ಅಪಾಯದಿಂದ ಮುಂಬೈ ಬಚಾವ್
Posted on 11 November 2009 by Venkatesh
ಮುಂಬೈ, 11-ಮುಂಬೈ ಪ್ರದೇಶದಲ್ಲಿ ಗುಜರಾತದ ಕಡೆಯಿಂದ ಚಂಡ ಮಾರುತ ಬೀಸಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನವಿಲಾಖೆ ನೀಡಿ ನಗರದ ಜನರು ಹೈ ಅಲರ್ಟ ಇರಬೇಕು ಎಂದು ಹೇಳಿದ್ದರಿಂದ ಮುಂಬೈ ಜನರು ಸಂಭವನೀಯ ಚಂಡ ಮಾರುತದ ಅಪಾಯದಿಂದ ಕಂಗಾಲಾಗಿದ್ದರು. ಆದರೆ ಮಧ್ಯಾಹ್ನದ ನಂತರ ಹವಾಮಾನ ಇಲಾಖೆ ಮತ್ತೊಂದು ಪ್ರಕಟನೆ ನೀಡಿ ಮುಂಬೈಗೆ ಬರಲಿದ್ದ ಚಂಡ ಮಾರುತ ದಿಕ್ಕು ಬದಲಿಸಿದೆ. ಅಲ್ಲದೆ ಅದು ತನ್ನ ಮೊದಲಿನ ಶಕ್ತಿಯನ್ನು ಕಳೆದುಕೊಂಡು ದುರ್ಬಕವಾಗಿದೆ. ಆದರೆ 48 ಗಂಟೆ ಅವಧಿಯಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಎಂದು ಹೇಳಿದ್ದರಿಂದ ಚಂಡಮಾರುತದ ಅಪಾಯದಿಂದ ಪಾರಾದ ಮುಂಬೈ ಜನರ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರು.
ಹವಾಮಾನ ಇಲಾಖೆ ಮೊದಲು ಸುಂಟರ ಗಾಳಿ ಅಪ್ಪಳಿಸಲಿದೆ. ಎಂಬ ಎಚ್ಚರಿಕೆ ಯನ್ನು ನೀಡಿದ ನಂತರ ಮಹಾ ರಾಷ್ಟ್ತ್ರ ಸರಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡು ಶಾಲೆ ಕಾಲೇಜುಗಳಿಗೆ ರಜೆ ನೀಡಿತು. ಸರಕಾರ ಕಚೇರಿಗಳಿಗೂ ರಜೆ ನೀಡಿ ಸಂಜೆ ಒಳಗಾಗಿ ಎಲ್ಲರೂ ತಮ್ಮತಮ್ಮ ಮನೆಗೆ ತೆರಳ ಬೇಕೆಂದು ಸೂಚನೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ತೆರಳಬೇಕು ಸೂಚನೆ ನೀಡಲಾ ಯಿತು. ಭಾರಿ ಮಳೆಯಾಗುವ ಸೂಚನೆ ಇರುವುದರಿಂದ ತಗ್ಗು ಪ್ರದೇಶದಲ್ಲಿ ಇರುವ ಮನೆಗಳ ಜನರಿಗೆ ಸುಕ್ಷಿತ ಸ್ಥಳಗಳಿಗೆ ಹೋಗುವ ಸೂಚನೆಯನ್ನು ನೀಡಲಾಯಿತು.
ಇದಕ್ಕೂ ಮೊದಲು ಗುಜರಾತದಲ್ಲಿ 70 ಬೋಟುಗಳಲ್ಲಿ ಇದ್ದ 700 ಮೀನುಗಾರರು ಕಣ್ಮರೆಯಾಗಿದ್ದು ಅವರನ್ನು ರ್ಶೋ ಮಾಡುವ ಕಾರ್ಯವನ್ನು ಕರಾವಳಿ ಪಡೆಯವರು ತೀವ್ರ ಗೊಳಿಸಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿಯೂ ತೀವ್ರ ಮಳೆಯಾಗುವ ಸಾಧ್ಯತೆ ಇದೆ. ದಕ್ಷಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳು ನಾಳೆ ಜಿಲ್ಲೆಯ ಎಲ್ಲ ಕಡೆಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಜೊತೆಗೆ ಮೀನುಗಾರರಿಗೆ ಸಮುದ್ರ ದಂಡೆಗೆ ತೆರಳದಂತೆ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಲಾಗಿದೆ.
ವಿಮಾನ ವಿಳಂಬ:
ಮುಂಬೈಯಲ್ಲಿ ದಟ್ಟವಾದ ಮೋಡಗಳು ಕವಿದು ರಭಸದ ಮಳೆ ಆರಂಭವಾಗಿರು ವುದರಿಂದ ಅಂತರರಾಷ್ಟ್ತ್ರೀಯ ವಿಮಾನಗಳು ಸಂಚಾರದಲ್ಲಿ ಏರುಪೇಉ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ ಬಹರೇನ್ ಹಾಗೂ ಬೀಜಿಂಗ್ ವಿಮಾನಗಳ ಹಾರಾಟದಲ್ಲಿಯೂ ಏರುಪೇರುಗಳು ಉಂಟಾಗಲಿವೆ. ಎಂದು ಹೇಳಲಾಗಿದೆ.
ಕಾರ್ಯಾಚರಣೆಯ ಪಡೆ:
ಚಂಡಮಾರುತದ ಅಪಾಯ ತಪ್ಪಿದರೂ ಸಹ 48 ಗಂಟೆ ಕಾಲ ಮುಂಬೈ ನಗರದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವುದರಿಂದ ಮಳೆಯಿಂದಾದ ಸಂಭವಿಸುವ ಆಸ್ತಿ ಪಾಸ್ತಿ ನಷ್ಟ ಜೀವಹಾನಿ ತಪ್ಪಿಸಲು ದಿನದ 24 ಗಂಟೆ ಸತತವಾಗಿ ಕಾರ್ಯ ಮಾಡುವ ತುರ್ತು ಕಾರ್ಯಾ ಚರಣೆಯ ಪಡೆಗಳನ್ನು ಸನ್ನದ್ಧ ಗೊಳಿಸಲಾಗಿದೆ ಎಂದು ಹೇಳಲಾ ಗಿದೆ. ಮಳೆಯಿಂದ ತೊಂದರೆಗೆ ಜನರು ಒಳಗಾದರೆ ಅವರು ತುರ್ತು ಸಹಾಯವನ್ನು ಪಡೆಯಲು ಅವಕಾಶ ಮಾಡಿಕೊಳ್ಳಲು ದಿನ 24 ಗಂಟೆ ಕಾರ್ಯ ಮಾಡುವ ಸಹಾಯವಾಣಿ ಕೇಂದ್ರಗಳನ್ನು ನಗರದ ಮಹತ್ವದ ಸ್ಥಳಗಳಲ್ಲಿ ತೆರೆಯಲಾಗಿದೆ. ತೊಂದರೆಗೆ ಒಳಗಾದ ಜನರು ದೂರವಾಣಿ ಕರೆ ಮಾಡಿದರೆ ಅವರುಗೆ ನೆರವು ಒದಗಿಸಲು ಆ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
Tags | cyclon, mumbai, ಚಂಡ ಮಾರುತ, ಮುಂಬೈ ಬಚಾವ್
