ನೂರು ಕೋಟಿಗಾಗಿ ಕ್ಯಾತೆ
ಬೆಳಗಾವಿ 12- ನಗರದ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಸರಕಾರ ಬೆಳಗಾವಿಗೆ ಬಿಡುಗಡೆ ಮಾಡಿರುವ ನೂರು ಕೋಟಿ ರೂ. ವಿಶೇಷ ಅನುದಾನಕ್ಕಾಗಿ ಸ್ಥಳೀಯ ಶಾಸಕರು ಹಾಗೂ ನಗರ ಸೇವಕರ ಮಧ್ಯೆ ಹಗ್ಗ-ಜಗ್ಗಾಟ ಮುಂದುವರೆದಿದೆ. ಶಾಸಕರ ಮೊಂಡುತನದ ವಿರುದ್ಧ ಪ್ರತಿಭಟನೆಗಿಳಿದಿರುವ ಸುಮಾರು 35 ಜನ ನಗರಸೇವಕರ ಗುಂಪು ಇಂದು ಜಿಲ್ಲಾಧಿಕಾರಿಗಳಿಗೆ ಭೆಟ್ಟಿಯಾಗಿ ನೂರು ಕೋಟಿ ಅನುದಾನದ ಉನ್ನತ ಮಟ್ಟದ ಸಮಿತಿಯ ಸಭೆ ಕರೆಯುವಂತೆ ಒತ್ತಾಯಿಸಿದರು. ಈ ಅನುದಾನದ ಬಳಕೆಗಾಗಿ ಸರಕಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ [...] [...more]
