ಮುಗಿಲು ಮುಟ್ಟಿದ ತೆಲಂಗಣಾ ಹೋರಾಟ
Posted on 20 January 2010 by murthy
ಹೈದರಾಬಾದ್, ಜ.20- ಪ್ರತ್ಯೇಕ ತೆಲಂಗಣಾ ರಾಜ್ಯ ರಚನೆ ವಿವಾದದಿಂದ ಕೊಂಚ ವಿರಾಮ ಪಡೆದಿದ್ದ ಆಂಧ್ರಪ್ರದೇಶ ಇದೀಗ ಮತ್ತದೇ ಆಸ್ಪೌಟಕ್ಕೆ ಗುರಿಯಾಗಿದೆ.
ರಾಜ್ಯ ರಚನೆ ನಿರ್ಣಯವನ್ನು ಅಂತಿಮಗೊಳಿಸುವಂತೆ ಪಟ್ಟು ಹಿಡಿದಿರುವ ತೆಲಂಗಣಾ ರಾಷ್ಟ್ತ್ರ ಸಮಿತಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ಜಂಟಿ ಕ್ರಿಯಾ ಸಮಿತಿ ಇಂದು ಅಖಂಡ ಆಂಧ್ರ ಬಂದ್ಗೆ ಕರೆ ನೀಡಿದ್ದು, ಕೆಲವಡೆ ಹಿಂಸಾಚಾರ ಮುಗಿಲು ಮುಟ್ಟಿದೆ. ಆಕ್ರೌಶ ಭರಿತ ತೆಲಂಗಣ ಪರ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲವು ಬಸ್ಗಳನ್ನು ಬೆಂಕಿಗೆ ಆಗುತಿ ಮಾಡಿದ್ದಾರೆ. 48 ಗಂಟೆಗಳ ಬಂದ್ಗೆ ಕರೆ ನೀಡಿರುವುದರಿಂದ ರಾಜಧಾನಿ ಹೈದರಾಬಾದ್ ಸೇರಿದಂತೆ ತೆಲಂಗಣ ಭಾಗದ 9 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ.
ಎಲ್ಲೆಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಸಂಪೂರ್ಣ ಬೆಂಬಲ ನೀಡುತ್ತಿರುವ ವ್ಯಾಪಾರಿಗಳು, ವಿದ್ಯಾರ್ಥಿ ಸಮುದಾಯ ಹಾಗು ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರದ ವಿರುದ್ಧ ಉಗ್ರ ಹೋರಾಟಕ್ಕೆ ಮುನ್ನುಡಿ ಬೆರೆದಿದ್ದಾರೆ.
ಮತ್ತೊಂದೆಡೆ ತೆಲಂಗಣ ರಾಜ್ಯ ರಚನೆ ನಿರ್ಣಯವನ್ನು ಅಂತಿಮ ಗೊಳಿಸುವಂತೆ ಆಗ್ರಹಿಸಿ ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಮುದಾಯ ಆತ್ಮಹತ್ಯೆಯತ್ತ ಮುಖ ಮಾಡಿದೆ. ಈಗಾಗಲೆ ವೇಣುಗೋಪಾಲ್ ರೆಡ್ಡಿ, ಸುವರ್ಣಮ್ಮ ಎಂಬ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಕಿಚ್ಚುಹಚ್ಚಿಸಿದೆ.
ರಾಜಕಾರಣಿಗಳು, ವಿದ್ಯಾರ್ಥಿ ಸಮುದಾಯವನ್ನೊಳಗೊಂಡ ಜಂಟಿ ಕ್ರಿಯಾಸಮಿತಿ ಇದೆ ದಿ.28ರೊಳಗೆ ರಾಜೀನಾಮೆ ಸಲ್ಲಿಸಿರುವ ಸಂಸತ್ ಹಾಗೂ ವಿಧಾನ ಸಭೆ ಸದಸ್ಯರ ರಾಜೀನಾಮೆಯನ್ನು ಅಂಗೀಕರಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇಂದು ಮತ್ತು ನಾಳೆ ತೆಲಂಗಣ ಜಿಲ್ಲೆಗಳಲ್ಲಿ ಬಂದ್ ಮುಂದುವರಿಸಿದ್ದು, ಪ್ರತ್ಯೇಕ ತೆಲಂಗಣ ಬಿಕ್ಕಟ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹಲವೆಡೆ ರಾಜ್ಯ ರಸ್ತೆ ಸಾರಿಗೆಯ ಬಸ್ಗಳನ್ನು ಜಖಂಗೊಳಿಸಿರುವ ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈಯರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೌಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ತಮ್ಮ ರಾಜೀನಾಮೆ ಪತ್ರಗಳನ್ನು ಸ್ವೀಕರಿಸುವಂತೆ ಆಗ್ರಹಿಸಿ ತೆಲಂಗಣ ರಾಷ್ಟ್ತ್ರ ಸಮಿತಿ ಐವರು ವಿಧಾನ ಸಭೆ ಸದಸ್ಯರು, ಪ್ರಜಾರಾಜ್ಯಂ ಓರ್ವ ಶಾಸಕ ಕಳೆದ ರಾತ್ರಿ ಸ್ಪೀಕರ ಕಿರಣಕುಮಾರ ರೆಡ್ಡಿಯವರನ್ನು ಭೇಟಿ ಮಾಡಿ 3 ದಿನಗಳೊಳಗೆ ರಾಜೀನಾಮೆ ಅಂಗೀಕರಿಸದಿದ್ದಲ್ಲಿ ಹೋರಾಟವನ್ನು ಹೆಚ್ಚಿಸಲು ಎಚ್ಚರಿಕೆ ನೀಡಿದ್ದಾರೆ.
