ಕಂತ್ರಿ ನಾಯಿ ಕಂಟ್ರಿ ನಡುಗಿಸಿತ್ತು
Posted on 06 June 2010 by murthy
ಬೆಂಗಳೂರು, ಜೂ.5: ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದ್ದು ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಹಾರಿಸಿದ್ದ ಗುಂಡಿನ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಕೊನೆಗೂ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು 29 ರಂದು ಸಂಜೆ ಆಶ್ರಮದಲ್ಲಿ ಸತ್ಸಂಗ ಕಾರ್ಯಕ್ರಮ ಮುಗಿಸಿ ರವಿಶಂಕರ ಗುರೂಜಿ ಅವರು ಹೊರಗೆ ಹೊರಟ ಸಂದರ್ಭದಲ್ಲಿ ಹಾರಿ ಬಂದ ಗುಂಡು ವಿಶ್ವಾದ್ಯಂತ ಭಾರಿ ಕುತೂಹಲ ಆತಂಕ ಮೂಡಿಸಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದರು. ಜೊತೆಗೆ ಸ್ವಾಮೀಜಿ ಅವರಿಗೆ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.
ಆದರೆ ಇದೀಗ ಪೊಲೀಸರ ತನಿಖೆಯಿಂದ ಇದೊಂದು ನಾಯಿ ಕೋಳಿ ಕತೆಯಾಗಿರುವುದು ಗೊತ್ತಾಗಿದೆ. ಆಶ್ರಮದಲ್ಲಿ ಕಂಡು ಬಂದ ನಾಯಿಯನ್ನು ಓಡಿಸುವದಕ್ಕಾಗಿ ಈ ಗುಂಡು ಹಾರಿಸಲಾಗಿತ್ತು. ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಡಾ ಅಜಯಕುಮಾರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಆರ್ಟ್ ಆಪ್ ಲಿವಿಂಗ್ ಆಶ್ರಮದ ಶೂಟ್ಓಟ್ಪ್ರಕರಣ ವನ್ನು ಎಳೆಎಳೆಯಾಗಿ ವಿವರಿಸಿ ದರು.
ಆಶ್ರಮದ ಎದುರಿನಲ್ಲಿ ಜೆಪಿ ನಗರ ನಿವಾಸಿ ಅಂಬೇಢ್ಕರ್ ಡೆಂಟಲ್ ಕಾಲೇಜಿನ ಅಧ್ಯಕ್ಷ ಡಾ ಮಹದೇವ ಪ್ರಸಾದ್ ಎಂಬುವರ ಫಾರಮ್ ಹೌಸ್ ಇದೆ ಅಲ್ಲಿಯವರೆಗೆ ಕೋಳಿ ಫಾರಂ ಸಹ ಇಟ್ಟುಕೊಂಡಿದ್ದಾರೆ. ಮೇ 29 ರಂದು ಸಂಜೆ ಫಾರ್ಮಗೆ ಬಂದಿದ್ದ ಪ್ರಸಾದ್ ಅವರು ಕೋಳಿ ಫಾರಮ್ ಕಡೆ ಬೀದಿ ನಾಯಿಗಳು ಹೋಗುತ್ತಿದ್ದುದ್ದನ್ನು ಕಂಡು ಅವುಗಳನ್ನು ಓಡಿಸಲು ಗುಂಡು ಹಾರಿಸಿದ್ದಾರೆ. ನಾಯಿ ಓಡಿಸಲು ಹಾರಿಸಿದ ಗುಂಡು ಸತ್ಸಂಗ ಕಾರ್ಯಕ್ರಮ ಮುಗಿಸಿ ಆಶ್ರಮದಿಂದ ಹೊರಗೆ ಹೊರಟ ರವಿಶಂಕರ ಗುರೂಜಿ ಅವರತ್ತ ತೂರಿ ಬಂದಿತ್ತು ಅವರ ಶಿಷ್ಯ ವಿನಯ್ನ ಬಲಗಾಲ ತೊಡೆಗೆ ತಾಗಿದೆ. ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಶ್ವಾನದಳ ವಿಧ್ಯಾಂಸಕ ಕೃತ್ಯ ತಪಾಸಣಾ ತಂಡಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದವು.
ವಿಧಿ ವಿಜ್ಞಾನ ಪ್ರಯೋಗಾಲದಯ ವರದಿಯಿಂದ ವಿನಯ್ಗೆ ಗುಂಡು ತಗಲುವ ಹೊತ್ತಿಗೆ ಯಾವುದೇ ಗಟ್ಟಿ ವಸ್ತುವಿಗೆ ತಾಗದೆ ಇದ್ದದು ಹಾಗೂ ತನ್ನ ವೇಗ ಕಳೆದುಕೊಂಡಿದ್ದು ಗೊತ್ತಾಗಿದೆ.
ಪ್ರಸಾದ ಅವರು 32 ಬಂದೂಕಿಗೆ ಪರವಾನಿಗೆ ಹೊಂದಿದ್ದು ಆಗಾಗ ನಾಯಿ ಓಡಿಸಲು ಇದನ್ನು ಬಳಸುತ್ತಿದ್ದರು. ಘಟನಾ ದಿನಕ್ಕೂ ಎರಡು ದಿನಗಳ ಮೊದಲು ನಾಯಿ ಓಡಿಸಲು ಅವರು ಗುಂಡು ಹಾರಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ದೊರೆತ ಗುಂಡು ಆಯುದ ತಯಾರಿಕಾ ಸಂಸ್ಥೆಯಲ್ಲಿ ಉತ್ಪಾದನೆಯಾಗಿರುವುದು ಎಂದು ಮಹಾನಿರ್ದೇಶಕರು ಹೇಳಿದ್ದಾರೆ. ಪ್ರಸಾದ ಅವರು ನಾಯಿ ಓಡಿಸಲು ಗುಂಡು ಹಾರಿಸಿದ್ದರೂ ನಾಯಿ ತಪ್ಪಿಸಿಕೊಂಡು ಪರಾರಿಯಾಗಿದೆ. ನಂತರ ಅವರು ಕುಟುಂಬ ಸಮೇತ ಜೆ.ಪಿ. ನಗರದ ತಮ್ಮ ನಿವಾಸಕ್ಕೆ ಹಿಂತುರಿಗಿದ್ದಾರೆ. ಗುಂಡು ಹಾರಿಸಿದ ಸ್ಥಳದಿಂದ ಆಶ್ರಮದ ದ್ವಾರಗಳಾಗಲಿ ಸತ್ಸಂಗ ನಡೆಯುತ್ತಿದ್ದ ಸ್ಥಳವಾಗಲಿ ಕಾಣುವದಿಲ್ಲ. ಪಸ್ತುತ ತಲಘಟ್ಟಪುರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆಯತ್ನ ಪ್ರಕರಣವನ್ನು ಈಗ ಹಿಂದಕ್ಕೆ ಪಡೆಯಲಾಗಿದೆ ಎಂದು ಅಜಯಕುಮಾರಸಿಂಗ್ ಹೇಳಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿಯನ್ನು ಯಾರೊಬ್ಬರು ಕಂಡಿರಲಿಲ್ಲವಾದ್ದರಿಂದ ಈ ಪ್ರಕರಣ ಬಹಳಷ್ಟು ನಿಗೂಢವಾಗಿತಲ್ಲದೆ ಕುತೂಹಲಕಾರಿಯಾಗಿತ್ತು. ನಿದ್ದೆ ಕೆಡಿಸಿದ್ದ ಈ ಪ್ರಕರಣದ ತನಿಖೆಯ ಕೈಗೊಂಡ ಪೊಲೀಸರು ಆಶ್ರಮದ ಸುತ್ತಮುತ್ತ ಇರುವ ಜಮೀನುಗಳ ಮಾಲೀಕರ ಯಾರ್ಯಾರು ರಿವಾಲ್ವರ್ ಹೊಂದಿದ್ದಾರೆ ಎಂಬ ಬಗ್ಗೆ ಪರೀಶೀಲನೆ ಮಾಡಿದ್ದಾರೆ ಆ ಸಮಯದಲ್ಲಿ ಆಶ್ರಮದ ಎದುರಿನ ಫಾರಮ್ ಮಾಲೀಖ ಮಾದೇವ ಪ್ರಸಾದ್ ರಿವಾಲ್ವರ್ ಹೊಂದಿದ್ದು ಪತ್ತೆಯಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ಘಟನೆ ಬಯಲಾಗಿದೆ. ವಿಷಯ ಗೊತ್ತಿದ್ದರು ಏತಕ್ಕಾಗಿ ಈವರೆಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಮಹಾದೇವ ಅವರನ್ನು ಪ್ರಶ್ನೆ ಮಾಡಿದಾಗ ಆ ಸಮಯದಲ್ಲಿ ತಾವು ಹಾರಿಸಿದ ಗುಂಡು ಆಶ್ರಮದತ್ತ ತೂರಿ ಹೋಗಿದೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಹೇಳಿದರು.
