ರೈತರಿಗಾಗಿ ನನ್ನ ಹೋರಾಟ: ದೇವೇಗೌಡ
Posted on 20 January 2010 by murthy
ಬೆಂಗಳೂರು, ಜ.20: ತಮ್ಮ ಹೋರಾಟ ನೈಸ್ ಸಂಸ್ಥೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ರಾಜ್ಯಾದ್ಯಂತ ರೈತರ ಸಮಸ್ಯೆಗಳ ವಿರುದ್ದ ಹೋರಾಟ ಕೈಗೊಳ್ಳುವುದಾಗಿ ಇಂದಿಲ್ಲಿ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು ದೇವೇಗೌಡರು ನೈಸ್ ಸಂಸ್ಥೆ ವಿರೋಧಿ ಹೋರಾಟಕ್ಕೆ ಮಾತ್ರ ಸೀಮಿತ ಎಂಬ ಭಾವನೆ ಬೇಡ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ರೈತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು.
ಜ.22ರಂದು ಬಿಜಾಪುರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಅನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವದಾಗಿ ತಿಳಿಸಿದರು.
ನೆರೆ ಪೀಡಿತ ಬಿಜಾಪುರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದ್ದು, ಆನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವದಾಗಿ ತಿಳಿಸಿದರು.
ನೆರೆಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ ಪರಿಹಾರ ಕಾರ್ಯಗಳಲ್ಲಾಗಿರುವ ಅನ್ಯಾಯ, ಗ್ರಾಮಗಳ ಸ್ಥಳಾಂತರ ಸಮಸ್ಯೆ ಅರಿಯಲು ಖುದ್ದಾಗಿ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಪರೀಶೀಲಿಸಿ ಸಂಕಷ್ಟಗಳನ್ನು ಆಲಿಸುತ್ತೇವೆ ಎಂದರು. ಆನಂತರ ರಾಜ್ಯ ಮಟ್ಟದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಸಂಘಟಿಸಲಾಗು ವದು ಎಂದು ಹೇಳಿದರು. ಜ.23,24,25 ಹಾಗೂ 28ರಂದು ಪ್ರವಾಸ ಕೈಗೊಳ್ಳುತ್ತೇನೆ ಎಂದರು.
ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿದ್ದರೂ ಜನಸಾಮಾನ್ಯರ ಸಮಸ್ಯೆಗಳ ಪರ ಧ್ವನಿ ಎತ್ತಲಿದೆ ಎಂದರು.ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ವ್ಯಕ್ತಿಗತ ತೀರ್ಮಾನವನ್ನು ಕೈಗೊಂಡಿಲ್ಲ ಎಂದರು. ಸರಕಾರದ ವೇಗದ ಅಭಿವೃದ್ದಿಗೆ ಅಡ್ಡಿಯಾಗುತ್ತಿದ್ದಾರೆಂಬ ಆರೋಪವನ್ನು ನಿರಾಕರಿಸಿದ ಗೌಡರು ದೆಹಲಿ ಹಾಗೂ ಸಂಸತ್ ಸಭೆಗಳನ್ನು ಬದಿಗಿಟ್ಟು ಪ್ರತಿ ಜಿಲ್ಲೆಯ ಪ್ರತಿಯೊಂದು ಸಮಸ್ಯೆಯನ್ನು ಆಲಿಸಿದ್ದೇನೆ ಎಂದರು.
ದಾವಣಗೆರೆಯಲ್ಲಿ ನಡೆದ ಹೋರಾಟ ನಮ್ಮಿಂದ ಪ್ರೇರಣೆ ಪಡೆದದ್ದಲ್ಲ. ಅದಕ್ಕೆ ರಾಜಕೀಯ ಬಣ್ಣ ಕಟ್ಟಬೇಕಿಲ್ಲ. ಸರಕಾರ ನಡೆಸುವರರು ನಿರ್ಣಯ ಕೈಗೊಳ್ಳುವಾಗ ಜವಾಬ್ದಾರಿಯಿಂದ ವರ್ತಿಸಬೇಕೆಂದರು.
