Categorized | ರಾಮದುರ್ಗ

ವಿವಾಹಿತ ಮಹಿಳೆಯೊಬ್ಬಳು 3 ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ

Posted on 20 January 2010 by murthy

RAM-1-Aರಾಮದುರ್ಗ, 20-: ವಿವಾಹಿತ ಮಹಿಳೆಯೊಬ್ಬಳು ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ಮೇಲೆ ತನ್ನ 3 ಮಕ್ಕಳ ಜೊತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬೆನ್ನೂರ ಗ್ರಾಮದಲ್ಲಿ ಇಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಎಂದರೆ ಹನಮವ್ವ ದ್ಯಾಮಣ್ಣಾ ಕುರಿ(25) ಇವ ಮಕ್ಕಳಾದ 4 ವರ್ಷದ ಹೆಣ್ಣು ಮಗು ಪವಿತ್ರಾ, 2 ವರ್ಷದ ಗಂಡು ಮಗು ಬಸವರಾಜ ಮತ್ತು ಒಂದು ವರ್ಷದ ಪ್ರವೀಣ ಎಂದು ತಿಳಿದು ಬಂದಿದೆ.
ಮೂಲತಃ ತಾಲೂಕಿನ ಉಮತಾರ ಗ್ರಾಮದವಳಾದ ಹಣಮವ್ವಳನ್ನು ಕಳೆದ 6-7 ವರ್ಷಗಳ ಹಿಂದೆ ಬೆನ್ನೂರ ಗ್ರಾಮದ ದ್ಯಾಮಣ್ಣ ಶಿದ್ದಪ್ಪ ಕುರಿ ಎಂಬವನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇಂದು ಗಂಡ ಚಿಕ್ಕತಡಸಿ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಅಲ್ಲದೆ ಮಾವ ಶಿದ್ದಪ್ಪ ಕುರಿ ಮೇಯಿಸಲು ಹೋದ ಸಂಧರ್ಭದಲ್ಲಿ ತನ್ನ 3 ಮಕ್ಕಳನ್ನು ಗ್ರಾಮದ ಸಮೀಪವಿರುವ ಮಲಪ್ರಭಾ ನದಿಯಲ್ಲಿ ಮೊದಲು ಮೂರು ಮಕ್ಕಳನ್ನು ನದಿ ಎಸೆದು ನಂತರ ತಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿರುವದಿಲ್ಲ ಈ ಪ್ರಕರಣ ರಾಮದುರ್ಗ ಪೋಲಿಸ ಠಾಣೆಯಲ್ಲಿ ಪಿ.ಎಸ್.ಐ ಅರುಣ ಮುರಗುಂಡಿ ದಾಖಲಿಸಿಕೊಂಡಿದ್ದಾರೆ.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಚೀನಾ ಓಪನ್ ಟೆನಿಸ್ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ಲೋಂಡಾ ವಾಟರ ಪಂಪ್ಹೌಸ್ ಧ್ವಂಸ ವಿಕಾಸ ಸಂಕಲ್ಪ ಉತ್ಸವ ವಿಜ್ಞಾನ ವ್ಯಾಸಂಗ ಸೈನಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives