ಹೆತ್ತ ಮಕ್ಕಳನ್ನು ಕೊಂದ ಪಾಪಿ ಹೆತ್ತವರು
Posted on 16 May 2010 by murthy
ಬೆಳಗಾವಿ/ನೆಲಮಂಗಲ, ಮೇ 15: ಕುಟುಂಬ ಕಲಹ ಅಥವಾ ವೈಯಕ್ತಿಕ ವಿಚಾರಗಳಿಂದ ಮನನೊಂದ ಹೆತ್ತವರು ಅಮಾಯಕ ಮಕ್ಕಳನ್ನೇ ಕೊಂದ ಹಾಕುವ ಅಮಾನುಷ ಘಟನೆಗಳ ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ.
ಕಳೆದ ರಾತ್ರಿಯಿಂದೆಚೆಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿ ಹಾಗೂ ನೆಲಮಂಗಲಗಳಲ್ಲಿ ಇದೇ ಮಾದರಿಯ ಎರಡು ಪ್ರಕರಣಗಳು ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಡಗಲಿಯಲ್ಲಿ ಜನ್ಮ ಕೊಟ್ಟ ತಂದೆಯೇ ತನ್ನಿಬ್ಬರ ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 35 ವರ್ಷದ ಅರವಿಂದ ದೇಸಾಯಿ ತನ್ನ ಮಕ್ಕಳಾದ 8 ವರ್ಷದ ಶೂಷಾಂತ 6 ವರ್ಷದ ಶಾನಿಕಾ ಅವರಿಗೆ ವಿಷ ಉಳಿಸಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದು ಘಟನೆ ನೆಲಮಂಗಲದಲ್ಲಿ ನಡೆದಿದೆ. ಸಾಂಬಾರಿಗೆ ಉಪ್ಪು ಸಮಪ್ರಮಾಣದಲ್ಲಿ ಹಾಕಲಿಲ್ಲ ಎಂದು ಪತ್ನಿಯ ಮೇಲೆ ಕೋಪಗೊಂಡ ಪತಿ ತನ್ನ ಸಿಟ್ಟನ್ನು ತೀರಿಸಿಕೊಳ್ಳಲು ಆಕೆ ತನ್ನ ಮಕ್ಕಳನ್ನೇ ಬಲಿ ತೆಗೆದುಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಬ್ಬೆಗೌಡನ ಹಳ್ಳಿ ಸಮೀಪದ ಪಾಪಯ್ಯನ ಪಾಳ್ಯ ನಿವಾಸಿ ಶಶಿಕಲಾ ಎಂಬ 24 ವರ್ಷದ ಮಹಿಳೆ ತನ್ನ ಮಕ್ಕಳಾದ 6 ವರ್ಷದ ಶಿವಕುಮಾರ್ 4 ವರ್ಷದ ಚೈತ್ರ ಅವರ ಕತ್ತು ಕೊಯ್ದು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
