ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿಕ ಕಾರ್ಯಾಗಾರ
Posted on 18 January 2010 by murthy
(ಕನ್ನಡಮ್ಮ ವಾರ್ತೆ)
ಮೂಡಲಗಿ,18- ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಪ್ರಗತಿಯಾಗಲು ಹಮ್ಮಿಕೊಂಡ ಕಾರ್ಯಕ್ರಮಗಳು ಮೂಡಲಗಿ ವಲಯವು ಬೇರೆ ವಲಯಗಳಿಗೆ ಮಾದರಿಯಾಗಬೇಕಾಗಿದೆ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಕಾಯಕಲ್ಪಕೋಡುವದಾಗಿ ಬೆಳಗಾವಿ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ, ಬಿ.ಆರ್.ಸಿ ಕಾರ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡ ಮುಸ್ಲಿಂ ಸಮುದಾಯದ ನಾವಿನ್ಯಯುತ ಶೈಕ್ಷಣಿಕ ಜಾಗೃತಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅರಭಾವಿ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಉರ್ದು ಶಾಲೆಗಳ ಕೋರತೆ ಇತ್ತು ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಐದು ವರ್ಷಗಳಲಿ ಕ್ಷೇತ್ರಕ್ಕೆ ಉರ್ದು ಪ್ರಾಥಮಾಕ ಹಾಗೂ ಪ್ರೌಢ ಶಾಲೆಗಳನ್ನು ಸಾಕಷ್ಟು ನೀಡಿದಾರೆ ಮುಂದಿನ ದಿನಗಳಲ್ಲಿ ಯಾದವಾಡ,ಕೌಜಲಗಿ, ಮೇಳವಂಕ್ಕಿ ಗ್ರಾಮಗಳಿಗೆ ಪ್ರೌಢ ಶಾಲೆಗಳನ್ನು ಪ್ರಾರಂಭಿಸಲ್ಲಿಕ್ಕೆ ಪ್ರಯತ್ನಿಸುವದಾಗಿ ತಿಳಿಸಿದರು. ಮೂಡಲಗಿಯಲ್ಲಿ ಶಿಕ್ಷಕರ ಗುರುಭವನ ನೀರ್ಮಿಸಲ್ಲಿಕ್ಕೆ ಪುರಸಭೆಯವರು ಭೂಮಿ ನೀಡಿದಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಎ.ಎಸ್.ಸಯ್ಯದಸಾಬ, ಮಹ್ಮದ ಅಜ್ಮಖಾನ, ಎನ್.ಎ. ಮಕಾನಂದಾರ ಮುಸ್ಲಿಂ ಸಮುದಾಯದ ಪಾಲಕರು ಉರ್ದು ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವದೆರೊಂದಿಗೆ ಸಮುದಾಯದಲ್ಲಿ ಜಾಗೃತಿ ಮುಡಿಸಲು ಕೇಳಿಕೊಂಡರು. ಬಿ.ಟಿ.ಟಿ.ಕಮೀಟಿ ಅಧ್ಯಕ್ಷ ಅಜೀಜಿ ಡಾಂಗೆ ಅಧ್ಯಕ್ಷತೆ ವಹಿಸಿದರು.ಪುರಸಭೆ ಪ್ರಭಾರಿ ಅಧ್ಯಕ್ಷ ಸಂತೋಷ ಸೋನವಾಲ್ಕರ, ಜಿ.ಪಂ.ಸದಸ್ಯರಾದ ಶಮಕರ ಬೀಲಕುಂದಿ, ಭಾರತಿ ಪಾಟೀಲ, ಸುಧಿರ ಜೋಡಟ್ಟಿ, ಮತ್ತು ಅನ್ವರ ನಧಾಪ, ಎನ್.ಎಮ್.ಥರಥರಿ, ಆರ್.ಎಮ್.ಮಹಾಲಿಂಗಪೂರ,ಮಹಾತೇಶ ಸಣ್ಣಕ್ಕಿ, ಬಿ.ಎಚ್.ಮುಲ್ಲಾ,ಎಸ್.ಬಿ.ಕುಂಬಾರ ಮತ್ತಿಥರು ಉಪಸ್ಥೀತರಿದರು. ಬಿ.ಆರ್.ಸಿ ಅಧಿಕಾರಿ ಎಮ್.ಆರ್.ಮುಂಜಿ ಸ್ವಾಗತಿಸಿದರು, ಬಿ.ಎಮ್. ಮೋಮಿನ ಹಾಗೂ ಡಿ.ಕೆ.ಜಮಾದಾರ ನಿರೂಪಿಸಿದರು, ಬಿ ಅಜೀತ ಮನ್ನೀಕೇರಿ ವಂದಿಸಿದರು.
