ್ಲಿಸುವ ಅಭ್ಯರ್ಥಿಗೆ ಮತ ಹಾಕುವ ಮುಂದಾದರೆ ಭಾಜಪ ಬತ್ತಳಿಕೆಯಲ್ಲಿ 32 ಮತಗಳು ಉಳಿಯುತ್ತವೆ ರಾಜ್ಯಸಭೆಗೆ ಆಯ್ಕೆಯಾಗಲುಕನಿಷ್ಟ 45 ಮತಗಳು ಅಗತ್ಯವಿರುವುದರಿಂದ ಸಜ್ಜನ್ ಜಿಂದಾಲ್ ಆಯ್ಕೆ  ಜೆಡಿಎಸ್ ತೆಗೆದುಕೊಳ್ಳುವ ನಿರ್ಣಯದ ಮೇಲೆ ಅವಲಂಬನೆಗೊಂಡಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಪಕ್ಷದ 27 ಸದಸ್ಯರು ಇದ್ದಾರೆ. ಆದರೆ ಅದು ರಾಜ್ಯಸಭೆಗೆ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಒಂದು ವೇಳೆ ಸಜ್ಜನ್ ಜಿಂದಾಲ್ ಕಣಕ್ಕೆ ಇಳಿಯಲು ಒಪ್ಪಿದರೆ ಜೆಡಿಎಸ್ ಬೆಂಬಲ ಅನಿವಾರ್ಯವಾಗುತ್ತದೆ.

ಕರ್ನಾಟಕದ ಜೊತೆ ಮೊದಲಿನಿಂದಲೂ ಅವಿನಾಭಾವ ಸಂಬಂಧ ಹೊಂದಿರುವ ಜಿಂದಾಲ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಮಾತುಕತೆ ನಡೆಸಿ ಫಲಪ್ರದವಾದರೆ ಮಾತ್ರ ತಾವು ಕಣಕ್ಕೆ ಇಳಿಯುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಳೆ ಮುಂಜಾನೆಯ ಒಳಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಂದಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ ಎಂಬುದು ಈಗ ನೀರೀಕ್ಷೆಯ ಸಂಗತಿಯಾಗಿದೆ. ಜೆಡಿಎಸ್ ಜಿಂದಾಲ್ ಸ್ಪರ್ಧೆಗೆ ಹಸಿರುನಿಶಾನೆ ತೋರಿಸಿದರೆ ಜಿಂದಾಲ್ ಅವರ ಆಯ್ಕೆಯ ಹಾದಿ ಸುಗಮವಾಗುತ್ತದೆ.

ಇದರ ಮಧ್ಯೆ ರಾಜ್ಯಸಭೆ ಚುನಾವಣೆಗೆ 4ನೇ ಅಭ್ಯರ್ಥಿಯಾಗಿ ಸರ್ವೌಚ್ಚ ನ್ಯಾಯಾಲಯದ ಖ್ಯಾತ ವಕೀಲ ರಾಮ್ ಜಟ್ಮಲಾನಿ ಹಾಗೂ ಉದ್ಯಮಿ ವಿಜಯಮಲ್ಯ ಅವರ ಹೆಸರುಗಳು ಕೇಳಿ ಬುರತ್ತಿವೆ.

ರಾಜ್ಯಸಭೆ ಚುನಾವಣಾ ಕಣಕ್ಕೆ ಆಸ್ಕರ್
ಬೆಂಗಳೂರು, ಜೂ.5: ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಆಸ್ಕರ ಫರ್ನಾಂಡೀಸ್ ಇಂದು  ರಾಜ್ಯಸಭೆಯ ಚುನಾವಣೆಗಾಗಿ ಕಾಂಗ್ರೆಸ್ ಅಧೀಕೃತ ಅಭ್ಯರ್ಥಿಯಾಗಿ  ಇಂದು ನಾಮಪತ್ರವನ್ನು ಸಲ್ಲಿಸಿದರು.

ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ಈಗಾಗಲೇ  ಭಾಜಪ ರಾಷ್ಟ್ತ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡು ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಈ ಮೊದಲು ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಹೇಳಿಕೊಂಡಿತ್ತು. ಆದರೆ ಜೆಡಿಎಸ್ ಜೊತೆಗೆ ನಡೆದಿದ್ದ ಮೈತ್ರಿ ಮಾತುಕತೆಗಳು ಈಗ ಮುರಿದು ಬಿದ್ದಿರುವುದರಿಂದ ತಾನು ಗೆಲ್ಲಲು ಸಾಧ್ಯವಿರುವ ಒಬ್ಬ ಅಭ್ಯರ್ಥಿಯನ್ನಾಗಿ ಇಂದು ಆಸ್ಕರ್ ಫರ್ನಾಂಡಿಸ್ ಅವರನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಕಣಕ್ಕೆ ಇಂದು ಇಳಿಸಿದೆ.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ವಿಧಾನಸಭೆ ವಿರೋಧಿ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಪರಿಷತ್ತಿನ ವಿರೋಧಿ ಪಕ್ಷದ ನಾಯಕಿ ಮೋಟಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಸದ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಧರಮ್ಸಿಂಗ್ ಹಾಗೂ ಹಲವು ಕಾಂಗ್ರೆಸ್ ಧುರೀಣರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷ ಎರಡನೇ ಅಭ್ಯರ್ಥಿಯ ಕುರಿತು ಇದುವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಕ್ಕೆ ಇನ್ನೂ ಅವಕಾಶವಿರುವುದರಿಂದ ಅಷ್ಟರೊಳಗಾಗಿ 4ನೇ ಅಭ್ಯರ್ಥಿಯಾದ ಎಂಬುದು ನಿರ್ಧಾರವಾಗುವ ಸಾಧ್ಯತೆ ಇದೆ.

ಈಗ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಭಾರತೀಯ ಜನತಾ ಪಕ್ಷ 3ನೇ ಅಭ್ಯರ್ಥಿಯನ್ನು ತನ್ನ ಹೆಚ್ಚುವರಿ ಮತಗಳ ಬೆಂಬಲದಿಂದ ಕಣಕ್ಕೆ ಇಳಿಸುವ ಸಾಧ್ಯ ಸಾಧ್ಯತೆಗಳ ಬಗ್ಗೆ ಚಿಂತನೆಗಳನ್ನು ನಡೆಸ ತೊಡಗಿದೆ.

ಒಟ್ಟಿನಲ್ಲಿ ಒಂದೆರೆಡು ದಿನಗಳಲ್ಲಿ 4ನೇ ಅಭ್ಯರ್ಥಿ ಯಾರು ಎಂಬುದು ಸ್ಪಷ್ಟವಾಗುವ ನೀರೀಕ್ಷೆ ಇದೆ.

ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರದ ಷೋ
ಬೆಂಗಳೂರು, ಜೂ.5:  ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಮೇಕಪ್ ಮಾಡಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿಯನ್ನು ಮಾಡಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಜನರಿಗೆ ನೆಟ್ಟಗೆ ವಿದ್ಯುತ್ ಕೊಡ್ತಾಯಿಲ್ಲ ರಾಜ್ಯ ಕಗ್ಗತ್ತಲೆಯಲ್ಲಿದೆ. ಮನೆ ಕಳೆದುಕೊಂಡಿರುವ ಮನೆ ನೆರೆ ಸಂತ್ರಸ್ತರ ಗೋಳು ಕೇಳುವವರೆ ಇಲ್ಲದಂತಾಗಿದೆ. ಅವರಿಗೆ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಟೀಕಾ ಪ್ರಹಾರ ಮಾಡಿದರು.

ರೈತರ  ಹೆಸರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣಾ ಅವರಂತೆ ಸೂಟುಬೂಟು ಹಾಕಿ ಮೇಕಪ್ ಮಾಡಿಕೊಂಡು ಸಮಾವೇಶದಲ್ಲಿ ಮಿಂಚಿದ್ದೆ ದೊಡ್ಡ ಭಾಗ್ಯವಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

4 ಲಕ್ಷ ಕೋಟಿ ರೂಪಾಯಿ ಬಂಡವಾಳ 10 ಲಕ್ಷ ಜನರಿಗೆ ಉದ್ಯೌಗ ಇದೆಲ್ಲ ಬರಿ ಬೋಗಳೆಯಾಗಿದೆ ಕೈಗಾರಿಕೆ ಹೆಸರಿನಲ್ಲಿ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಾವು ಅವಕಾಶ ನೀಡುವದಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ರೈತರು ತಜ್ಞರು ರಾಜಕಾರಣಿಗಳೊಂದಿಗೆ ಚರ್ಚೆ ಮಾಡಿ ಒಂದು ಸಮಗ್ರ ನೀತಿಯನ್ನು ಜಾರಿಗೆ ತರಬೇಕು ಈಗಿನ ಸರ್ಕಾರದ ನೀತಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವಂತೆ ಇದೆ ಎಂದರು.

ರಾಜ್ಯಪಾಲರ ಬಗ್ಗೆ ಭಾಜಪ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿರುವುದು ಅವರ ಘನತೆಯ ತಕ್ಕದ್ದಲ್ಲ ಭಾರಿ ಗರ್ವ ಮತ್ತು ಅಹಂಕಾರದಿಂದ ಅವರು ಮಾತನಾಡಿದ್ದಾರೆ. ಒಂದು ಪಕ್ಷದ ಅಧ್ಯಕ್ಷರು ಎಂಬುದನ್ನು ಮರೆತು ಸಚಿವ ಜನಾರ್ಧನರೆಡ್ಡಿ ಶೈಲಿಯಲ್ಲಿ ಮಾತನಾಡಿದ್ದಾರೆ ಎಂದರು. ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕಂತ್ರಿ ನಾಯಿ ಕಂಟ್ರಿ ನಡುಗಿಸಿತ್ತು
ಬೆಂಗಳೂರು, ಜೂ.5: ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದ್ದು ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಹಾರಿಸಿದ್ದ ಗುಂಡಿನ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಕೊನೆಗೂ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು 29 ರಂದು ಸಂಜೆ ಆಶ್ರಮದಲ್ಲಿ ಸತ್ಸಂಗ ಕಾರ್ಯಕ್ರಮ ಮುಗಿಸಿ ರವಿಶಂಕರ ಗುರೂಜಿ ಅವರು ಹೊರಗೆ ಹೊರಟ ಸಂದರ್ಭದಲ್ಲಿ ಹಾರಿ ಬಂದ ಗುಂಡು ವಿಶ್ವಾದ್ಯಂತ ಭಾರಿ ಕುತೂಹಲ ಆತಂಕ ಮೂಡಿಸಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದರು. ಜೊತೆಗೆ ಸ್ವಾಮೀಜಿ ಅವರಿಗೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.

ಆದರೆ ಇದೀಗ ಪೊಲೀಸರ ತನಿಖೆಯಿಂದ ಇದೊಂದು ನಾಯಿ ಕೋಳಿ ಕತೆಯಾಗಿರುವುದು ಗೊತ್ತಾಗಿದೆ. ಆಶ್ರಮದಲ್ಲಿ ಕಂಡು ಬಂದ ನಾಯಿಯನ್ನು ಓಡಿಸುವದಕ್ಕಾಗಿ ಈ ಗುಂಡು ಹಾರಿಸಲಾಗಿತ್ತು. ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಡಾ ಅಜಯಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಆರ್ಟ್ ಆಪ್ ಲಿವಿಂಗ್ ಆಶ್ರಮದ ಶೂಟ್ಓಟ್ಪ್ರಕರಣ ವನ್ನು ಎಳೆಎಳೆಯಾಗಿ ವಿವರಿಸಿ ದರು.

ಆಶ್ರಮದ ಎದುರಿನಲ್ಲಿ ಜೆಪಿ ನಗರ ನಿವಾಸಿ ಅಂಬೇಢ್ಕರ್ ಡೆಂಟಲ್ ಕಾಲೇಜಿನ ಅಧ್ಯಕ್ಷ  ಡಾ ಮಹದೇವ ಪ್ರಸಾದ್ ಎಂಬುವರ ಫಾರಮ್ ಹೌಸ್ ಇದೆ ಅಲ್ಲಿಯವರೆಗೆ ಕೋಳಿ ಫಾರಂ ಸಹ ಇಟ್ಟುಕೊಂಡಿದ್ದಾರೆ. ಮೇ 29 ರಂದು ಸಂಜೆ ಫಾರ್ಮಗೆ ಬಂದಿದ್ದ ಪ್ರಸಾದ್ ಅವರು ಕೋಳಿ ಫಾರಮ್ ಕಡೆ ಬೀದಿ ನಾಯಿಗಳು ಹೋಗುತ್ತಿದ್ದುದ್ದನ್ನು ಕಂಡು ಅವುಗಳನ್ನು ಓಡಿಸಲು ಗುಂಡು ಹಾರಿಸಿದ್ದಾರೆ. ನಾಯಿ ಓಡಿಸಲು ಹಾರಿಸಿದ ಗುಂಡು ಸತ್ಸಂಗ ಕಾರ್ಯಕ್ರಮ ಮುಗಿಸಿ ಆಶ್ರಮದಿಂದ ಹೊರಗೆ ಹೊರಟ ರವಿಶಂಕರ ಗುರೂಜಿ ಅವರತ್ತ ತೂರಿ  ಬಂದಿತ್ತು ಅವರ ಶಿಷ್ಯ ವಿನಯ್ನ ಬಲಗಾಲ ತೊಡೆಗೆ ತಾಗಿದೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಶ್ವಾನದಳ ವಿಧ್ಯಾಂಸಕ ಕೃತ್ಯ ತಪಾಸಣಾ ತಂಡಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದವು.

ವಿಧಿ ವಿಜ್ಞಾನ ಪ್ರಯೋಗಾಲದಯ ವರದಿಯಿಂದ ವಿನಯ್ಗೆ ಗುಂಡು ತಗಲುವ ಹೊತ್ತಿಗೆ ಯಾವುದೇ ಗಟ್ಟಿ ವಸ್ತುವಿಗೆ ತಾಗದೆ ಇದ್ದದು ಹಾಗೂ ತನ್ನ ವೇಗ ಕಳೆದುಕೊಂಡಿದ್ದು ಗೊತ್ತಾಗಿದೆ.

ಪ್ರಸಾದ ಅವರು 32 ಬಂದೂಕಿಗೆ ಪರವಾನಿಗೆ ಹೊಂದಿದ್ದು ಆಗಾಗ ನಾಯಿ ಓಡಿಸಲು ಇದನ್ನು ಬಳಸುತ್ತಿದ್ದರು.  ಘಟನಾ ದಿನಕ್ಕೂ ಎರಡು ದಿನಗಳ ಮೊದಲು ನಾಯಿ ಓಡಿಸಲು ಅವರು ಗುಂಡು ಹಾರಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ದೊರೆತ ಗುಂಡು ಆಯುದ ತಯಾರಿಕಾ ಸಂಸ್ಥೆಯಲ್ಲಿ ಉತ್ಪಾದನೆಯಾಗಿರುವುದು  ಎಂದು ಮಹಾನಿರ್ದೇಶಕರು ಹೇಳಿದ್ದಾರೆ. ಪ್ರಸಾದ ಅವರು ನಾಯಿ ಓಡಿಸಲು ಗುಂಡು ಹಾರಿಸಿದ್ದರೂ ನಾಯಿ ತಪ್ಪಿಸಿಕೊಂಡು ಪರಾರಿಯಾಗಿದೆ. ನಂತರ ಅವರು ಕುಟುಂಬ ಸಮೇತ ಜೆ.ಪಿ. ನಗರದ ತಮ್ಮ ನಿವಾಸಕ್ಕೆ ಹಿಂತುರಿಗಿದ್ದಾರೆ. ಗುಂಡು ಹಾರಿಸಿದ ಸ್ಥಳದಿಂದ ಆಶ್ರಮದ ದ್ವಾರಗಳಾಗಲಿ ಸತ್ಸಂಗ ನಡೆಯುತ್ತಿದ್ದ ಸ್ಥಳವಾಗಲಿ ಕಾಣುವದಿಲ್ಲ. ಪಸ್ತುತ ತಲಘಟ್ಟಪುರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣವನ್ನು ಈಗ ಹಿಂದಕ್ಕೆ ಪಡೆಯಲಾಗಿದೆ ಎಂದು ಅಜಯಕುಮಾರಸಿಂಗ್ ಹೇಳಿದ್ದಾರೆ.

ಗುಂಡು ಹಾರಿಸಿದ ವ್ಯಕ್ತಿಯನ್ನು ಯಾರೊಬ್ಬರು ಕಂಡಿರಲಿಲ್ಲವಾದ್ದರಿಂದ ಈ ಪ್ರಕರಣ ಬಹಳಷ್ಟು ನಿಗೂಢವಾಗಿತಲ್ಲದೆ ಕುತೂಹಲಕಾರಿಯಾಗಿತ್ತು. ನಿದ್ದೆ ಕೆಡಿಸಿದ್ದ ಈ ಪ್ರಕರಣದ ತನಿಖೆಯ ಕೈಗೊಂಡ ಪೊಲೀಸರು ಆಶ್ರಮದ ಸುತ್ತಮುತ್ತ ಇರುವ ಜಮೀನುಗಳ ಮಾಲೀಕರ ಯಾರ್ಯಾರು ರಿವಾಲ್ವರ್ ಹೊಂದಿದ್ದಾರೆ ಎಂಬ ಬಗ್ಗೆ ಪರೀಶೀಲನೆ ಮಾಡಿದ್ದಾರೆ ಆ ಸಮಯದಲ್ಲಿ ಆಶ್ರಮದ ಎದುರಿನ ಫಾರಮ್ ಮಾಲೀಖ ಮಾದೇವ ಪ್ರಸಾದ್ ರಿವಾಲ್ವರ್ ಹೊಂದಿದ್ದು ಪತ್ತೆಯಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ಘಟನೆ ಬಯಲಾಗಿದೆ. ವಿಷಯ ಗೊತ್ತಿದ್ದರು ಏತಕ್ಕಾಗಿ ಈವರೆಗೆ ಪೊಲೀಸರಿಗೆ  ಮಾಹಿತಿ ನೀಡಲಿಲ್ಲ ಎಂದು ಮಹಾದೇವ ಅವರನ್ನು ಪ್ರಶ್ನೆ ಮಾಡಿದಾಗ ಆ ಸಮಯದಲ್ಲಿ ತಾವು ಹಾರಿಸಿದ ಗುಂಡು ಆಶ್ರಮದತ್ತ ತೂರಿ ಹೋಗಿದೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಹೇಳಿದರು.

ಹರಿದು ಬರತೊಡಗಿದೆ ಹಣದ ಹೊಳೆ
ಬೆಂಗಳೂರು, ಜೂ. 4: ಬಂಡವಾಳ ಹೂಡಿಕೆಯ ಸದಮಾವೇಶದ ಎರಡನೇ ದಿನವಾದ ಇಂದು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕಂಪನಿಗಳು ಬಂಡವಾಳ ಹೂಡಲು ನಾಮುಂದು ತಾಮುಂದು ಎಂಬ ಇನ್ನಿಲ್ಲದ ಉತ್ಸಾಹವನ್ನು ತೋರಿಸುತ್ತೇವೆ ಹೀಗಾಗಿ ಕಡೆಗಳಿಗೆಯಲ್ಲಿ ಬಂದವರಿಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಚಿಂತೆ ಸರ್ಕಾರಕ್ಕೆ ಉಂಟಾಗ ತೊಡಗಿದೆ.

ನಿನ್ನೆ ಮೊದಲ ದಿನವೇ 3.29 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದ್ದು ನಿನ್ನೆಯ ಪ್ರತಿಕ್ರಿಯೆಯನ್ನು ಗಮನಿಸಿದ ದೇಶದ ಬೇರೆ ಬೇರೆ ಕಂಪನಿಗಳು ಇಂದು ಕೂಡ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯದಲ್ಲಿ ಬಂಡವಾಳ ಹೂಡುವುದಕ್ಕೆ ಆಸಕ್ತಿ ತೋರಿಸಿವೆ. ಇದರಿಂದ ಸರ್ಕಾರದ ನೀರೀಕ್ಷೆಗೂ ಮೀರಿ ಬಂಡವಾಳ ಹರಿದು ಬರತೊಡಗಿದ್ದು ಸರ್ಕಾರಕ್ಕೆ ಈ ಉತ್ಸಾಹ ಕಂಡು ಅಚ್ಚರಿ ಉಂಟಾಗಿದೆ.

ಕಡೆ ಗಳಿಗೆಯಲ್ಲಿ ಬಂದವರಿಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಲು ಮೂಲಭೂತ ಸೌಲಭ್ಯ ಇಲಾಖೆಯ ಪ್ರಧಾನಿ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಒಂದು ಉನ್ನತಮಟ್ಟದ ಸಮಿತಿ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.

ಒಟ್ಟಾರೆ 2ನೇ ದಿನ ಬಂಡವಾಳ ಹೂಡಲು ಕಂಪನಿಗಳು ಪೈಪೋಟಿಯ  ಮೇಲೆ ಮುಂದೆ ಬಂದಿವೆ ಹೀಗಾಗಿ  ಬಂಡವಾಳ ಹೂಡಿಕೆಗಾಗಿ ನೂಕು ನುಗ್ಗಲು ಉಂಟಾಗ ತೊಡಗಿದೆ.  ಇಂದು ಸಿಮೆಂಟ್ ವಿದ್ಯುತ ಜವಳಿ ಮೂಲಭೂತ ಸೌಲಭ್ಯ ಇಂಧನ ಏರೋಸ್ಪೇಸ್ ಕೃಷಿ ಆಹಾರ ಸಂಸ್ಕರಣೆ ವಲಯದಲ್ಲಿ ಬಂಡವಾಳ ಹೂಡುವುದಕ್ಕೆ ಸಂಬಂಧಪಟ್ಟಂತೆ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.

ಇದರಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು ಆ ಪ್ರದೇಶದಲ್ಲಿಯ ಕೈಗಾರಿಕೆಯ ಚಿತ್ರಣವೇ ಮುಂದಿನ ಕೆಲ ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಸುಮಾರು 5 ಲಕ್ಷ ಜನರಿಗೆ ಇದರಿಂದ ಉದ್ಯೌಗ ದೊರೆಯುವ ನೀರೀಕ್ಷೆ ಇದೆ. ಸರ್ಕಾರದ ನೀರೀಕ್ಷೆಗೂ ಮೀರಿ ಹೆಚ್ಚಿನ ಬಂಡವಾಳ ಹಾಗೂ ಉದ್ಯೌಗ ಸೃಷ್ಠಿಯಾಗುತ್ತಿರುವ ಬಗ್ಗೆ ಸರ್ಕಾರ ಫುಲ್ ಖುಷ್ಯಾಗಿದೆ.

ಒಪ್ಪಂದ ಮಾಡಿಕೊಂಡಿರುವಂತೆ ಬೆಂಗಳೂರಿನಲ್ಲಿ ಶೇ. 30ರಷ್ಟು ಹಾಗೂ ಉತ್ತರ ಕರ್ನಾಟಕದಲ್ಲಿ ಶೇ. 70 ರಷ್ಟು ಬಂಡವಾಳ ಹೂಡಿಕೆಯಾಗಲಿದೆ. ಇದರಿಂದಾಗಿ ಕಳೆದ ಹಲವಾರು ದಶಕಗಳಿಂದ ಹಿಂದುಳಿದ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಮಾಜಿಕ ಆರ್ಥಿಕ ಜೀವನ ಬದಲಾದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಆರ್ಥಿಕವಾಗಿ ಮತ್ತು ಕೈಗಾರಿಕೆ ರಂಗದ ಪ್ರಗತಿಯ ಹೆಜ್ಜೆ ಇಡುವ ದಿನಗಳು ಈಗ ಹತ್ತಿರವಾಗಿದೆ.

ಇದರಿಂದ ಸರ್ಕಾರ ಈ ಸಮಾವೇಶ ನಡೆಸಲು ಪಟ್ಟಿರುವ ಕಷ್ಟಕ್ಕೆ ಉತ್ತಮ ಪ್ರತಿಫಲ ದೊರೆದಂತಾಗಿದ್ದು ಸರ್ಕಾರಕ್ಕೆ ಸಂಪೂರ್ಣ ತೃಪ್ತಿಯನ್ನು ತಂದಿದೆ.