ಘರ್ಷಣೆಯಿಂದಾಗಿ ಚುನಾವಣೆ ಸ್ಥಗಿತ
Posted on 07 March 2010 by murthy
ಗುಲ್ಬರ್ಗಾ, ಮಾ.6: ಗುಲ್ಬರ್ಗಾ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯ ಸಮಯದಲ್ಲಿ ಭಾಜಪ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ರದ್ದುಪಡಿಸಲಾಯಿತು.
ಇಂದು ಮುಂಜಾನೆ ಮೇಯರ್ ಚುನಾವಣೆ ಸಮಯ ನಿಗದಿಯಾಗಿತ್ತು. ಕಾಂಗ್ರೆಸ್ ಸದಸ್ಯರು ಆಸನ ವ್ಯವಸ್ಥೆಗೆ ಆಕ್ಷೇಪ ವ್ಯಕ್ತಪಡಿಸಿದರು. ಅದು ಅಲ್ಲದೆ ಕಾಂಗ್ರೆಸ್ ಬಂಡಾಯ ಸದಸ್ಯರು ಭಾಜಪ ಅಭ್ಯರ್ಥಿಯೊಂದಿಗೆ ಕೈಜೋಡಿಸಿದ್ದರಿಂದಲೂ ಕಾಂಗ್ರೆಸ್ಸಿಗರು ಆಕ್ರೌಶಗೊಂಡಿದ್ದರು. ಮಾತಿನ ಘರ್ಷಣೆ ಪ್ರಾರಂಭವಾಗಿ ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತು. ನಂತರ ಕಾಂಗ್ರೆಸ್ ಸದಸ್ಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು.
ಕೆಲ ಕಾಲ ಆ ಪ್ರದೇಶದಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಕೊನೆಗೆ ಮೇಯರ್ ಚುನಾವಣೆಯನ್ನೇ ಚುನಾವಣಾ ಅಧಿಕಾರಿಗಳು ರದ್ದುಪಡಿಸಿದರು.
ಈ ಸಮಯದಲ್ಲಿ ಉದ್ರಿಕ್ತ ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಕೆಲ ದುಷ್ಕರ್ಮಿಗಳು ಟೌನ್ ಹಾಲ ಮುಂದೆ ಕುರ್ಚಿ ಮುರಿದು ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಉದ್ರಿಕ್ತಗೊಂಡಾಗ ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದರು. ಈ ವೇಳೆ ಮಾತನಾಡಿದ ಶಾಸಕ ಕಮರೂಲ್ ಇಸ್ಲಾಂ ಅವರು ಪಾಲಿಕೆಯ ಆಯುಕ್ತರು ಭಾಜಪ ಕೈಗೊಂಬೆಯಾಗಿದ್ದಾರೆಂದು ಆಪಾದಿಸಿದ್ದರು.
