Categorized | ರಾಜ್ಯ

ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿಎಂ ಮುಂಬೈ ಪ್ರಯಾಣ

Posted on 06 June 2010 by murthy

ಬೆಂಗಳೂರು, ಜೂ. 5: ಪ್ರಮುಖ 3 ಪಕ್ಷಗಳಿಗೂ ಕಗ್ಗಂಟಾಗಿ ಪರಿಣಮಿಸಿರುವ ರಾಜ್ಯಸಭೆಯ ಚುನಾವಣೆಯ 4ನೇ ಅಭ್ಯರ್ಥಿ ಯಾರೂ ಎಂಬುದಕ್ಕೆ ದಿನಕ್ಕೊಂದು ಹೆಸರುಗಳು ಕೇಳಿ ಬರತೊಡಗಿವೆ. ಸದ್ಯಕ್ಕೆ ನೂತನವಾಗಿ ಮತ್ತು ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ಎಂದರೆ ಖ್ಯಾತ ಉದ್ಯಮಿ ಸರ್ಜನ್ ಜಿಂದಾಲ್ ಅವರದಾಗಿದೆ.
ಹೂಡಿಕೆದಾರರ ಸಮಾವೇಶದ ಬಳಿಕ ನಿನ್ನೆ ರಾತ್ರಿ ಮುಂಬೈಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಪುಟದ ಸಹೋದ್ಯೌಗಿಗಳು ಸರ್ಜನ್ ಜಿಂದಾಲ ಅವರನ್ನು ಕಣಕ್ಕೆ ಇಳಿಸಲು ಅವರು ಮನವೊಲಿಸಲು ಮುಂದಾಗಿದ್ದಾರೆ. ಕಾರ್ಯಕ್ರಮ ನಿಮಿತ್ಯ ಮುಖ್ಯಮಂತ್ರಿ ಮುಂಬೈಗೆ ಹೋಗಿದ್ದಾರೆಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿನ ಉದ್ದೇಶ ಜಿಂದಾಲ್ ಅವರನ್ನು ಭೇಟಿಯಾಗಿ ರಾಜ್ಯಸಭಾ ಚುನಾವಣೆಗೆ ಅವರನ್ನು 4ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಮನವೊಲಿಸುವದೇ ಆಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ ಈಗಾಗಲೇ ಭಾಜಪದಿಂದ ಪಕ್ಷದ ರಾಷ್ಟ್ತ್ರೀಯ ಉಪಾಧ್ಯಕ್ಷ ವೆಂಕಯ್ಯನಾಯ್ಡು ಮಾಜಿ ಸಂಸದ ಮತ್ತು ರಾಜ್ಯ ಘಟಕದ ವಕ್ತಾರ ಆಯನೂರು ಮಂಜುನಾಥ ಕಣಕ್ಕೆ ಇಳಿಸಿದ್ದಾರೆ.
ಕಾಂಗ್ರೆಸ್ದಿಂದ ಆಸ್ಕರ ಫರ್ನಾಂಡಿಸ್ 3ನೇ ಅಭ್ಯರ್ಥಿಯ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದ್ದಾರೆ. ಭಾಜಪದ ಸಂಖ್ಯಾ ಬಲವನ್ನು ಆಧರಿಸಿ ಹೇಳುವುದಾದರೆ ತನ್ನ ಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಶಸ್ತ್ಯ 90 ಮತಗಳು ಬಿದ್ದರು ಹೆಚ್ಚುವರಿಯಾಗಿ 27 ಮತಗಳು ಉಳಿಯುತ್ತವೆ ಇದರ ಜೊತೆಗೆ ಐವರು ಪಕ್ಷೇತರ ಸಚಿವರು ಭಾಜಪ ನಿಲ್ಲಿಸುವ ಅಭ್ಯರ್ಥಿಗೆ ಮತ ಹಾಕುವ ಮುಂದಾದರೆ ಭಾಜಪ ಬತ್ತಳಿಕೆಯಲ್ಲಿ 32 ಮತಗಳು ಉಳಿಯುತ್ತವೆ ರಾಜ್ಯಸಭೆಗೆ ಆಯ್ಕೆಯಾಗಲುಕನಿಷ್ಟ 45 ಮತಗಳು ಅಗತ್ಯವಿರುವುದರಿಂದ ಸಜ್ಜನ್ ಜಿಂದಾಲ್ ಆಯ್ಕೆ ಜೆಡಿಎಸ್ ತೆಗೆದುಕೊಳ್ಳುವ ನಿರ್ಣಯದ ಮೇಲೆ ಅವಲಂಬನೆಗೊಂಡಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಪಕ್ಷದ 27 ಸದಸ್ಯರು ಇದ್ದಾರೆ. ಆದರೆ ಅದು ರಾಜ್ಯಸಭೆಗೆ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಒಂದು ವೇಳೆ ಸಜ್ಜನ್ ಜಿಂದಾಲ್ ಕಣಕ್ಕೆ ಇಳಿಯಲು ಒಪ್ಪಿದರೆ ಜೆಡಿಎಸ್ ಬೆಂಬಲ ಅನಿವಾರ್ಯವಾಗುತ್ತದೆ.
ಕರ್ನಾಟಕದ ಜೊತೆ ಮೊದಲಿನಿಂದಲೂ ಅವಿನಾಭಾವ ಸಂಬಂಧ ಹೊಂದಿರುವ ಜಿಂದಾಲ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಮಾತುಕತೆ ನಡೆಸಿ ಫಲಪ್ರದವಾದರೆ ಮಾತ್ರ ತಾವು ಕಣಕ್ಕೆ ಇಳಿಯುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಳೆ ಮುಂಜಾನೆಯ ಒಳಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಂದಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಾರೆ ಎಂಬುದು ಈಗ ನೀರೀಕ್ಷೆಯ ಸಂಗತಿಯಾಗಿದೆ. ಜೆಡಿಎಸ್ ಜಿಂದಾಲ್ ಸ್ಪರ್ಧೆಗೆ ಹಸಿರುನಿಶಾನೆ ತೋರಿಸಿದರೆ ಜಿಂದಾಲ್ ಅವರ ಆಯ್ಕೆಯ ಹಾದಿ ಸುಗಮವಾಗುತ್ತದೆ.
ಇದರ ಮಧ್ಯೆ ರಾಜ್ಯಸಭೆ ಚುನಾವಣೆಗೆ 4ನೇ ಅಭ್ಯರ್ಥಿಯಾಗಿ ಸರ್ವೌಚ್ಚ ನ್ಯಾಯಾಲಯದ ಖ್ಯಾತ ವಕೀಲ ರಾಮ್ ಜಟ್ಮಲಾನಿ ಹಾಗೂ ಉದ್ಯಮಿ ವಿಜಯಮಲ್ಯ ಅವರ ಹೆಸರುಗಳು ಕೇಳಿ ಬುರತ್ತಿವೆ.

0 Comments For This Post

1 Trackbacks For This Post

  1. JUSTIN Says:


    Pillspot.org. Canadian Health&Care.No prescription online pharmacy.Special Internet Prices.Best quality drugs. Low price drugs. Buy pills online

    Buy:Actos.Nexium.Human Growth Hormone.100% Pure Okinawan Coral Calcium.Valtrex.Zyban.Accutane.Retin-A.Zovirax.Synthroid.Petcam (Metacam) Oral Suspension.Mega Hoodia.Arimidex.Prevacid.Lumigan.Prednisolone….

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives