Categorized | ಗಂಗಾವತಿ

ಹಿಂಗಾರು ಮಳೆಯೇ ಏನು ನಿನ್ನ ಹನಿಗಳ ಲಿಲೇ..

Posted on 30 September 2009 by murthy

Bengaluru-Vidhana-Soudhaಗಂಗಾವತಿ-30: ಮುಂಗಾರು ಮಳೆಯೇ ಎನ್ನು ನಿನ್ನ ಲಿಲೆ ಎನ್ನುವಂತೆ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಈಗ ಹಿಂಗಾರು ಮಳೆಯೇ ಏನ್ನು ನಿನ್ನ ದಾರೆ ಎನ್ನುವ ಹಾಗೇ ಎನ್ನುವದಾಗಿದೆ.
ಕಳೆದ ಮೂರು ದಿನಗಳಿಂದ ಸುರಿದ ಧಾರಕಾರ ಮಳೆಗೆ ಗಂಗಾವತಿ ನಗರ ಸೇರಿದಂತೆ ತಾಲೂಕಿನಾದ್ಯಂತ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಗುಡಿಸಲು ಕೆಲವು ಮನೆಗಳು ಭಾಗಶಃ ಕುಸಿತಗೊಂಡ ಘಟನೆ ಬುಧುವಾರ ಜರುಗಿದೆ.
ಬಿಟ್ಟು ಬಿಡದ ಮಳೆಯಿಂದ ನಗರದ 27 ನೇ ವಾರ್ಡ್ನದಲ್ಲಿ ಜನತಾ ಮನೆಯು ಸಂಪೂರ್ಣ ಗೊಡೆ ಹಾಗು ಮೆಲ್ಚಾವಣಿ ಸಂಪೂರ್ಣ ಕುಸಿತಗೊಂಡಿದ್ದು ಯಾವುದೆ ಜೀವ ಹಾನಿ ಸಂಭವಿಸಿಲ್ಲ ಶಿವಪ್ಪ ಎಂಬುವರು ಈ ನಿರಾಶ್ರಿತರಾಗಿದ್ದು ಘಟನಾ ಸ್ಥಳಕ್ಕೆ ನಗರ ಸಭೆ ಸದಸ್ಯ ದೇವಪ್ಪ ಕಾಮದೊಡ್ಡಿ ಬೇಟಿ ನೀಡಿ ಶೇ.18 ರ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ಪರಿಹಾರ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ. ತಗು ದಿನ್ನು ಪ್ರದೇಶವೆನಿಸಿದ ಲಕ್ಷ್ಮಿ ಕ್ಯಾಂಪ್, ಗುಂಡಮ್ಮ ಕ್ಯಾಂಪ್, ಶಿಕ್ಷಕರ ಕಾಲೋನಿ ಮತ್ತಿತರ ಪ್ರದೇಶಗಳಲ್ಲಿನ ಮನೆಗಳು ಸಂಪೂರ್ಣ ಜಲವೃತ್ತಗೊಂಡಿವೆ ನಗರದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ ನಗರದ ಮುಖ್ಯ ರಸ್ತೆ, ಗಾಂಧಿ ವೃತ್ತ, ಗಣೇಶ ವೃತ್ತ, ಬನ್ನಿಗಿಡದ ಕ್ಯಾಂಪ್ಗಳಲ್ಲಿ ಅಧಿಕ ಪ್ರಮಾಣ ನೀರು ಸಂಗ್ರಹಗೊಂಡು ಬಸ್ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸತತ ಮಳೆಯಿಂದಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕುಂಟಿತಗೊಂಡಿದೆ ಸರ್ಕಾರಿ ಕಚೇರಿಗಳಲ್ಲಿ ಕೆಲಸವಿಲ್ಲದೆ ಅಧಿಕಾರಿಗಳು ತುಕಡಿಸಿ ಕಾಲ ಹರಣ ಮಾಡಿಬೇಕಾದ ಅನಿವಾರ್ಯತೆ ಇದೆ. ಅತ್ಯಂತ ಜನನಿ ಬೀಡ ಪ್ರದೇಶವೆನಿಸಿದ ಗಾಂಧಿ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ, ಎಪಿಎಂಸಿ ಗಂಜ ಮತ್ತಿತರ ಪ್ರದೇಶಗಳಲ್ಲಿ ಜನತೆ ಇಲ್ಲದೆ ಬೀಕೊ ಎನ್ನುತ್ತಿದೆ. ಕೆಲವು ಪ್ರದೇಶಗಳಲ್ಲಿ ಭತ್ತದ ಬೆಳೆಗಳು ಜಲವೃತಗೊಂಡಿರೆ ಗ್ರಾಮಾಂತರ ಪ್ರದೇಶವಾದ ವೆಂಟಗಿರಿ ಉಡಮಕಲ್, ಗಡ್ಡಿ ಮತ್ತಿತರ ಗ್ರಾಮದಲ್ಲಿ ಬೆಳೆದ ಸಜ್ಜಿ, ಸೂರ್ಯಕಾಂತಿ, ಹತ್ತಿ ಮತ್ತಿತರ ಬೆಳೆಗಳು ಮಳೆಯ ರಭಸಕ್ಕೆ ನಷ್ಟಗೊಂಡಿವೆ. ಒಟ್ಟಾರೆ ಸತತ ಮಳೆಯಿಂದಾಗಿ ಬೆಳಿಗ್ಗೆಯಿಂದ ಮದ್ಯಹ್ನ ನಾಲ್ಕು ಗಂಟೆಯಾದರೂ ಮನೆ ಬಿಟ್ಟು ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ.

Leave a Reply

ಅರುಣಾಚಲ ಒಟ್ಟು ಸ್ಥಾನ- 60 ಆಳ್ವಾಸ್ ನುಡಿಸಿರಿ ಇಂಜಿನಿ ಯರ್ ಚೀನಾ ಓಪನ್ ಟೆನಿಸ್ ಎ. ಕೆ. ಅಂಟನಿ ಕುಂದಿಲ್ ಕುಂದಿಲ್ ಆಯರ್ನ್ ವರ್ಕ್ಸ್ ಕೇಂದ್ರ ರಕ್ಷಣಾ ಸಚಿವ ಗಣಿದೊರೆ ಡಾ.ವೀರೇಂದ್ರ ಹೆಗ್ಗಡೆ ದೇಣಿಗೆಯ ನಿಧಿ ನವ್ಹೆಂಬರ 6 ನಾರಾಯಣಗೌಡ ನಿಧಿ ಸಂಗ್ರಹ ನೂರಕ್ಕೂ ಹೆಚ್ಚು ಜನರ ಬಂಧನ ನೂರು ಕೋಟಿ ನೆರೆ ಹಾವಳಿ ಪರಿಹಾರ ಪಾಕಿಸ್ತಾನ ಫ್ರೆಂಚ್ ಸೂಪರ್ ಸೀರೀಸ್ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಬ್ರಿಟನ್ ರಾಣಿ ಮಹಾಪೌರ ಮಹಾರಾಷ್ಟ್ತ್ರ ಒಟ್ಟು ಸ್ಥಾನ - 288 ಮಹಾರಾಷ್ಟ್ತ್ರದಲ್ಲಿ ಕಾಂಗ್ರೆಸ್ ಎನ್ಸಿಪಿ ಸಾಥ್ ಸಾಥ್ ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್ ವಾಟರ ಪಂಪ್ಹೌಸ್ ಧ್ವಂಸ ವಿಜ್ಞಾನ ವಿಕಾಸ ಸಂಕಲ್ಪ ಉತ್ಸವ ವ್ಯಾಸಂಗ ಸೈನಾ ಲೋಂಡಾ ಹರಿಯಾಣ - ಒಟ್ಟು ಸ್ಥಾನ - 90 7 8 city carporation belagavi cm cricket flood krv reddy saina nehwal yadiyurappa z.p

Archives