ನೀರವ ಮೌನದಲ್ಲಿ ಶಿವಮೊಗ್ಗ
Posted on 03 March 2010 by murthy
ಶಿವಮೊಗ್ಗ, ಮಾ.2: ಪತ್ರಿಕೆಯೊಂದರಲ್ಲಿ ಬಂದಿರುವ ಲೇಖನಕ್ಕೆ ವಿರೋಧ ವ್ತಕ್ತಪಡಿಸಿದ ಕಾರಣದಿಂದ ನಿನ್ನೆ ಅಕ್ಷರಶಃ ಹೊತ್ತಿ ಉರಿದಿದ್ದ ಶಿವಮೊಗ್ಗ ನಗರ ಇಂದು ನಿಧಾನವಾಗಿ ಶಾಂತ ಪರಿಸ್ಥಿತಿಗೆ ಮರಳ ತೊಡಗಿದೆ.
ಆದರೂ ನಗರದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಇಂದೂ ಸಹ ಕಫ್ಯೂ ಮುಂದುವರೆಸಲಾಗಿದ್ದು ಅಹಿತಕರ ಘಟನೆಗಳನ್ನು ತೊಡಗಿದವರ ಮೇಲೆ ಕಂಡಲ್ಲಿ ಗುಂಡು ಹಾಕುವ ಆದೇಶವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇಂದೂ ಸಹ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸಭೆ ಸಮಾರಂಭ ಸಂತೆ ಜಾತ್ರೆಗಳನ್ನು ರದ್ದುಪಡಿಸಲಾಗಿದೆ.
ಐಜಿಪಿ ಸತ್ಯನಾರಾಯಣ ಅವರು ನಗರದಲ್ಲಿ ಇದ್ದು ರಕ್ಷಣಾ ವ್ಯವಸ್ಥೆಯ ಉಸ್ತುವಾರಿಯಲ್ಲಿ ನಡೆಸಿದ್ದಾರೆ. ನಿನ್ನೆ 25ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು ಹಲವು ಮನೆ ಅಂಗಡಿಗಳ ನಾಶಗೊಂಡಿವೆ. ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿರುವ ಸಾಧ್ಯತೆ ಇದೆ. ಬೇರೆ ಕಡೆಗಳಿಂದ ಹೆಚ್ಚಿನ ಪೊಲೀಸ್ ಬಲವನ್ನು ತರಿಸಿಕೊಳ್ಳಲಾಗಿದೆ. ಇಂದು ನಗರದಲ್ಲಿ ಅಗತ್ಯ ವಸ್ತುಗಳಾದ ಹಾಲು ಪೆಟ್ರೌಲ್ ನೀರು, ದಿನಪತ್ರಿಕೆಗಳು ಸಹ ದೊರೆತಿರುವುದಿಲ್ಲ. ರಸ್ತೆಗಳು ಜನರಿಲ್ಲದೆ ಬೀಕೋ ಎನ್ನತ್ತಿವೆ. ಎಲ್ಲಿ ನೋಡಿದರಲ್ಲಿ ಪೊಲೀಸರೆ ಕಂಡು ಬರುತ್ದಿದರು.
