ಗರ್ಭಿಣಿಯಾದ ಯುವತಿ ;ಆಸ್ಪತ್ರೆಗೆ ದಾಖಲು
Posted on 07 June 2010 by murthy
ಬೆಳಗಾವಿ, ಜೂ.6: ಮಾತು ಬಾರದ 22 ಹರೆಯದ ಯುವತಿಯೋರ್ವಳ ಮೇಲೆ ಕಾಮುಕನೋರ್ವ ಅತ್ಯಾಚಾರ ನಡೆಸಿದ್ದಾರಿಂದ ನತದೃಷ್ಟ ಯುವತಿ ಗರ್ಭಿಣಿಯಾಗಿದ್ದು ರವಿವಾರ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾಳೆ.
ಯುವತಿಯನ್ನು ಮುಜಾವರ ಬೀದಿಯ ರಹವಾಸಿ ಎನ್ನಲಾಗಿದ್ದು, ಈಕೆಯ ಮುಗ್ಧತನ ಹಾಗೂ ಮಾತು ಬಾರದ್ದನ್ನು ಬಳಸಿಕೊಂಡು ಕಾಮುಕ ವ್ಯಕ್ತಿ ಯುವತಿಯನ್ನು ಬಲತ್ಕರಿಸಿದ್ದಾನೆ.
ಮಾತು ಬಾರದ ಕಾರಣ ವ್ಯಕ್ತಿಗಳ ಹೆಸರು ಹೇಳಲಾಗದೆ ನಡೆದ ಘಟನೆಗೆ ಪರಿತಪಿಸುತ್ತಿರುವ ಮುಖ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಯುವತಿಯ ಪಾಲಕರ ವೃದ್ದ ಚಿಂತಾಕ್ರಾಂತರಾಗಿದ್ದಾರೆ.
ಮುಗ್ದೆಯಾದ ಅನ್ಯಾಯಕ್ಕೆ ಪರಿಹಾರ ಸಿಗಬೇಕು. ಕಾಮುಕ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಪೊಲೀಸರು ಕಾರ್ಯತತ್ಪರರಾಗಬೇಕೆಂದು ಮುಜಾವರ ಬೀದಿಯ ರಹವಾಸಿಗಳು ಒತ್ತಾಯಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೋರ್ವಳು ತನ್ನ ಮೇಲೆ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಅಶೋಕ ಕೋಪರ್ಡೆ ಎಂಬುವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
