Categorized | ಬೆಳಗಾವಿ

ಬೆಳಗಾವಿಯಲ್ಲಿ ಶಿನೂತನ ಕೌಶಲ್ಯಾಭಿವೃದ್ದಿ ಕೇಂದ್ರದಷಿಉದ್ಘಾಟನೆ

Posted on 18 January 2010 by murthy

05[1]ಬೆಳಗಾವಿ, ಜನೇವರಿ18: ಸುವರ್ಣ ವಸ್ತ್ತ್ರ ನೀತಿ ಯೋಜನೆಯಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲಿ ಆರಂಭಿಸಲಾದ ಶಿಹೊಸ ಕೌಶಲ್ಯಾಭಿವೃದ್ದಿ ಕೇಂದ್ರಷಿ ವನ್ನು ಜವಳಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾದ ಶ್ರೀ. ಗೂಳಿಹಟ್ಟಿ ಡಿ. ಶೇಖರ ಅವರು ಇಂದು ಉದ್ಘಾಟಿಸಿದರು.
ನಗರದ ಮಾರುತಿಗಲ್ಲಿಯಲ್ಲಿರುವ ಅರವಿಂದ ಕಾಂಪ್ಲೇಕ್ಸ್ನಲ್ಲಿಂದು ಈ ಹೊಸ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರಕಾರವು ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿಗಾಗಿ ಒಟ್ಟು 20 ಕೇಂದ್ರಗಳನ್ನು ಈಗಾಗಲೇ ಮಂಜೂರು ಮಾಡಿದೆ. ಇದಕ್ಕಾಗಿ 30 ಲಕ್ಷ ರೂ. ಅನುದಾನ ನೀಡಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವತಿಯಿಂದ ಬೆಳಗಾವಿಯಲ್ಲಿ ಈ ಕೇಂದ್ರ ಆರಂಭಕ್ಕೆ ಇಂದು ಚಾಲನೆ ದೊರೆತ್ತಿದೆ. ಅದರಂತೆ ರಾಜ್ಯದ ಬಿಜಾಪೂರ, ಹಾಸನ, ಕೋಲಾರ ಹಾಗೂ ಚಾಮರಾಜನಗರದಲ್ಲಿ ಈ ಸಂಸ್ಥೆ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆಯೆಂದು ಸಚಿವರು ಹೇಳಿದರು.
ಸುವರ್ಣ ವಸ್ತ್ತ್ರ ನೀತಿ ಯೋಜನೆಯಡಿ (2008 ರಿಂದ 5 ವರ್ಷಗಳ ವರೆಗೆ) ಒಟ್ಟು 500 ಕೋಟಿ ರೂ. ವೆಚ್ಚ ಮಾಡಿ 5 ಲಕ್ಷ ನಿರುದ್ಯೌಗಿಗಳಿಗೆ ಉದ್ಯೌಗ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಡಿ ವಿದ್ಯುತ್ ಮಗ್ಗ, ಕೈಮಗ್ಗ, ಕಸೂತಿ, ಹೀಗೆ ಹತ್ತು ಹಲವು ವೃತ್ತಿಗಳಿಗೆ ಪ್ರೌತ್ಸಾಹ ನೀಡಲು ಕ್ರಮಕೈಗೊಳ್ಳಲಾಗಿದೆ. ಗಾರ್ಮೆಂಟ್ಸ್ ಉದ್ದಿಮೆಗಳನ್ನು ಹೆಚ್ಚಿನ ರೀತಿಯಲ್ಲಿ ಸ್ಥಾಪಿತಗೊಂಡು ಹೆಚ್ಚಿನ ಜನರಿಗೆ ಉದ್ಯೌಗ ಅವಕಾಶ ಕಲ್ಪಿಸಬೇಕೆಂಬ ಸದುದ್ದೇಶ ಸರಕಾರ ಹೊಂದಿದೆ. ಈ ದಿಸೆಯಲ್ಲಿ ಉದ್ದಿಮೆದಾರರು ಮೊದಲು ತರಬೇತಿ ವ್ಯವಸ್ಥೆ ಮಾಡುವಂತೆ ಅಭಿಪ್ರಾಯವನ್ನು ಹೇಳಿದ್ದು, ಅದರನ್ವಯ ಈಗ ಕೌಶಲ್ಯಾಭಿವೃದ್ದಿ ತರಬೇತಿಯ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಈ ಉದ್ಯಿಮೆಗಳಿಗಾಗಿ ವಿಶೇಷ ಮೂಲಭೂತ ಸೌಕರ್ಯಗಳನ್ನು ಸರಕಾರದಿಂದ ಒದಗಿಸುವ ಮೂಲಕ ಮುಂಬರುವ ದಿನಗಳಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಗಾರ್ಮೆಂಟ್ಸ್ ಉದ್ದಿಮೆಗಳಲ್ಲಿ ಹೆಚ್ಚಿನ ಉದ್ಯೌಗ ಅವಕಾಶ ಸೃಷ್ಠಿಸಲು ನೆರವಾಗಲಿದೆ ಎಂದು ಹೇಳಿದರು.
ಸರಕಾರವು ನೇಯ್ಗೆ, ಕಸೂತಿ, ಕೈಮಗ್ಗ, ವಿದ್ಯುತ್ ಮಗ್ಗಗಳಲ್ಲಿ ತರಬೇತಿ ದೊರಕಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಈಗ ಕೌಶಲ್ಯಾಭಿವೃದ್ದಿ ತರಬೇತಿ ಪಡೆಯುವವರಿಗೆ 2000/- ರೂ.ಗಳ ಶಿಷ್ಯವೇತನವು ಸಹ ನೀಡಲಾಗುತ್ತಿದ್ದು, ಈ ಹಿಂದೆ ಇಂತಹ ಸೌಲಭ್ಯ ಯಾವ ಸರಕಾರವು ನೀಡಿಲ್ಲ ಎಂದ ಅವರು ರಾಜ್ಯದಲ್ಲಿ ಅಕ್ಕಪಕ್ಕದ ರಾಜ್ಯಗಳ ಮಾದರಿಯಂತೆ ಗಾರ್ಮೆಂಟ್ಸ್ ಯುನಿಟ್ ಸ್ಥಾಪನೆ ಮಾಡುವ ಉದ್ದಿಮೆದಾರರಿಗೆ ವಿದ್ಯುತ್, ಸಾಲ ಹಾಗೂ ರಿಯಾಯಿತಿ ನೀಡುವ ಮೂಲಕ ಹೆಚ್ಚಿನ ಉದ್ದಿಮೆಗಳನ್ನು ಸ್ಥಾಪಿಸಲು ಪ್ರೌತ್ಸಾಹ ನೀಡಿ ಹೆಚ್ಚು ಉದ್ಯೌಗ ಅವಕಾಶ ಸೃಷ್ಠಿಯಾಗುವಂತೆ ಪ್ರಯತ್ನಿಸಲಾಗುವುದೆಂದು ಹೇಳಿದರು. ಅದರಂತೆ ಬೆಳಗಾವಿ ಜಿಲ್ಲೆಗೆ ಅವಶ್ಯಕವಿರುವ ಟೆಕ್ಸ್ಟೈಲ್ಸ್ ಪಾರ್ಕ್ ಸ್ಥಾಪನೆಗೂ ಸಹ ಕ್ರಮಕೈಗೊಳ್ಳಲಾಗುವುದೆಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಶಾಸಕ ಸಂಜಯ ಪಾಟೀಲ ಅವರು ಕಳೆದ 50 ವರ್ಷಗಳಿಂದ ಆಗದ ಮಹತ್ತರ ಕಾರ್ಯವನ್ನು ಈಗ ಜವಳಿ ಸಚಿವರಿಂದ ಆಗಿದ್ದು, ಬೆಳಗಾವಿಯಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆಯಿಂದ ಇಲ್ಲಿಯ ಮಹಿಳೆಯರಿಗೆ ಫ್ಯಾಶನ್ ತಂತ್ರಜ್ಞಾನದಲ್ಲಿ ಹೆಚ್ಚಿನ ಉನ್ನತಿ ಪಡೆಯಲು ನೆರವಾಗಲಿದೆ ಎಂದು ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀಮತಿ. ಅಶ್ವಿನಿ ಪಾಟೀಲ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನಿರ್ದೇಶಕ ಬಿ. ವೇದಗಿರಿ ಮಾತನಾಡಿದರು. ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳಾದ ಡಾ|| ವಿಜಯಕುಮಾರ ತೋರಗಲ್ ಉಪಸ್ಥಿತರಿದ್ದರು. ಬೆಳಗಾವಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಜ್ಹೌರಪ್ಪ ಮಲಕೇರಿ ಸ್ವಾಗತಿಸಿದರು.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives