ಹೊಸ ಪಿಂಚಣಿ ಯೋಜನೆ ಜಾರಿ
Posted on 20 January 2010 by murthy
ಬೆಂಗಳೂರು, ಜ.20: ಏಪ್ರಿಲ್ 1, 2006ರ ನಂತರ ಸರ್ಕಾರಿ ಸೇವೆಗೆ ಸೇರಿರುವ ಸುಮಾರು 60 ಸಾವಿರ ಮಂದಿ ನೌಕರರಿಗೆ ವರದಾನವಾಗುವಂತಹ ಪಿಂಚಣಿ ಯೋಜನೆ ಜಾರಿಗೊಳಿಸುವ ಮಹತ್ವದ ಒಡಂಬಡಿಕೆಗೆ ರಾಜ್ಯ ಸರ್ಕಾರ ಮತ್ತು ಎಂಪಿಎಸ್ ಟ್ರಸ್ಟ್ ಇಂದು ಅಂಕಿತ ಹಾಕಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸಮೂರ್ತಿ, ಎಂಪಿಎಸ್ ಟ್ರಸ್ಟ್ನ ಎನ್.ಆರ್. ರಾಯಲು ಹಾಗೂ ಎನ್ಎಸ್ಡಿಎಲ್ನ ಜಗನ್ ರಾಯಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
ಪ್ರತಿ ವರ್ಷ 15 ರಿಂದ 20 ಸಾವಿರ ನೌಕರರು ಈ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರಲಿದ್ದಾರೆ.
ನಿವೃತ್ತಿ ನಂತರ ನೌಕರರಿಗೆ ಈ ಸೌಲಭ್ಯ ದೊರಕಲಿದ್ದು, ಒಂದು ಏಳೆ ನೌಕರರು ಮೃತಪಟ್ಟಲ್ಲಿ ಅವರ ಅವಲಂಭಿತರಿಗೆ ಈ ಪ್ರಯೋಜನೆ ದೊರಕಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಮ್ಮ ಸರ್ಕಾರ ಸರ್ಕಾರಿ ನೌಕರರಿಗೆ ಗರಿಷ್ಠ ಸೌಲಭ್ಯ ಕಲ್ಪಿಸಿಕೊಟ್ಟಿದೆ. ವಿವಿಯ ಬೋಧಕ ಸಿಬ್ಬಂದಿಗೆ ಯುಜಿಸಿ ವೇತನ ನೀಡುತ್ತಿದೆ. 5ನೇ ವೇತನ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 50 ವರ್ಷಗಳಿಗೆ ಹೆಚ್ಚಳ ಮಾಡಿದ ಕೀರ್ತಿ ಕೂಡ ಬಿಜೆಪಿ ಸರ್ಕಾರಕ್ಕೆ ಇದೆ ಎಂದರು.
