Categorized | ರಾಜ್ಯ

ವೈಫಲ್ಯ ಮುಚ್ಚಿಕೊಳ್ಳಲು ಸರ್ಕಾರದ ಷೋ

Posted on 06 June 2010 by murthy

ಬೆಂಗಳೂರು, ಜೂ.5: ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಂಡವಾಳ ಹೂಡಿಕೆ ಸಮಾವೇಶದ ಮೂಲಕ ಮೇಕಪ್ ಮಾಡಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿಯನ್ನು ಮಾಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ ಜನರಿಗೆ ನೆಟ್ಟಗೆ ವಿದ್ಯುತ್ ಕೊಡ್ತಾಯಿಲ್ಲ ರಾಜ್ಯ ಕಗ್ಗತ್ತಲೆಯಲ್ಲಿದೆ. ಮನೆ ಕಳೆದುಕೊಂಡಿರುವ ಮನೆ ನೆರೆ ಸಂತ್ರಸ್ತರ ಗೋಳು ಕೇಳುವವರೆ ಇಲ್ಲದಂತಾಗಿದೆ. ಅವರಿಗೆ ಒಂದು ಮನೆ ಕಟ್ಟಿಕೊಟ್ಟಿಲ್ಲ ಎಂದು ಟೀಕಾ ಪ್ರಹಾರ ಮಾಡಿದರು.
ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರು ಎಸ್.ಎಂ.ಕೃಷ್ಣಾ ಅವರಂತೆ ಸೂಟುಬೂಟು ಹಾಕಿ ಮೇಕಪ್ ಮಾಡಿಕೊಂಡು ಸಮಾವೇಶದಲ್ಲಿ ಮಿಂಚಿದ್ದೆ ದೊಡ್ಡ ಭಾಗ್ಯವಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
4 ಲಕ್ಷ ಕೋಟಿ ರೂಪಾಯಿ ಬಂಡವಾಳ 10 ಲಕ್ಷ ಜನರಿಗೆ ಉದ್ಯೌಗ ಇದೆಲ್ಲ ಬರಿ ಬೋಗಳೆಯಾಗಿದೆ ಕೈಗಾರಿಕೆ ಹೆಸರಿನಲ್ಲಿ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಾವು ಅವಕಾಶ ನೀಡುವದಿಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ರೈತರು ತಜ್ಞರು ರಾಜಕಾರಣಿಗಳೊಂದಿಗೆ ಚರ್ಚೆ ಮಾಡಿ ಒಂದು ಸಮಗ್ರ ನೀತಿಯನ್ನು ಜಾರಿಗೆ ತರಬೇಕು ಈಗಿನ ಸರ್ಕಾರದ ನೀತಿ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವಂತೆ ಇದೆ ಎಂದರು.
ರಾಜ್ಯಪಾಲರ ಬಗ್ಗೆ ಭಾಜಪ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಟೀಕೆ ಮಾಡಿರುವುದು ಅವರ ಘನತೆಯ ತಕ್ಕದ್ದಲ್ಲ ಭಾರಿ ಗರ್ವ ಮತ್ತು ಅಹಂಕಾರದಿಂದ ಅವರು ಮಾತನಾಡಿದ್ದಾರೆ. ಒಂದು ಪಕ್ಷದ ಅಧ್ಯಕ್ಷರು ಎಂಬುದನ್ನು ಮರೆತು ಸಚಿವ ಜನಾರ್ಧನರೆಡ್ಡಿ ಶೈಲಿಯಲ್ಲಿ ಮಾತನಾಡಿದ್ದಾರೆ ಎಂದರು. ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives