Categorized | ಬೆಳಗಾವಿ

ಮೈಸೂರು ದಸರಾ ಉತ್ಸವಕ್ಕೆ ಚಾಲನೆ

Posted on 20 September 2009 by Venkatesh

Mysore dasara    ಮೈಸೂರು, 19- ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಜೀವನ ಕಲೆ ಪ್ರತಿಷ್ಠಾನದ  ಸಂಸ್ಥಾಪಕ ರವಿ ಶಂಕರ ಗುರೂಜಿ ಇಂದು ಚಾಮುಂಡಿ ಬೆಟ್ಟದಲ್ಲಿಯ ವೇದಿಕೆಯ ಎಡಭಾಗದಲ್ಲಿ ಸ್ಥಾಪಿಸಲಾಗಿರುವ ನಾಡ ಅಧಿದೇವತೆಗೆ  ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

      ಇಂದು ಬೆಳಿಗ್ಗೆ 10.55 ಕ್ಕೆ ವೃಶ್ಛಿಕ ಲಗ್ನದಲ್ಲಿ 10 ದಿನಗಳು ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಉದ್ಘಾಟನಾ ಸಮಾರಂಭದಲ್ಲಿ  ನೂರಾರು ವಿದೇಶಿಯರು ಪಾಲ್ಗೊಂಡಿದ್ದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ರವಿ ಶಂಕರ ಗುರೂಜಿ ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪ ನವರು  ಚಾಮುಂಡೇಶ್ವರಿ ಸನ್ನಿಧಿ ಯಲ್ಲಿ  ವಿಶೇಷ ಪೂಜೆಯನ್ನು  ಸಲ್ಲಿಸಿದರು.  

      ಉದ್ಘಾಟನೆಗೆ ಆಗಮಿ ಸಿದ ರವಿ ಶಂಕರ ಗುರೂಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರಿಗೆ ಜಾನಪದ ಕಲಾತಂಡಗಳು ಸ್ವಾಗತ ಕೋರಿದವು.

      ಕಾರ್ಯಕ್ರಮದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ , ಕಟ್ಟಾ ಸುಬ್ರಮಣ್ಯ ನಾಯ್ಡು ಶಾಸಕರಾದ ಸತ್ಯನಾರಾಯಣ ಶಂಕರ ಲಿಂಗೇಗೌಡ  ಸಾರಾ ಮಹೇಸ, ಮಂಜುನಾಥ, ಮಹಾಪೌರ ಪುರುಷೋತ್ತಮ ಸೇರಿದಂತೆ  ಹಲವು ಗಣ್ಯರು ಮತ್ತು ಅಧಿಕಾರಿಗಳು  ಪಾಲ್ಗೊಂಡಿ ದ್ದರು.

      ಜಾನಪದ ಕಲಾ ತಂಡಗಳಾದ ಡೊಳ್ಳು ಕುಣಿತ ವೀರಗಾಸೆ, ನೃತ್ಯ, ದೇವರ ಪಟ, ಕಂಸಳೆ, ನಂದಿ ಧ್ವಜ ಕುಣಿತ, ಪೂಜಾ ಕುಣಿತ, ತಂಡಗಳು ನೆರೆದಿದ್ದ ಜನರ ಮನವನ್ನು  ಸೂರೆಗೊಂಡವು.

      ನಾಡಿನ ಜನಪದ ನೃತ್ಯದಿಂದ ಪ್ರೇರಿತರಾದ ವಿದೇಶಿಯರು ಉತ್ಸಾಹದಿಂದ ಕುಣಿದು ದಸರಾ ಉತ್ಸವಕ್ಕೆ  ಮತ್ತಷ್ಟು ಮೆರಗು  ತಂದರು.

      ದೇಶದಲ್ಲಿಯ ಕರ್ನಾಟಕದ ಸಂಸ್ಕ್ಕತಿ ಉತ್ತುಂಗದ ಸ್ಥಾನ ಪಡೆದಿದೆ. ಇಂತಹದೊಂದು  ಕೀರ್ತಿ ನಮ್ಮ ನಾಡಿಗೆ ಬರಲು  ದಸರಾ ಆಚರಣೆ ಕಾರಣವಾಗಿದೆ.  ಮುಂದಿನ ದಿನಗಳಲ್ಲಿಯೂ ನಾಡ ಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ರವಿ ಶಂಕರ ಗುರೂಜಿ ಅಭಿಪ್ರಾಯ ಪಟ್ಟರು.

      ಚಾಮುಂಡೀ ಬೆಟ್ಟದಲ್ಲಿ  ದೇವಿಗೆ  ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವದ ಆಚರಣೆಗೆ ಚಾಲನೆ ನೀಡಿದ ಅವರು ದಸರಾ ಉತ್ಸವವನ್ನು ಟೀಕಿಸುವವರಿಗೆ  ಬುದ್ದಿಮಾತು  ಹೇಳಿದರು. ಭಾರತದಲ್ಲಿ ನಾವು ಉತ್ತಮ ಸಂಸ್ಕ್ಕತಿಯನ್ನು ಹೊಂದಿದ್ದೇವೆ. ಇದರಿಂದಲೇ ಕನ್ನಡಿಗರ ಮನೋಬಲ ಉತ್ತುಂಗಕ್ಕೆ ಏರಿದೆ. ಎಂದರು. ಮಾನಸೀಕ ಸಮತೋಲನ ಮತ್ತು ನೆಮ್ಮದಿಗೆ ಹಬ್ಬ ಹರಿದಿನಗಳು ಸಹಕಾರಿ ಯಾಗಿವೆ. ದಸರಾ ಮಹೋತ್ಸವವನ್ನು  ಎಲ್ಲರೂ ಸಂಭ್ರಮದಿಂದ ಆಚರಿಸಬೇಕು. ಎಂದು ಅವರು ಕರೆ ನೀಡಿದರು.

      ಗ್ರಾಮೀಣ ದಸರಾ ಆರಂಭಿಸಿರುವುದು ನಾಡಿನ ಸಂಸ್ಕ್ಕತಿಯನ್ನು  ಪೋಷಿಸುವ ಮತ್ತು ಪರಿಚಯಿಸುವ ಪ್ರಯತ್ನವಾಗಿದೆ. ಹಳ್ಳಿಗರ ಸಂಸ್ಕ್ಕತಿಯನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಪ್ರತಿ ಹಳ್ಳಿಗರು ದಸರಾ ಉತ್ಸವದಲ್ಲಿ ಪಾಲ್ಗೌಳ್ಳಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ನಾಡಿನ  ಹಾಗೂ ದೇವಿಯ ಬಗ್ಗೆ  ಕವನ ಕಟ್ಟಿದ ರವಿಶಂಕರ ಗುರೂಜಿ  ಸಭಿಕರನ್ನು ಮಂತ್ರಮುಗ್ಧಗೊಳಿಸಿ ದರು.   

      ಸಮಾರಂಭದಲ್ಲಿ ಮಾತನಾಡಿದ  ಮುಖ್ಯ ಮಂತ್ರಿ ಯಡಿಯೂರಪ್ಪನವರು  ಕಳೆದ ಎರಡು ವರ್ಷಗಳಿಂದ  ಮೈಸೂರು ದಸರಾ  ಉತ್ಸವವನ್ನು  ಅರ್ಥ ಪೂರ್ಣವಾಗಿ ಅತ್ಯಂತ ವೈಭವದಿಂದ  ಆಚರಿಸಿಕೊಂಡು ಬರಲಾಗುತ್ತಿದೆ.  ಮುಂದಿನ ದಿನಗಳಲ್ಲಿ ಇದಕ್ಕೂ ಹೆಚ್ಚು  ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಗುವುದು  ಎಂದರು.

      ಜಿಲ್ಲಾ ಉಸ್ತುವಾರಿ ಸಚಿವ ಶೋಭಾ ಕರಂದ್ಲಾಜೆ ಅವರು ಎಲ್ಲರನ್ನು ಸ್ವಾಗರಿಸಿ ಸ್ವಾಗತ ಭಾಷಣ  ಮಾಡಿದ್ದಾರೆ.

            ಇಂದಿನಿಂದ ಆರಂಭ ವಾದ ಮೈಸೂರು ದಸರಾ 10 ದಿನಗಳ  ವರ್ಣ ರಂಜಿತ ಕಾರ್ಯಕ್ರಮಗಳನ್ನು ಅಂತ್ಯದಲ್ಲಿ ಜಂಬೂ ಸವಾರಿಯೊಂದಿಗೆ  ಅಂತ್ಯಗೊಳ್ಳಲು  ಕಾರ್ಯಕ್ರಮದಲ್ಲಿ ಸಾವಿರಾರು ಜನರು ದೇಶದ ಮೂಲೆ ಮೂಲೆಯಿಂದ ಆಗಮಿಸಿ ಪಾಲ್ಗೊಂಡಿದ್ದರು. 10 ದಿನಗಳ ಕಾಲ ಮೈಸೂರು ನಗರ ಸಡಗರ ಸಂಭ್ರಮದಲ್ಲಿ ತೇಲಾಡಲಿರುವುದನ್ನು ಕಾಣಬಹುದು.purandeshwari

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives