Categorized | ರಾಜ್ಯ

ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್

Posted on 29 October 2009 by Venkatesh

CMಬೆಂಗಳೂರು, 28-ಬಳ್ಳಾರಿ ಗಣಿದೊರೆಗಳ ಹಾಗೂ ಮುಖ್ಯ ಮಂತ್ರಿಗಳ ನಡುವಿನ ಭಿನ್ನಾಬಿಪ್ರಾಯ ತಾರಕಕ್ಕೆ ಏರಿದ್ದು  ಹೋರಿ ಕಾಳಗದಲ್ಲಿ ಹಿರಿಯ ಅಧಿ ಕಾರಿಗಳು ಬಲಿ ಪಶು ಆಗಿದ್ದಾರೆ.

          ಬಳ್ಳಾರಿ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿ ಮುಖ್ಯ ಸರಣ್ಯ ಸಂರಕ್ಷಣಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಮುಖ್ಯ ಮಂತ್ರಿಗಳು ಎತ್ತಂಗಡಿ ಮಾಡಿ ಆದೇಶ ನೀಡಿರುವ ಮುಖ್ಯ ಮಂತ್ರಿಗಳು ಈ ವರೆಗೆ ಈ ಅಧಿಕಾರಿಗಳಿಗೆ  ಬೇರೆ ಸ್ಥಳಗಳನ್ನು ನಿಗಧಿ ಪಡಿಸಿಲ್ಲ. ಈ ಅಧಿಖಾರಿಗಳು ರೆಡ್ಡಿ ಸಹೋದರರು  ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಎಂಬ ಕಾರಣದಿಂದ ಮುಖ್ಯ ಮಂತ್ರಿಗಳು  ಜಿಲ್ಲಾಧಿಕಾರಿ ಶಿವಪ್ಪ  ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಸೀಮಂತಕುಮಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮುತ್ತಯ್ಯ ಹಾಗೂ ಆರೋಗ್ಯ ಇಲಾಖೆಯ    ಪ್ರಧಾನ ಕಾರ್ಯದರ್ಶಿ ಪೆರುಮಾಳ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಅವರ ಸ್ಥಾನಕ್ಕೆ ಜಿಲ್ಲಾಧಿಕಾರಿಯಾಗಿ ಹರ್ಷ ಗುಪ್ತಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಡಾ. ಜಿ. ಸಿ. ರಾಜಪ್ಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಿಸ್ವಾಜಿತ್  ಮಿಶ್ರಾ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಮದನ್ ಗೋಪಾಲ ಅವರನ್ನು ನೇಮಕ ಮಾಡಲಾಗಿದೆ. ನಿನ್ನೆಯಷ್ಟೇ ಮುಖ್ಯ ಮಂತ್ರಿಗಳು ಆಪ್ತ ಸಚಿವರ ಸಭೆ ನಡೆಸಿದ್ದರು. ಇದಕ್ಕೆ ವಿರುದ್ಧವಾಗಿ ರೆಡ್ಡಿ ಸಹೋದರರು ಕೂಡಾ ತಮ್ಮ ನಿವಾಸದಲ್ಲಿ ಅತೃಪ್ತ ಶಾಸಕರನ್ನು ಸೇರಿಸಿಕೊಂಡು ಸಭೆ ನಡೆಸಿದ್ದರು. ನಂತರ ಸಿ. ಎಂ. ವಿಧಾನ ಸೌಧದಲ್ಲಿ  ಸಭೆ ನಡೆಸಿದ್ದಾರೆಂಬು ದನ್ನು  ತಿಳಿದ ರೆಡ್ಡಿ ಸಹೋದರರು ಅದಕ್ಕೆ ಪ್ರತಿಯಾಗಿ ವಿಕಾಸ ಸೌಧದಲ್ಲಿ ಸಭೆ ನಡೆಸಿದ್ದರು.

          ಅದಾದ ನಂತರ  ಸಿ. ಎಂ. ಅವರು  ಮೈಸೂರು ಕಡೆಗೆ ತೆರಳಿದರು.  ರೆಡ್ಡಿ ದೊರೆಗಳು  ಬೆಂಗಳೂರು ಕಡೆ ಮುಖ ಮಾಡಿದ್ದರು. ಈ ನಡುವೆ ಮುಖ್ಯ ಮಂತ್ರಿಗಳು ನೆರೆ ಸಂತ್ರಸ್ತರಿಗೆ  ಗ್ರಹ ನಿರ್ಮಾಣಕ್ಕಾಗಿ  ಶಂಕು ಸ್ಥಾಪನೆ  ಕಾರ್ಯಕ್ರಮ ಹಮ್ಮಿಕೊಂಡರೆ ಇದಕ್ಕೆ ನಾವೇನು ಕಮ್ಮಿ ಇಲ್ಲ ಎಂಬಂತೆ   ರೆಡ್ಡಿ ಸಹೋದರರು ಸಿ. ಎಂ. ಗಮನಕ್ಕೆ ತಾರದೆ  ಅವರನ್ನು  ಕರೆಯದೆ ಇಂದು ಶಿರಗುಪ್ಪಾ ತಾಲೂಕಿನಲ್ಲಿ ಗೃಹ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ಮಾಡಿದ್ದಾರೆ.      ಮುಖ್ಯ ಮಂತ್ರಿಗಳ ದಿಢೀರ ವರ್ಗಾವಣೆಯ ಈ ಕ್ರಮದಿಂದ ರೆಡ್ಡಿ ದೊರೆಗಳು ಮತ್ತಷ್ಟು ಕೋಪಗೊಂಡಿದ್ದು ಮುಖ್ಯ ಮಂತ್ರಿಗಳೇ ಸಂಧಾನದ ಮಾರ್ಗವನ್ನು ಮುಚ್ಚಿದ್ದಾರೆ.  ಎಂಬ ಭಾವನೆಗಳು ಬೆಳೆಯ ತೊಡಗಿವೆ. ಹೀಗಾಗಿ ಬಂಡಾಯ ಶಮನಗೊಳ್ಲುವ ಬದಲು ತೀವ್ರ ಸ್ವರೂಪವನ್ನು ಪಡೆಯತೊಡಗಿದೆ.  ಆದರೆ ಈ ಮೊದಲು ಅರುಣ ಜೆಟ್ಲಿ  ವೆಂಕಯ್ಯ ನಾಯ್ಡು ನಗರಕ್ಕೆ ಬಂದಿರುವುದರಿಂದ ಈಗ ಉಂಟಾದ ಬಂಡಾಯಕ್ಕೆ ಓಷಧಿಯನ್ನು ಕಂಡು ಹಿಡಿಯುವರೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಈ ಮದ್ಯೆ ಗಣಿ ದೊರೆಗಳು ನವ ಗ್ರಾಮ ನಿರ್ಮಾಣಕ್ಕೆ ಚಾಲನೆಯನ್ನು ನೀಡಿರುವದು ಮುಖ್ಯ ಮಂತ್ರಿಗಳಿಗೆ ನುಂಗಲಾರದ ತುತ್ತಾಗಿದೆ.

Tags | , , ,

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives