Categorized | ರಾಜ್ಯ

ಅನುಕಂಪದ ಆಧಾರದ ಮೇಲೆ ನೇಮಕಕ್ಕೆ ಮಾರ್ಗ ಸುಲಭ

Posted on 11 November 2009 by Venkatesh

ಬೆಂಗಳೂರು, 11- ಕಾಸಗೀ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುವಾಗಲೆ ಅಕಸ್ಮಿಕವಾಗಿ ಉದ್ಯೌಗಿಗಳ ಸಾವು ಸಂಭವಿಸಿದರೆ ಅನುಕಂಪದ ಆಧಾರದ ಮೇಲೆ  ಆ ಕುಟುಂಬದ ಸದಸ್ಯರೊಬ್ಬರಿಗೆ ನೇಮಕಾತಿ ನೀಡಲು ಮಾರ್ಗವನ್ನು ಸರಳಗೊಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ  ಕಾಗೇರಿ  ಹೇಳಿದ್ದರು.

          ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆ ಸಂಸ್ಥೆಯ ಶಾಲೆಗಳಲ್ಲಿ ನೇಮಕಾತಿ ಕೊಡಲು ಯಾವುದೇ  ಹುದ್ದೆಗಳು ತೆರವಾಗಿರದಿದ್ದರೆ ಅದೇ ರೀತಿಯ ಬೇರೆ ಸಂಸ್ಥೆಗಳ ಶಾಲೆಗಳಲ್ಲಿ ನೇಮಕಾತಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

          ಇದು ವರೆಗೆ ಈ ವ್ಯವಸ್ಥೆ ಇಲ್ಲದ್ದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು  ತೊಂದರೆಯಾಗುತ್ತಿತ್ತು. ಈಗ ಆ ತೊಡಕನ್ನು ನಿವಾರಿಸಿ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಅವಕಾಶ ವನ್ನು ಕಲ್ಪಿಸಿ ಕೊಡಲಾಗಿದೆ.  ಎಂದು ಅವರು ಸ್ಪಷ್ಟ ಪಡಿಸಿದರು. ಇದರಿಂದ ಈ ರೀತಿಯ ಅರ್ಜಿಗಳು ಬೇಗ ಇತ್ಯರ್ಥವಾಗಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.

Tags | ,

1 Comments For This Post

  1. mahesh Says:

    Dear sir

    Suppose the boy is a minor Now the boy age is 15 his father is death on 3.11.09 he is elegible for appointment on compassionate grounds

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives