Categorized | ರಾಜ್ಯ

ಬೆಂಗಳೂರಿಗೆ ಬಂದ ಹಾಲಪ್ಪ

Posted on 15 May 2010 by murthy

halappaಬೆಂಗಳೂರು, ಮೇ 14: ಅತ್ಯಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದಿದ್ದಾರೆ.
ಇಂದು ಬೆಳಿಗ್ಗೆ ಡ್ರಿಪ್ಸ್ ಹಾಕಲಾಗಿದ್ದು ಹಾಲಪ್ಪ ಅವರನ್ನು ತಜ್ಞವೈದ್ಯರು ಹಾಗೂ ದಾದಿಯರು ಸಹಾದೊಂದಿಗೆ ಅಂಬುಲೆನ್ಸ್ದಲ್ಲಿ ಕರೆ ತರಲಾಗಿದೆ. ಬೆಳಿಗ್ಗೆ ಸುಮಾರು 5 ಗಂಟೆಗೆ ಮೆಕಡೋನ್ ಆಸ್ಪತ್ರೆಯ ವೈದ್ಯರು ಹಾಲಪ್ಪ ಅವರನ್ನು ಕುಲಂಕೂಷವಾಗಿ ತಪಾಸಣೆ ಮಾಡಿ ಓಷಧಿ ನೀಡಿದರು. ಅವರನ್ನು ದಾಖಲು ಮಾಡಲಾಗಿದ್ದ ಐಸಿಯು ವಾರ್ಡಿನಿಂದ ವಿಲ್ಚೇರ್ಮೇಲೆ ಹೊರಗೆ ತರಲಾಯಿತು. ಪೊಲೀಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ನೆರವಿನಿಂದ ಅವರು ಅಂಬುಲೆನ್ಸ್ ಹತ್ತಿದರು ಈ ಸಂದರ್ಭದಲ್ಲಿ ಕಾರಾಗೃಹದ ಆದೀಕ್ಷಕರು ಹಾಜರಿದ್ದರು. ಹಾಲಪ್ಪ ಅವರನ್ನು ಮಾತನಾಡಿಸಲು ಪತ್ರಕರ್ತರು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಮಾಧ್ಯಮದವರ ಕಡೆಗೆ ಹಾಲಪ್ಪ ಅಪ್ಪಿತಪ್ಪಿಯೂ ತಿರುಗಿ ನೋಡಲಿಲ್ಲ. ಬೆಳಗಿನ ಜಾವ 4 ಗಂಟೆಯಿಂದಲೇ ಮೆಕ್ಡೋನ್ ಆಸ್ಪತ್ರೆಯ ಮುಂಭಾಗದಲ್ಲಿ ದೊಡ್ಡ ಪತ್ರಕರ್ತರ ದಂಡೆ ಹಾಲಪ್ಪ ಅವರಿಗಾಗಿ ಕಾಯ್ದಿದ್ದರು. ಯಾವುದೇ ಉಪಯೋಗ ಆಗಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಹಾಲಪ್ಪ ಅವರು ನಿತ್ರಾಣಗೊಂಡಿದ್ದು ತೀವ್ರ ಕಳಹೀನವಾಗಿದ್ದಾರೆ. ಹಾಲಪ್ಪ ನಾಟಕೀಯ ಬೆಳವಣಿಗೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಪೊಲೀಸರು ಶರಣಾಗಿ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.
ಇದಾದ ನಂತರ ಅನಾರೋಗ್ಯದ ನಿಮಿತ್ಯ ಅವರನ್ನು ಅನಾರೋಗ್ಯದ ನಿಮಿತ್ಯ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲ್ಮಾಡಲಾಗಿತ್ತು. ಸುಮಾರು 4 ದಿನಗಳ ಕಾಲ ಅಲ್ಲಿ ಚಿಕಿತ್ಸೆ ಪಡೆದ ಹಾಲಪ್ಪ ಅವರನ್ನು ಅಲ್ಲಿಂದ ವೈದ್ಯರ ಶೀಫಾರಸ್ಸು ಮೇರೆಗೆ ಹೆಚ್ಚಿನ ಚಿಕಿತೆಗಾಗಿ ನ್ಯಾಯಾಲಯದ ಅಪ್ಪಣೆ ಪಡೆದು ಇಂದು ಬೆಂಗಳೂ ರಿಗೆ ಕರೆದು ತರಲಾಯಿತು.
ಕರುಳೀನ ತೊಂದರೆ ಉಸಿರಾಟ ಹಾಗೂ ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ಅವರ ಆರೋಗ್ಯ ಹದಗೆಟ್ಟ ಕಾರಣ ಹಾಗೂ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಆಗುತ್ತಿಲ್ಲ ಎಂಬ ಶಿವಮೊಗ್ಗ ಆಸ್ಪತ್ರೆ ವೈದ್ಯರ ಅಭಿಪ್ರಾಯದ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ ಮಾಡುವ ತೀರ್ಮಾನಕ್ಕೆ ಜೈಲು ಅಧಿಕಾರಿಗಳು ಹಾಗೂ ವೈದ್ಯರು ಬಂದಿದ್ದರು. ನಿನ್ನೆ ಶಿವಮೊಗ್ಗ ನ್ಯಾಯಾಲಯದ ಹಾಲಪ್ಪ ಅವರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲು ಒಪ್ಪಿಗೆ ಕೊಟ್ಟಿತು. ಆದರೆ ಭದ್ರತೆಯ ಕಾರಣದಿಂದ ಸಂಜೆ ವೇಳೆ ಬೆಂಗಳೂರಿಗೆ ಪ್ರಯಾಣ ಮಾಡುವದು ಸರಿಯಲ್ಲ ಎಂಬ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಸುಸಜ್ಜಿತ ಅಂಬುಲೆನ್ಸ್ ಹಾಗೂ ಶಸ್ತ್ತ್ರ ಸಜ್ಜಿತ ಭದ್ರತಾ ಪಡೆಯ ಬೆಂಗಾವಲಿನಲ್ಲಿ ಹಾಲಪ್ಪ ಅವರನ್ನು ಬೆಂಗಳೂರಿಗೆ ಕರೆದು ತರಲಾಗಿದೆ. ಈಗ ಅವರು ಪರಪ್ಪ ಅಗ್ರಹಾರ ಜೈಲಿನಲ್ಲಿ ಇದ್ದು ನಂತರ ವಿಕ್ಟೌರಿಯ ಆಸ್ಪತ್ರೆಗೆ ಸ್ಥಳಾಂತರ ಗೊಳ್ಳಲಿದ್ದಾರೆ.

1 Comments For This Post

  1. murthy Says:

    your matter is so much mistakes

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives