ಭಾರತದ ಹಿಡಿತದಲ್ಲಿ ಬಾಂಗ್ಲಾ
Posted on 20 January 2010 by murthy
ಚಿತ್ತಗಾಂಗ್, ಜ. 20: ಆರಂಭಿಕ ಗೌತಮ್ ಗಂಬೀರ್ (116) ಬಾರಿಸಿದ ದಾಖಲೆಂುು ಶತಕ ನೆರವಿನಿಂದ ಪ್ರವಾಸಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆಂುುುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಂುು ಮೊದಲ ಪಂದ್ಯ ಗೆಲ್ಲಲು ಆತಿಥೇಂುುರಿಗೆ 415 ರನ್ನುಗಳ ಬೃಹತ್ ಮೊತ್ತವನ್ನು ನಿಗದಿಪಡಿಸಿದೆ.
ಜವಾಬು ನೀಡಲಾರಂಭಿಸಿದ ಬಾಂಗ್ಲಾ ದೇಶ ನಾಲ್ಕನೇ ದಿನದಂತ್ಯಕ್ಕೆ 18 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.
ಆರಂಭಿಕ ಇಮ್ರುಲ್ ಕೇಯ್ಸ್ (1) ಹಾಗೂ ಶಹಾರ್ರಿಂುುಾರ್ ನಪೀಸ್ (21) ವಿಕೆಟಗಳು ಆತಿಥೇಂುುರಿಗೆ ನಷ್ಟವಾಗಿದ್ದು, ಪಂದ್ಯವನ್ನು ಉಳಿಸಿಕೊಳ್ಳಲು ಕಠಿಣ ಹೋರಾಟವನ್ನೇ ನಡೆಸಬೇಕಾಗಿದೆ. ಪಂದ್ಯ ಗೆಲುವಿಗಾಗಿ ಶಾಕಿಬ್ ಬಳಗಕ್ಕಿನ್ನೂ ಅಂತಿಮ ದಿನದಾಟದಲ್ಲಿ ಎಂಟು ವಿಕೆಟ್ ಬಾಕಿ ಉಳಿದಿರುವಂತೆಂುೆು 348 ರನ್ನುಗಳ ಅವಶ್ಯಕತೆಯಿದೆ. ಉತ್ತಮ ದಾಳಿ ಸಂಘಟಿಸಿದ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ತಲಾ ಒಂದು ವಿಕೆಟ್ ಕಿತ್ತಿದ್ದಾರೆ. ಆರಂಭಿಕ ತಮೀಮ್ ಇಕ್ಬಾಲ್ (23*) ಹಾಗೂ ಮಾಜಿ ನಾಂುುಕ ಮೊಹಮ್ಮದ್ ಅಶ್ರಪುಲ್ (16*) ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಂುು್ದುಕೊಂಡಿದ್ದಾರೆ.
ಇದಕ್ಕೂ ಮೊದಲು 122/1 ಎಂನಲ್ಲಿದ ದಿನದಾಟ ಆರಂಬಿಸಿದ ಬಾರತಕ್ಕೆ ಆರಂಭಿಕ ಗಂಬೀರ್ ಬಾರಿಸಿದ ಸತತ ಐದನೇ ಟೆಸ್ಟ್ ಶತಕ ಹಾಗೂ ವಿ.ವಿ.ಎಸ್ ಲಕ್ಷ್ಮಣ್(ಅಜೇಂುು 69) ಹಾಗೂ ಅಮಿತ್ ಮಿಶ್ರಾ (50) ಬಾರಿಸಿದ ಅರ್ದಶತಕಗಳ ನೆರವಿನಿಂದ 87 ಓವರುಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 413 ರನ್ನುಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಗಂಭೀರ್ ಸತತ ಐದು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸಮನ್ ರೆನಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಸಾಧನೆಂುುನ್ನು ಕ್ರಿಕೆಟ್ ದಂತಕತೆ ಆಸ್ಟ್ತ್ರೇಲಿಂುುಾದ ಡಾನ್ ಬ್ರಾಡ್ಮಾನ್, ದಕ್ಷಿಣ ಆಪ್ರಿಕಾದ ಜಾಕ್ವಾಸ್ ಕಾಲಿಸ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಂುೂಸುಪ್ ತಲುಪಿದ್ದಾರೆ.
ಈ ಪಟ್ಟಿಂುುಲ್ಲಿ ಅಗ್ರಪಂಕ್ತಿಂುುಲ್ಲಿರುವ ಬ್ರಾಡ್ಮಾನ್ ಸತತ ಆರು ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
ಸೊಗಸಾದ ಬ್ಯಾಟಿಂಗ್ ಪ್ರದರ್ಶನವಿತ್ತ ಗೌತಮ್ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಮನವೋಹಕ ಸಿಕ್ಸರ್ನ ನೆರವಿನಿಂದ 116 ರನ್ ಗಳಿಸಿದರು.
ಗಂಬೀರ್ಗೆ ಉತ್ತಮ ಬೆಂಬಲ ನೀಡಿದ ನೈಟ್ ವಾಚ್ಮ್ಯಾನ್ ಅಮಿತ್ ಮಿಶ್ರಾ ಚೊಚ್ಚಲ ಅರ್ದಶತಕ (50) ಬಾರಿಸಿದ ತಕ್ಷಣ ದೊಡ್ಡ ಹೊಡೆತಕ್ಕೆ ಕೈ ಹಾಕುವ ಮೂಲಕ ಪೆವಿಲಿಂುುನ್ ಸೇರಿಕೊಂಡರು. ಇದು ಟೆಸ್ಟ್ನಲ್ಲಿ ಮಿಶ್ರಾರಿಂದ ದಾಖಲಾದ ಸರ್ಮಾದಿಕ ಗಳಿಕೆಂುುಾಗಿದೆ.
ಗಂಭೀರ್-ಮಿಶ್ರಾ ಜೋಡಿ ಎರಡನೇ ವಿಕೆಟ್ಗೆ 98 ರನ್ನುಗಳ ಜೊತೆಂುುಾಟ ನೀಡಿದರು.
ನಂತರ ಬಂದ ಲಿವಾಲ್ಳಿ ಖ್ಯಾತಿಂುು ರಾಹುಲ್ ದ್ರಾವಿಡ್ (24) ರನೌಟಗೆ ಬಲಿಂುುಾದರು. ಮೊದಲ ಇನ್ನಿಂಗ್ಸ್ನ ಶತಕವೀರ ಬ್ಯಾಟ್ಸಮಾನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (16), ಂುುುವರಾಜ್ ಸಿಂಗ್ (25) ಹಾಗೂ ದಿನೇಶ್ ಕಾರ್ತಿಕ್ (27), ಜಹೀರ್ ಖಾನ್ (20) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಮತ್ತೊಂದೆಡೆ ಕಲಾತ್ಮಕ ಇನ್ನಿಂಗ್ಸ್ ಬೆಳಿಸಿದ ವಿ.ವಿ.ಎಸ್. ಲಕ್ಷ್ಮಣ (69*) ಅಜೇಂುು ಅರ್ಧಶತಕ ಬಾರಿಸುವ ಮೂಲಕ ಬಾರತದ ಗಡಿ 400 ದಾಟಿಸಿದರು. 89 ಎಸೆತಗಳನ್ನು ಎದುರಿಸಿದ ಲಕ್ಷ್ಮಣ ಇನ್ನಿಂಗ್ಸ್ನಲ್ಲಿ ಐದು ಬೌಂಡರಿಗಳು ಶಾಮೀಲಾಗಿತ್ತು. ಕೊನೆಗೆ ಬಂದ ಇಶಾಂತ್ ಶರ್ಮಾ 7 ರನ್ ಗಳಿಸಿ ಅಜೇಂುುರಾಗುಳಿದರು.
