Categorized | ಬೆಳಗಾವಿ

ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಕರೆ

Posted on 20 September 2009 by Venkatesh

ಬೆಳಗಾವಿ 20- ವ್ಯಕ್ತಿಯ ಜೀವನದಲ್ಲಿ ವಿಜ್ಞಾನ ಹಾಸು ಹೊಕ್ಕಾಗಿದೆ. ವಿಜ್ಞಾನವಿಲ್ಲದೆ ಜೀವನವಿಲ್ಲ. ಜೀವನವೇ ವಿಜ್ಞಾನ ವಾಗಿದೆ. ವಿಜ್ಞಾನದ ವ್ಯಾಸಂಗ ಮಾಡಿ ಕೇವಲ ವೈದ್ಯ, ಇಂಜಿನಿ ಯರ್ ಆಗುವುದು ಮಾತ್ರವಲ್ಲ, ಮೂಲ ವಿಜ್ಞಾನದಲ್ಲಿ ಇತ್ತೀಚೆಗೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ವಿಜ್ಞಾನದಿಂದ ವಿಶ್ವ ಅರಿಯಲು ಸಾಧ್ಯವಾಗುವದರಿಂದ ವಿಜ್ಞಾನದಲ್ಲಿ ಜನರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ವಿ.ಎಂ.ಪಾಟೀಲ ಹೇಳಿದರು.

ಶಿವಬಸವ ನಗರದ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯ ಅದ್ಯಕ್ಷತೆಯನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಸದಸ್ಯ ಎಸ್.ಬಿ.ಹಳ್ಳಿ ವಹಿಸಿದ್ದರು. ಮತ್ತೊಬ್ಬ ಸದಸ್ಯ ಸಂಜಯ ನಾಗಲೋಟಿಮಠ ವಿಷಯ ಪರೀವೀಕ್ಷಕ ಎಂ.ಆರ್. ಪಟ್ಟಣಶೆಟ್ಟಿ, ವಿ.ಕೆ.ಕೋಲತೆ ಹಾಗೂ ಡಿ.ಎನ್.ಮಿಸಾಳೆ ಉಪಸ್ಥಿತರಿದ್ದರು.

ವಿಜ್ಞಾನಕೇಂದ್ರದ ರಾಜಶೇಖರ ಗೌಡ ಪಾಟೀಲ ಸ್ವಾಗತಿಸಿದರು. ಶಿಕ್ಷಕರಾದ ಆರ್.ಜಿ.ಹಲಗಲಿಮಠ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಿರ್ವಹಣೆ ಮಾಡಿದರು.

ಗ್ರಾಮೀಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮರಕುಂಬಿ ಪ್ರೌಢಶಾಲೆಯ ಕು.ಭಾರತಿ ಹೊಳೆ ಮತ್ತು ದಿವ್ಯಾ ಮುಂಗರವಾಡಿ ಗಳಿಸಿದರೆ, ದ್ವಿತೀಯ ಸ್ಥಾನವನ್ನು ಮೋದಗಾ ನಿರ್ಮಲ ಪ್ರೌಢಶಾಲೆ ಯ ವಿಶಾಲ ಇಂಗಳೆ, ಮತ್ತು ಜ್ಯೌತಿ ಅಕ್ಕತಂಗೇರಹಾಳ ಪಡೆದು ಕೊಂಡರು. ನಗರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬೈಲಹೊಂಗಲ ಎಸ್ಜಿವಿ ಪ್ರೌಢಶಾಲೆಯ ಸಾಗರ ಕಮ್ಮಾರ ಮತ್ತು ಕಿರಣ ಹಿರೇಮಠ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಎಂ.ವಿ.ಹೆರವಾಡಕರ ಪ್ರೌಢಶಾಲೆಯ ಅಭಿಷೇಕ ಕುಮಾರ ಮತ್ತು ಗೋವಿಂದರಾಜ ಡಿ.ಎಸ್ ಪಡೆದುಕೊಂಡರು.

Tags | , , ,

3 Comments For This Post

  1. Madhav Says:

    This is a good effort from Kannadamma. It will be good to read them online since many of us work outside the country. It will be great if we can leave comments in Kannada.

    I also see that only some news has been covered from the whole newspaper. It will be great if you can do all the news so that there is a good archive of Kannada news.

    Overall a good initiative. Hope all Kannada newspapers do the same

  2. Venkatesh Says:

    Dear madhav:
    Thanks for your comment, This is an inital attempt to provide readers to read news in kannada and keep themselves with the latest developments in North Eastern Karnataka.
    you can definitely post in Kannada, Since you have a gmail account, in Gmail click on compose Mail, you have language option, you can select Kannda. Its easy to type in gmail, once you type the comment, the same can be copied the comment box and pasted.
    Regards

  3. Arun S. Hanamshet Says:

    This is a good & wonderfull effort from Kannadamma. It will be good to read them online Kannada paper
    I also see that spot news in this sight so that there is a good archive of Kannada news.
    Overall a good initiative. Hope all Kannada newspapers do the same
    One more suggestion pls make a faciality of type a coments in kannada language.
    Best of luck

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives