ವಿಶ್ವನಾಥರಿಗೆ ದತ್ತ ತಿರುಗೇಟು
Posted on 07 June 2010 by murthy
ಬೆಂಗಳೂರು, ಜೂ.6: ರಾಜ್ಯಸಭೆ ಚುನಾವಣೆಗೆ ಎರಡನೇ ಅಭ್ಯರ್ಥಿಯನ್ನು ಕಣಕೆ ಇಳಿಸಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡನೇ ಅಭ್ಯರ್ಥಿಯ ಆಯ್ಕೆ ನಿರ್ಧಾರ ಪಕ್ಷದ ಏಕಮಾನ್ಯ ಬಿಟ್ಟ ವಿಷಯವಾಗಿದೆ ಎಂದರು. ಜೆಡಿಎಸ್ ಜೊತೆಗಿನ ಮೈತ್ರಿ ವಿಷಯ ಪ್ರಸ್ತಾಪಿಸಿದ ಅವರು ಮೈತ್ರಿಗೆ ಹಿನ್ನೆಡೆಯಾಗಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕು. ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು. ಕಾಂಗ್ರೆಸ್ ಹಿರಿಯ ಧುರೀಣ ಆಸ್ಕರ್ ಫರ್ನಾಂಡಿಸ್ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. 2ನೇ ಅಭ್ಯರ್ಥಿಯ ಪರೀಶೀಲನೆ ನಡೆಯತೊಡಗಿದೆ ಎಂದರು.
