ಮೇಳಾವ್ಗೆ ವಿರೋಧ, ನೂರಕ್ಕೂ ಹೆಚ್ಚು ಜನರ ಬಂಧನ
ಬೆಳಗಾವಿ 26- ಎಂಈಎಸ್ನ ಮರಾಠಿ ಮಹಾಮೇಳಾವ್ನ್ನು ತಡೆಯುವಂತೆ ಆಗ್ರಹಿಸಿ ಚನ್ನಮ್ಮ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿ ಲೇಲೇ ಮೈದಾನ ಕಡೆಗೆ ಹೊರಟ ನೂರಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಲಾಯಿ ತು. ಸೋಮವಾರ ಬೆಳಿಗ್ಗೆಯಿಂದ ಲೇ ಸರಕಾರದ ಕ್ರಮದ ವಿರುದ್ಧ ಬೀದಿಗಿಳಿದ ಕರವೇ ಕಾರ್ಯಕರ್ತರ ತಂಡಗಳು ಮೇಲಿಂದ ಮೇಲೆ ಚನ್ನಮ್ಮ ವೃತ್ತಕ್ಕೆ ಬಂದು ಸರಕಾರದ ವಿರುದ್ಧ ಘೋಷಣೆ ಹಾಕಿ ಆಕ್ರೌಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ತ್ರ ಬಸ್ವೊಂದನ್ನು ಧ್ವಂಸಗೊಳಿಸುವ ವಿಫಲ ಯತ್ನವೂ ನಡೆಯಿತು. ಪ್ರತಿಭಟನೆ ನಡೆಸುವ ತಂಡಗಳನ್ನು ಬೆಳಿಗ್ಗೆಯಿಂದಲೇ ತಮ್ಮ ವಶಕ್ಕೆ [...] [...more]
