Categorized | ರಾಜ್ಯ

ಹರಿದು ಬರತೊಡಗಿದೆ ಹಣದ ಹೊಳೆ

Posted on 05 June 2010 by murthy

photo_1ಬೆಂಗಳೂರು, ಜೂ. 4: ಬಂಡವಾಳ ಹೂಡಿಕೆಯ ಸದಮಾವೇಶದ ಎರಡನೇ ದಿನವಾದ ಇಂದು ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಕಂಪನಿಗಳು ಬಂಡವಾಳ ಹೂಡಲು ನಾಮುಂದು ತಾಮುಂದು ಎಂಬ ಇನ್ನಿಲ್ಲದ ಉತ್ಸಾಹವನ್ನು ತೋರಿಸುತ್ತೇವೆ ಹೀಗಾಗಿ ಕಡೆಗಳಿಗೆಯಲ್ಲಿ ಬಂದವರಿಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಚಿಂತೆ ಸರ್ಕಾರಕ್ಕೆ ಉಂಟಾಗ ತೊಡಗಿದೆ.
ನಿನ್ನೆ ಮೊದಲ ದಿನವೇ 3.29 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದ್ದು ನಿನ್ನೆಯ ಪ್ರತಿಕ್ರಿಯೆಯನ್ನು ಗಮನಿಸಿದ ದೇಶದ ಬೇರೆ ಬೇರೆ ಕಂಪನಿಗಳು ಇಂದು ಕೂಡ ಸಮಾವೇಶದಲ್ಲಿ ಭಾಗವಹಿಸಿ ರಾಜ್ಯದಲ್ಲಿ ಬಂಡವಾಳ ಹೂಡುವುದಕ್ಕೆ ಆಸಕ್ತಿ ತೋರಿಸಿವೆ. ಇದರಿಂದ ಸರ್ಕಾರದ ನೀರೀಕ್ಷೆಗೂ ಮೀರಿ ಬಂಡವಾಳ ಹರಿದು ಬರತೊಡಗಿದ್ದು ಸರ್ಕಾರಕ್ಕೆ ಈ ಉತ್ಸಾಹ ಕಂಡು ಅಚ್ಚರಿ ಉಂಟಾಗಿದೆ.
ಕಡೆ ಗಳಿಗೆಯಲ್ಲಿ ಬಂದವರಿಗೆ ಅವಕಾಶ ಕೊಡಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಲು ಮೂಲಭೂತ ಸೌಲಭ್ಯ ಇಲಾಖೆಯ ಪ್ರಧಾನಿ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಒಂದು ಉನ್ನತಮಟ್ಟದ ಸಮಿತಿ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.
ಒಟ್ಟಾರೆ 2ನೇ ದಿನ ಬಂಡವಾಳ ಹೂಡಲು ಕಂಪನಿಗಳು ಪೈಪೋಟಿಯ ಮೇಲೆ ಮುಂದೆ ಬಂದಿವೆ ಹೀಗಾಗಿ ಬಂಡವಾಳ ಹೂಡಿಕೆಗಾಗಿ ನೂಕು ನುಗ್ಗಲು ಉಂಟಾಗ ತೊಡಗಿದೆ. ಇಂದು ಸಿಮೆಂಟ್ ವಿದ್ಯುತ ಜವಳಿ ಮೂಲಭೂತ ಸೌಲಭ್ಯ ಇಂಧನ ಏರೋಸ್ಪೇಸ್ ಕೃಷಿ ಆಹಾರ ಸಂಸ್ಕರಣೆ ವಲಯದಲ್ಲಿ ಬಂಡವಾಳ ಹೂಡುವುದಕ್ಕೆ ಸಂಬಂಧಪಟ್ಟಂತೆ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.
ಇದರಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು ಆ ಪ್ರದೇಶದಲ್ಲಿಯ ಕೈಗಾರಿಕೆಯ ಚಿತ್ರಣವೇ ಮುಂದಿನ ಕೆಲ ವರ್ಷಗಳಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಸುಮಾರು 5 ಲಕ್ಷ ಜನರಿಗೆ ಇದರಿಂದ ಉದ್ಯೌಗ ದೊರೆಯುವ ನೀರೀಕ್ಷೆ ಇದೆ. ಸರ್ಕಾರದ ನೀರೀಕ್ಷೆಗೂ ಮೀರಿ ಹೆಚ್ಚಿನ ಬಂಡವಾಳ ಹಾಗೂ ಉದ್ಯೌಗ ಸೃಷ್ಠಿಯಾಗುತ್ತಿರುವ ಬಗ್ಗೆ ಸರ್ಕಾರ ಫುಲ್ ಖುಷ್ಯಾಗಿದೆ.
ಒಪ್ಪಂದ ಮಾಡಿಕೊಂಡಿರುವಂತೆ ಬೆಂಗಳೂರಿನಲ್ಲಿ ಶೇ. 30ರಷ್ಟು ಹಾಗೂ ಉತ್ತರ ಕರ್ನಾಟಕದಲ್ಲಿ ಶೇ. 70 ರಷ್ಟು ಬಂಡವಾಳ ಹೂಡಿಕೆಯಾಗಲಿದೆ. ಇದರಿಂದಾಗಿ ಕಳೆದ ಹಲವಾರು ದಶಕಗಳಿಂದ ಹಿಂದುಳಿದ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಮಾಜಿಕ ಆರ್ಥಿಕ ಜೀವನ ಬದಲಾದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಆರ್ಥಿಕವಾಗಿ ಮತ್ತು ಕೈಗಾರಿಕೆ ರಂಗದ ಪ್ರಗತಿಯ ಹೆಜ್ಜೆ ಇಡುವ ದಿನಗಳು ಈಗ ಹತ್ತಿರವಾಗಿದೆ.
ಇದರಿಂದ ಸರ್ಕಾರ ಈ ಸಮಾವೇಶ ನಡೆಸಲು ಪಟ್ಟಿರುವ ಕಷ್ಟಕ್ಕೆ ಉತ್ತಮ ಪ್ರತಿಫಲ ದೊರೆದಂತಾಗಿದ್ದು ಸರ್ಕಾರಕ್ಕೆ ಸಂಪೂರ್ಣ ತೃಪ್ತಿಯನ್ನು ತಂದಿದೆ.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives