Categorized | ರಾಜ್ಯ

ಸಂಪುಟದ ಸಭೆಯಿಂದ ರೆಡ್ಡಿ ಶ್ರೀರಾಮಲು ನಿರ್ಗಮನ

Posted on 11 November 2009 by Venkatesh

ಬೆಂಗಳೂರು,11- ಬಿಕ್ಕಟ್ಟು ಶಮನದ  ನಂತರ ಸುಮಾರು ಅರ್ಧ ತಿಂಗಳ ಮೇಲೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಭಿನ್ನಮತೀಯ ಸಚಿವರಾದ  ಜನಾರ್ಧನ ರೆಡ್ಡಿ, ಶ್ರೀ ರಾಮಲು, ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು ಸಂಪುಟದ ಸಭೆಯಿಂದ ಅರ್ಧದಲ್ಲಿಯೇ ಉಭಯ ಸಚಿವರು ಹೊರ ನಡೆದಿರುವುದರಿಂದ ಬಿಕ್ಕಟ್ಟು ಪೂರ್ಣ  ಪ್ರಮಾಣದಲ್ಲಿ ಶಮನ ಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.

    ಮಧ್ಯಾಹ್ನ 3-15 ಕ್ಕೆ ಸಂಪುಟದ ಸಭೆ  ಆರಂಭವಾದ ನಂತರ ಭಿನ್ನಮತೀಯ ಸಚಿವರು  ಆರೋಗ್ಯ ಇಲಾಖೆಯ  ಕಾರ್ಯದರ್ಶಿ ಪೆರುಮಾಳು ಅವರು ಮರು ನೇಮಕ ಆಗಬೇಕು ಈಗ ಕೇವಲ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು ಉಳಿದ ವರ್ಗಾವಣೆಗೊಂಡ ಅಧಿಕಾರಿಗಳು ಮರು ನೇಮಕ ಆಗಬೇಕು. ಆಮೇಲೆ ಸಂಧಾನ ಸೂತ್ರದಂತೆ ಉಳಿದ ಸಚಿವರನ್ನು ಕೈ ಬಿಡಬೇಕು ಸಚಿವರ ಖಾತೆಗಳಲ್ಲಿ ಬದಲಾವಣೆಯಾಗಬೇಕು ಎಂದು ಪಟ್ಟು ಹಿಡಿದಾಗ ಮುಖ್ಯ ಮಂತ್ರಿ ಯಡಿಯೂರಪ್ಪ ಈ ಸಂಪುಟದ ಸಭೆಯಲ್ಲಿ ಆ ವಿಷಯಗಳ  ಚರ್ಚೆ ಬೇಡ  ಮುಂದಿನ ಸಂಪುಟದ ಸಭೆಯಲ್ಲಿ ಆ ಕುರಿತು ಚರ್ಚೆ ಮಾಡೋಣ ಎಂದರು. ಇದಕ್ಕೆ ಭಿನ್ನಮತೀಯ ಸಚಿವರು ಒಪ್ಪಿಕೊಳ್ಳದೆ ಮಾತಿನ ಚಕಮಕಿ ನಡೆಸಿ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣವನ್ನು ಮುಂದೆ ಮಾಡಿ ಸಂಪುಟದ ಸಭೆಯಿಂದ ನಿರ್ಗಮಿಸಿದರೆಂದು ಹೇಳಲಾಗಿದೆ.

ಅವರ ನಿರ್ಗಮನದ ನಂತರ ಸಭೆ ಬಹಳ ಕಾಲ ಮುಂದು ವರೆಯಲಿಲ್ಲ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಹ ಸಚಿವ ವಿ. ಎಸ್. ಆಚಾರ್ಯ ಅವರು ಮುಂದಿನ ತಿಂಗಳು 10 ರಿಂದ 10 ದಿನಗಳ ಕಾಲ ಚಳಿಗಾಲದ ವಿಧಾನ ಮಂಡಳ ಅಧೊವೇಶನ ನಡೆಯಲಿದೆ ಎಂದು ಪ್ರಕಟಿಸಿದರು.        

ಈ ಮೊದಲು ಜನಾರ್ಧನ ರೆಡ್ಡಿ ಅವರು ಅನಂತ ಕುಮಾರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲಿ ಸಮನ್ವಯ  ಸಮೀತಿಯ ರಚನೆ ಆಗಲಿದೆ. ಸದಸ್ಯರು ಯಾರು ಇರುತ್ತಾರೆ ಎಂಬುದನ್ನು ಕೇಂದ್ರ ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು.

ಮುಖ್ಯ ಮಂತ್ರಿಗಳು ಇಂದು ಮುಂಜಾನೆ ಮಲೆಮಹಾದೇಶ್ವರ  ಬೆಟ್ಟಕ್ಕೆ ತೆರಳಿ ಮಾದೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಿನ್ನೆ ಕೂಡಾ ಅವರು ಮೈಸೂರಿನಲ್ಲಿ ಚಾಮುಂಡಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.

    ಸಂಧಾನ ಸೂತ್ರದ  ಎಲ್ಲ ಬೇಡಿಕೆಗಳು ಶೀಘ್ರ ಇಡೇರಬೇಕು ಎಂದು ಭಿನಮತಿಯರು ಪಟ್ಟು ಹಿಡಿದಿದ್ದಾರೆ. 5 ಸಚಿವರನ್ನು ಕೈ ಬಿಡಬೇಕು. ಖಾತೆಗಳ ಹಂಚಿಕೆ ಬದಲಾಗಬೇಕು. ತಾವು  ಕೇಳಿದ ಇಲಾಖೆಗಳನ್ನು ತನ್ನ ಗುಂಪಿಗೆ ನೀಡಬೇಕು. ಸಚಿವರ ರಾಜಿನಾಮೆಯಿಂದ ತೆರವಾಗುವ ಸ್ಥಾನಗಳಲ್ಲಿ  ಭಿನ್ನಮತೀಯ ಶಾಸಕರಿಗೆ  ಸ್ಥಾನಗಳನ್ನು ನೀಡಬೇಕು ಎಂಬುದು ರೆಡ್ಡಿ ಬಣದ ಅಗ್ರಹವಾಗಿದೆ ಎಂದು ಹೇಳಲಾಗಿದೆ.

ಇದನ್ನೆಲ್ಲ ನೋಡಿದರೆ 15 ರಿಂದ 17 ರ ಒಳಗಾಗಿ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆ  ನಡೆಯುವ ಸಾಧ್ಯತೆ ಇದೆ. 17 ರಿಂದ 19 ರ ಒಳಗಾಗಿ ಸಚಿವ ಸಂಪುಟದ ಪುನಾರಚನೆ ನಡೆಯುವ ಸಾಧ್ಯತೆ ಇದೆ.

          ಇದಕ್ಕೂ ಮೊದಲು ಸೋಮವಾರ ರಾತ್ರಿ ಯಡಿಯೂರಪ್ಪನವರ ನಿವಾಸದಲ್ಲಿ ಜನಾರ್ಧನ ರೆಡ್ಡಿ ಹಾಗೂ ಶ್ರೀ ರಾಮಲು ಚರ್ಚೆ ನಡೆಸಿದಾಗ ಮುಖ್ಯ ಮಂತ್ರಿಗಳು ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶವನ್ನು ಕೇಳಿದ್ದರು ಅದಕ್ಕೆ ಜನಾರ್ಧನ ರೆಡ್ಡಿ ಹಾಗೂ ಶ್ರೀ ರಾಮಲು ಅವರು  ಒಪ್ಪಿಕೊಂಡಿರಲಿಲ್ಲ.  ರೆಡ್ಡಿ ಬಣದ  ವೇಗವನ್ನು ನೋಡಿದರೆ ಅವರು ಈ ತಿಂಗಳ ಅಂತ್ಯದ ಒಳಗೆ ಸಂಧಾನ ಸೂತ್ರದ ಎಲ್ಲ ಸೂತ್ರಗಳನ್ನು  ಈಡೇರಿಸಿಕೊಳ್ಳುವ  ಆತರದಲ್ಲಿ  ಇರುವದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಶೆಟ್ಟರ ರಾಜೀನಾಮೆ ಸಾಧ್ಯತೆ

ಇಂದು  ನಡೆದ  ಮಹತ್ವದ ಬೆಳವಣಿಗೆಯಲ್ಲಿ ಭಾಜಪ  ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ವಿಧಾನ ಸಭೆಯ ಅಧ್ಯಕ್ಷ ಜಗದೀಶ ಶೆಟ್ಟರ ಜೊತೆಗೆ  ಬಹು ಹೊತ್ತಿನ ವರೆಗೆ  ರಹಸ್ಯ ಸ್ಥಳದಲ್ಲಿ ಚರ್ಚೆ ನಡೆಸಿ  ಚಚೆ ಮುಗಿದ  ನಂತರ ಮಾಧ್ಯಮ ಪ್ರತಿನಿಧಿಗಳ ಕಣ್ಣು ತಪ್ಪಿದ ನೇರವಾಗಿ ದೆಹಲಿಗೆ ಹೊರಟು ಹೋದ  ಘಟನೆ ನಡೆದಿದೆ

          ಈ ಚರ್ಚೆ ಸಮಯದಲ್ಲಿ  ವೆಂಕಯ್ಯ ನಾಯ್ಡು ಅವರು ಸಚಿವ ಸ್ಥಾನ  ಒಪ್ಪಿಕೊಳ್ಳುವಂತೆ ಜಗದೀಶ  ಶೆಟ್ಟರ ಮೇಲೆ ಒತ್ತಡ ಹೇರಿದ್ದಾರೆಂದು ಹೇಳಲಾಗಿದೆ.

          ಇದರ ನಂತರ ಜಗದೀಶ ಶೆಟ್ಟರ ಅವರು ನಾಳೆ ಸಂಜೆಯ ಒಳಗಾಗಿ ತಮ್ಮ ಅಂತಿಮ ನಿರ್ಧಾರವನ್ನು  ತಿಳಿಸುವುದಾಗಿ  ವೆಂಕಯ್ಯ ನಾಯ್ಡು ಅವರಿಗೆ ಭರವಸೆಯನ್ನು ನೀಡಿದ್ದಾರೆ. ಎಂದು ಹೇಳಲಾಗಿದೆ. ನಾಳೆ ಸಂಜೆಯ ಒಳಗಾಗಿ ಜಗದೀಶ ಶೆಟ್ಟರ ಅವರು ವಿಧಾನ ಸಭೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಾಧ್ಯತೆ ಇದೆ ಎಂದು  ಹೇಳಲಾಗಿದೆ.  ಈ ಮೊದಲು ಅವರು ತಾವು ಸಚಿವರಾಗುವದಿಲ್ಲ ವಿಧಾನಸಭೆಯ  ಅಧ್ಯಕ್ಷರಾಗಿಯೇ ಮುಂದು ವರೆಯುವುದಾಗಿ  ಹೇಳಿದ್ದರಿಂದ ವೆಂಕಯ್ಯ ನಾಯ್ಡು ಮೂಲಕ ಜಗದೀಶ ಶೆಟ್ಟರ ಅವರ ಮೇಲೆ  ಒತ್ತಡ ಹೇರುವ ಕಾರ್ಯವನ್ನು  ಮಾಡಲಾಗಿದೆ ಎಂದು ಹೇಳಲಾಗಿದೆ.

          ಈ ಎಲ್ಲಾ ಬೆಳವಣಿಗ ೆಗಳಿಂದ ತೀವ್ರವಾಗಿ ನೊಂದು ಕೊಂಡಿರುವ ಮುಖ್ಯ ಮಂತ್ರಿ ಯಡಿಯೂರಪ್ಪನವರು  ಕಂಡ ಮಕಂಡ ದೇವರಿಗೆ  ತೆರಳಿ ಅಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ ಯಾವ ದೇವರು ಅವರಿಗೆ ವರ ಕೊಡುತ್ತಾರೆ ಎಂಬುದನ್ನು  ಕಾಯ್ದು ನೋಡಬೇಕಾಗಿದೆ.  ಒಟ್ಟಿನಲ್ಲಿ ಸಂಧಾನಕ್ಕೆ  ಒಪ್ಪಿಕೊಂಡ ಮುಖ್ಯ ಮಂತ್ರಿಗಳು ಈಗ ಮುಳ್ಳಿನ ಹಾಸಿಗೆಯ ಮೇಲೆ  ಮಲಗಿದ ಅನುಭವವನ್ನು ಪಡೆದು            ಕೊಳ್ಳತೊಡಗಿದ್ದಾರೆ ಎದ್ದು ಬರಲು  ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ.

 

Tags | , ,

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives