Categorized | ರಾಜ್ಯ

ಸರ್ಕಾರದ ಬಳಿ ಮಂತ್ರದ ದಂಡವಿಲ್ಲ

Posted on 20 January 2010 by murthy

ಬೆಂಗಳೂರು, ಜ. 20: ರೈತರ ಎಲ್ಲ ಸಮಸ್ಯೆಗಳಿಗೆ ಸರ್ವಸಮ್ಮತ ಪರಿಹಾರ ಹುಡುಕುವ ಯಾವುದೇ ಮಂತ್ರದಂಡ ಸರ್ಕಾರದ ಬಳಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಹತಾಶೆಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ದಶಕಗಳಿಂದ ರೈತರ ಸಮಸ್ಯೆ ಮುಂದುವರೆದುಕೊಂಡು ಬಂದಿದೆ. ನಮ್ಮ ಸರ್ಕಾರ ಇದುವರೆಗೆ ಯಾವುದೇ ಸರ್ಕಾರ ಕೊಡದೇ ಇರುವಷ್ಟು ಸೌಲಭ್ಯವನ್ನು ರಐತ ಸಮುದಾಯಕ್ಕೆ ಕೊಟ್ಟಿದೆ.
ಹೀಗಾಗಿ ಅವರ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುವ ಮಂತ್ರದಂಡ ತಮ್ಮ ಬಳಿ ಇಲ್ಲ ಎಂದು ಹೇಳಿದರು.
ಸರ್ಕಾರದ ವಿರುದ್ದ ದಂಗೆ ಎದ್ದಿರುವ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಆಯಾಯ ಜಿಲ್ಲೆಯಲ್ಲಿ ಬರುವ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಪರಿಹಾರ ಹುಡುಕಬೇಕು. ಈ ವಿಷಯದಲ್ಲಿ ಸರ್ಕಾರ ಏನೂ ಮಾಡಲಿಕೆ ಆಗೋದಿಲ್ಲ, ಇದರಲ್ಲಿ ಸರ್ಕಾರದ ಪಾತ್ರ ಬಹಳ ಕಡಿಮೆ ಇದೆ ಎಂದು ಜಾರಿಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವರು, ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತ ಮುಖಂಡರು ಒಂದೆಡೆ ಕುಳಿತು ಪರಸ್ಪರ ವಿಶ್ವಾಸದ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಈಗ ಸಕ್ಕರೆಗೆ ಎಂದೂ ಇಲ್ಲದಂತಹ ಬೆಲೆ ಬಂದಿದೆ. ಈ ಸಂದರ್ಭದಲ್ಲಿ ಅವರೂ ಕೂಡ ಪರಿಸ್ಥಿತಿ ಅರ್ಥ ಮಾಡಿಕೊಂಡು ರೈತರಿಗೆ ನೆರವಿಗೆ ಬರಬೇಕು, ಸಮಸ್ಯೆಯ ಪರಿಹಾರಕ್ಕೆ ಸಹಕಾರ ಕೊಡಬೇಕು ಎಂದೂ ಕಿವಿ ಮಾತು ಹೇಳಿದರು.
ಮುಂದಿನ ಬಜೆಟ್ನಲ್ಲಿ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗುವ ಯೋಜನೆಗಳನ್ನು ಪ್ರಕಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ನಮ್ಮ ಸರ್ಕಾರ ಸಾಧ್ಯವಾದಷ್ಟೂ ಗರಿಷ್ಟ ಸೌಲಭ್ಯಗಳನ್ನು ರೈತ ಸಮುದಾಯಕ್ಕೆ ಒದಗಿಸಿಕೊಟ್ಟಿದೆ. ಹೀಗಾಗಿ ಮುಂದಿನ ಬಜೆಟ್ನವರೆಗೆ ಕಾಯುವಂತಹ ಅಗತ್ಯವಿಲ್ಲ ಎಂದು ಹೇಳಿದರು.
ಪಕ್ಷದ ಉಸಾಬರಿ, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ತಈರ್ಮಾನ ತೆಗೆದುಕೊಳ್ಳಲಿದೆಯೇ ಹೊರತು ಸರ್ಕಾರ ಇದರಲ್ಲಿ ತಲೆ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆ ಪಕ್ಷಕ್ಕೆ ಸಂಬಂಧಪಟ್ಟ ವಿಚಾರ ಅಭ್ಯರ್ಥಿಗಳನ್ನು ನಿಲ್ಲಿಸುವುದು ಪಕ್ಷದ ಪಟ್ಟಿ ಪ್ರಣಾಳಿಕೆ ತಯಾರು ಮಾಡುವುದು ಪಕ್ಷಕ್ಕೆ ಸೇರಿದ ಸಂಗತಿ. ಆದ್ದರಿಂದ ಇದರ ಬ ಗಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ವಿವಾದಾತ್ಮಕ ಬಿಟಿ ಬದನೆಕಾಯಿ ಬೆಳೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸೂಕ್ತ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು. ಬಿಟಿ ಬದನೆಕಾಯಿ ಬಗ್ಗೆ ಪರ ಮತ್ತು ವಿರೋಧ ಕುರಿತಂತೆ ಚರ್ಚೆ ನಡೆಯುತ್ತಿದೆ. ಜನರ ಆರೋಗ್ಯ ಮತ್ತು ಪರಿಸರ ಎರಡನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.
ನಿರ್ಧಾರಕ್ಕೆ ಅಗತ್ಯ: ಮಹಾದಾಯಿ ಜಲ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯಾರ್ಥಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬಹಳ ಉತ್ಸುಕವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾತುಕತೆ ಮೂಲಕವೇ ಈ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಈಗಾಗಲೇ ಪ್ರಮಾಣ ಪತ್ರ ಸಲ್ಲಿಸಿದೆ. ಕೇಂದ್ರ ಸರ್ಕಾರ ನಿರ್ಧಾರವನ್ನು ತಾವು ಸ್ವಾಗತ ಮಾಡುತ್ತೇವೆ. ರಾಜ್ಯ ಸರ್ಕಾರ ಈ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳುವ ನಿಲುವನ್ನು ಬಹಳ ಹಿಂದಿನಿಂದಲೂ ಪ್ರತಿಪಾದನೆ ಮಾಡಿಕೊಂಡು ಬಂದಿದೆ.
ಮಹಾದಾಯಿಯಲ್ಲಿ ರಾಜ್ಯದ ನೀರಿನ ಪಾಲು 45 ಟಿಎಂಸಿ ಇದೆ. ಇದರಲ್ಲಿ 7.5 ಟಿಎಂಸಿ ಕುಡಿಯಲಿಕ್ಕೆ ಬಳಸಲು ನಿರ್ಧರಿಸಲಾಗಿದ್ದು ಗೋವಾ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅಡ್ಡಿ ಉಂಟು ಮಾಡಬಾರದು ಎಂದು ಅವರು ಹೇಳದಿರು.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives